ಧಾರವಾಡ : ಪೊಲೀಸರಿಂದ ಹಲ್ಲೆಗೊಳಗಾಗಿ ತೀವ್ರ ಅಸ್ವಸ್ಥನಾಗಿರುವ ನಿವೃತ್ತ ಅಂಗವಿಕಲ ಸೈನಿಕನ ಮೇಸ್ ಗೆ ಇಂದು ಭೇಟಿ ನೀಡಿದ ವೀರ ನಾರಿ ಮತ್ತು ಕೆಪಿಸಿಸಿ ನಿವೃತ್ತ ಮಹಿಳಾ ಸೈನಿಕರ ಸಂಘಟನೆಯ ರಾಜ್ಯಾಧ್ಯಕ್ಷ ಶ್ರೀಮತಿ ಸ್ವರೂಪರಾಣಿ ಆಗ್ರಹಿಸಿದರು.
ಕರ್ನಾಟಕ ರಾಜ್ಯದ್ಯಂತ ಪೊಲೀಸ್ ಇಲಾಖೆ ಕುರಿತು ದಿನದಿಂದ ದಿನಕ್ಕೆ ಬಹಳ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ದಿನದಲ್ಲಿ ಅರ್ಧ ಗಂಟೆಯವರೆಗೂ ಆದರೂ ಯೋಗ ಅಭ್ಯಾಸ ಮತ್ತು ಪ್ರಾಣಾಯಾಮ ಮಾಡಿಸುವ ಯೋಜನೆಯನ್ನು ಮುಖ್ಯಮಂತ್ರಿಗಳು ಜಾರಿಗೆ ತರಬೇಕೆಂದು ಸ್ವರೂಪರಾಣಿ ಈ ಸಂದರ್ಭದಲ್ಲಿ ಹೇಳಿದರು.
ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ರಜನಿ ಸುಬ್ಬಯ್ಯ ಅವರು ಮಾತನಾಡಿ ದೇಶದ ಸಂರಕ್ಷಣೆಯ ಜವಾಬ್ದಾರಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿ, ನಿವೃತ್ತರಾಗಿ ತಾಯಿನಾಡಿಗೆ ಮರಳಿದ ಸೈನಿಕರಿಗೆ ರಾಜ್ಯದಲ್ಲಿ ಸೂಕ್ತ ರಕ್ಷಣೆ ಇಲ್ಲವೆಂದು ಪೊಲೀಸ್ ಇಲಾಖೆಯ ಇತ್ತೀಚಿನ ಘಟನೆಗಳು ಸಾಬೀತು ಮಾಡಿವೆ ಎಂದರು.
ನಿವೃತ್ತ ಸೈನಿಕರಿಗೆ ರಕ್ಷಣೆ ಇಲ್ಲದ ರಾಜ್ಯದಲ್ಲಿ ಇನ್ನೂ ಸಾಮಾನ್ಯ ನಾಗರಿಕರ ಪರಿಸ್ಥಿತಿ ಏನು ಎಂದು ಪೊಲೀಸ್ ಇಲಾಖೆಯ ವಿರುದ್ಧ ಹರಿಹಾಯ್ದರು. ರಾಜ್ಯದ ಮುಖ್ಯಮಂತ್ರಿಗಳು ಸೂಕ್ತ ಕಾನೂನು ಜಾರಿಗೆ ತಂದು ಬಲಪಡಿಸಬೇಕೆಂದು ಹೇಳಿದರು. ನಿವೃತ್ತ ಅಂಗವಿಕಲ ಸೈನಿಕರ ಮೇಲೆ ಹಲ್ಲೆ ಮಾಡಿ ಪಾರಾಗಲು ಯತ್ನಿಸುತ್ತಿರುವ ಆರೋಪಿ ಪೊಲೀಸರನ್ನು ಶೀಘ್ರವೇ ಆಗ್ರಹಿಸಿದರು.
