ಚ. ಕಿತ್ತೂರು. ಸಮೀಪದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ ಕೊಟಭಾಗಿ ಇದರ ಇದು ವರ್ಷಗಳ ಅವಧಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಮ್ಮ ಬೆಂಬಲಿಗ ಆಡಳಿತ ಮಂಡಳಿ ನಿರ್ದೇಶಕರನ್ನು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಸತರಿಸಿ ಮಾತನಾಡಿ ಮುಂಬರುವ ದಿನಗಳಲ್ಲಿ ರೈತರ ಪರವಾಗಿ, ಅವರ ಅಭಿವೃದ್ಧಿಗೆ ಕೆಲಸ ಮಾಡಿ ಎಂದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು, ಕೊಟಭಾಗಿ ಗ್ರಾಮದ ಹಿರಿಯರು, ರೈತರು, ಸಹಕಾರಿ ಬಂದುಗಳು ಉಪಸ್ಥಿತರಿದ್ದರು.