ಭಾರತಕ್ಕೆ ದೊಡ್ಡ ಗಂಡಾಂತರ: ಕೋಡಿಮಠ ಸ್ವಾಮೀಜಿ

Ravi Talawar
ಭಾರತಕ್ಕೆ ದೊಡ್ಡ ಗಂಡಾಂತರ: ಕೋಡಿಮಠ ಸ್ವಾಮೀಜಿ
WhatsApp Group Join Now
Telegram Group Join Now

ಮೈಸೂರು, ಜುಲೈ 15: ಭಾರತಕ್ಕೆ ಬಹುದೊಡ್ಡ ಗಂಡಾಂತರ ಕಾದಿದೆ. ವಿಶ್ವವೇ ತಿರುಗಿ ನೋಡುವ ಮಟ್ಟಿನ ಆಘಾತ ಎದುರಾಗಲಿದೆ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮೈಸೂರಿನ ನಮನ್ ಫೌಂಡೇಶನ್ ವತಿಯಿಂದ ನೂತನವಾಗಿ ನಿರ್ಮಾಣವಾಗಲಿರುವ ಧ್ಯಾನ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗಲಿದೆ ಎಂದು ಹೇಳಿದರು. ಮುಂದಾಗುವ ಸಮಸ್ಯೆಗಳನ್ನು ಅರಿತುಕೊಂಡು ಈಗಲೇ ಪರಿಹಾರ ಮಾಡಿಕೊಂಡರೆ ಸೂಕ್ತ. ಇಲ್ಲವಾದಲ್ಲಿ ಸಮಸ್ಯೆ ಇದೆ ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ಯುಗಾದಿ ಮತ್ತು ಸಂಕ್ರಾಂತಿ ಸಂದರ್ಭದಲ್ಲಿ ಮುನ್ಸೂಚನೆ ಫಲಗಳನ್ನು ತಿಳಿಸಲಾಗುತ್ತದೆ. ಯುಗಾದಿ ಸಂದರ್ಭದಲ್ಲಿ ಮಳೆ, ಬೆಳೆ ಇತ್ಯಾದಿಗಳ ಬಗ್ಗೆ ಮುನ್ಸೂಚನೆ ನೀಡಲಾಗುತ್ತದೆ. ಸಂಕ್ರಾಂತಿ ಸಮಯದಲ್ಲಿ ಆಡಳಿತ, ರಾಜಕಾರಣ ಇತ್ಯಾದಿಗಳ ಫಲ ನೋಡಿಕೊಂಡು ಹೇಳುತ್ತೇವೆ. ಸಂಕ್ರಾಂತಿವರೆಗೆ ಏನು ತೊಂದರೆ ಇಲ್ಲ. ಆಮೇಲೆ, ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಕೊಡಿ ಶ್ರೀ ಹೇಳಿದರು.

WhatsApp Group Join Now
Telegram Group Join Now
Share This Article