ರಾಜ್ಯ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ರಾಜ್ಯ ಮುಖ್ಯ ಸಂಯೋಜಕರಾದ ಶರಣಪ್ಪ ಕೋಟಿ ಅವರು ಮಾತನಾಡಿ ನಿವೃತ್ತ ಅಂಗವಿಕಲ ಸೈನಿಕನ ಮೇಲೆ ಹಲ್ಲೆ ಮಾಡಿದ ಆರೋಪಿ ಪೊಲೀಸರ ವಿರುದ್ಧ ಪ್ರಾಮಾಣಿಕ ಮತ್ತು ಸೂಕ್ತ ತನಿಖೆಯಾಗಲೇಬೇಕು. ಪೊಲೀಸ್ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿರುವ ಸಿಸಿ ಕ್ಯಾಮೆರಾ ಮತ್ತು ಮೊಬೈಲ್ ಗಳನ್ನು ಶೀಘ್ರವೇ ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರಿಗೆ ಒಪ್ಪಿಸಿ ಆರೋಪಿಗಳ ವಿರುದ್ಧ ನ್ಯಾಯಾಂಗ ತನಿಖೆಯಾಗಬೇಕೆಂದು ಶರಣಪ್ಪ ಕೋಟಿಗೆ ಹೇಳಿದರು.
ನಿವೃತ್ತ ಅಂಗವಿಕಲ ಸೈನಿಕನಿಗೆ ನ್ಯಾಯ ಸಿಗಬೇಕು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಗ್ರಹ ಇಲಾಖೆಯ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ಪೊಲೀಸ್ ಇಲಾಖೆ ಅಂದರೆ ರಕ್ಷಾ ಕವಚ ಎಂದು ಸಾಬೀತು ಮಾಡಬೇಕೆಂದು ಕೆಪಿಸಿಸಿಯ ರಾಜ್ಯ ಚುನಾವಣಾ ಪ್ರಚಾರ ಮುಖ್ಯ ಸಂಯೋಜಕರಾದ ಶರಣಪ್ಪ ಕೊಟ್ಟಿಗಿ ಆಗ್ರಹಿಸಿದರು.
ಘಟನೆಯ ವಿವರ : ಧಾರವಾಡದ ಸಪ್ತಾಪೂರದ ವಿವೇಕಾನಂದ ಸರ್ಕಲ್ ಬಳಿ ಸೈನಿಕ ಮೆಸ್ ನಡೆಸುವ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಮೇಲೆ ಸೆ.28 ರಂದು ರಾತ್ರಿ ನಶೆಯಲ್ಲಿ ಬಂದ ಪೊಲೀಸರು ಹಪ್ತಾ ನೀಡದ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ ಮಾರಣಾಂತಿಕ ಹಲ್ಲೆ ಮಾಡಿರುವುದು ಖಂಡನೀಯ. ಇದಲ್ಲದೇ ಮೆಸ್ ನಲ್ಲಿದ್ದ ಸಿಸಿ ಕ್ಯಾಮರಾ, ಪೀಠೋಪಕರಣ ನಾಶಪಡಿಸಿದಲ್ಲದೇ DVR ಕೂಡ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಲಾಗಿತ್ತು
ಈ ಸಂದರ್ಭದಲ್ಲಿ ಕೆಪಿಸಿಸಿ ನಿವೃತ್ತ ಸೈನಿಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಎಮ್ ಎಚ್ ಚಳ್ಳ ಮರದ, ಸಾಮಾಜಿಕ ಹೋರಾಟಗಾರರು ನಿವೃತ್ತ ಸೈನಿಕರು ಆಗಿರುವ ಬಸವರಾಜ್ ಬಡಿಗೇರ್, ಬೆಂಗಳೂರು ಸಂಘಟನೆಯ ಕಾರ್ಯದರ್ಶಿ ರಮೇಶ್ ಗೌಡ, ಪ್ರಕಾಶ್ ಕಿತ್ತೂರ್, ವಿದ್ಯಾರ್ಥಿಗಳಾದ ಸ್ನೇಹ ಧಾರವಾಡಕರ್ ಮತ್ತು ಮಾನವಿ ನಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.