ಯುವಜನಾಂಗ ಸೈನಿಕರ ಶೌರ್ಯ ತಿಳಿಯಲಿ :ಈರಣ್ಣ ಕಡಾಡಿ

Ravi Talawar
ಯುವಜನಾಂಗ ಸೈನಿಕರ ಶೌರ್ಯ ತಿಳಿಯಲಿ :ಈರಣ್ಣ ಕಡಾಡಿ
WhatsApp Group Join Now
Telegram Group Join Now
ಬೈಲಹೊಂಗಲ: ದೇಶ ಸ್ವಾತಂತ್ರ್ಯಗೊಂಡು 78 ವರ್ಷ ಸಂದಿವೆ ಕಾರ್ಗಿಲ್ ಯುದ್ದ  ನಡೆದು 26 ವರ್ಷಗಳಾದರು ಇಂದಿಗೂ ಅದರ ವಿಜಯೋತ್ಸವದ ಆಚರಣೆ ಮಾಡುತಿದ್ದೆವೆ ಎಂದರೆ ನಮ್ಮ‌ ಮುಂದಿನ ಪೀಳಿಗೆಗೆ ದೇಶಭಿಮಾನ ಮತ್ತು ಸೈನಿಕರ ತ್ಯಾಗ ಬಲಿದಾನ ಶೌರ್ಯವನ್ನು  ತಿಳಿದುಕೊಳ್ಳವ ಉದ್ದೇಶಕ್ಕಾಗಿ ಇಂತಹ ವಿಜಯೋತ್ಸವ ಅತ್ಯಂತ ಅವಶ್ಯಕವಾಗಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
       ನಗರದ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರದಂದು ಮಲಪ್ರಭಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಗಣಾಚಾರಿ ಶಿಕ್ಷಣ ಸಂಸ್ಥೆಯ ಎನ್.ಎಸ್.ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ 26 ನೇ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ದೇಶದ ಜನತೆ ಅರಾಮದಾಯಕ ಸಹಜ ಜೀವನ ನಡೆಸಬೇಕದರೆ ನಮ್ಮ ಭಾರತದ ಗಡಿಯಲ್ಲಿ ತನ್ನ ಎದೆಯನ್ನು ಶತೃಗಳ ಗುಂಡುಗಳಿಗೆ ಒಡ್ಡಿ ನಮ್ಮನ್ನು ರಕ್ಷಣೆಮಾಡುವ ಸೈನಿಕರಿಗೆ ಪ್ರಥಮ ಪ್ರಾಸಸ್ಥೆಕೊಟ್ಟಾಗ  ನಿಜವಾದ ಗೌರವ ಸೈನಿಕರಿಗೆ ಕೊಟ್ಟಂತಾಗುತ್ತದೆ. ನಮ್ಮ ದೇಶದ ಗಡಿ ರಕ್ಷಣೆ ಇತರ ದೇಶಗಳಂತೆ ಸಾಮನ್ಯವಾಗಿಲ್ಲ. ಸುಮಾರು 20 ಸಾವಿರ ಅಡಿಗಳ ಎತ್ತರದಲ್ಲಿ ಹಿಮಛಾದಿತ ಕಡಿದಾದ ಗುಡ್ಡುಗಾಡಗಳಲ್ಲಿ ಸುಮಾರಿ 23 ಮೈನಸ್ ಡಿಗ್ರಿ ಸೆಂಟುಗ್ರೆಡ್‌ದಲ್ಲಿ ನಮ್ಮ ಸೈನಿಕರು ಕಾರ್ಯನಿರ್ವಹಿಸಬೇಕಾಗಿದೆ. ಈ ಪರಿಸ್ಥಿತಿ ಪ್ರಪಂಚದ ಯಾವುದೆ ದೇಶಗಳಿಗಿದ್ದರು ತಮ್ಮನ್ನು ವೈರಿಗಳಿಂದ ರಕ್ಷಣೆ ಮಾಡಿಕೊಳ್ಳಲು ಸಾಧ್ಯವೆ ಇರುತ್ತಿರಲಿಲ್ಲ. ಇಂತಹ ಸಂದರ್ಭದಲ್ಲು ತಮ್ಮ ಜೀವದ ಹಂಗು ತೊರೆದು ಗಡಿ ರಕ್ಷಣೆ ಮಾಡಿ ಕಾರ್ಗಿಲ ಯುದ್ದದಲ್ಲಿ 524 ಯೋಧರು ಹುತಾತ್ಮರಾಗಿರುವದು ನಮ್ಮಗೆಲ್ಲ ಅತಿ ದುಖಃದ ಸಂಗತಿ ಎಂದರು.
       ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಕಾರ್ಗಿಲ್‌ ಯುದ್ದದಲ್ಲಿ ನಮ್ಮ ಅನೇಕ ಸೈನಿಕರು ತಮ್ಮ ಸಾಹಸ ಶೌರ್ಯ ಮೆರೆದಿದ್ದು  ಅದರಲ್ಲಿ ಮನೋಜ ಕುಮಾರ ಪಂಡೆ, ಸಂಜಯ ಕುಮಾರ, ಗ್ರೇನೆಡಿಯರ್ ಯೋಗೆಂದ್ರ ಯಾದವ, ಕೈಶಿಂಗ್ ನಂಗ್ರೂಮ್, ವಿಕ್ರಮ್ ಭಾತ್ರಾ , ಜ.ವೇದಪ್ರಕಾಶ ಮಲ್ಲಿಕ್ ಹಾಗೂ ಕ್ಯಾಕೆಂಗರೂಜೆ ನಮಗೆಲ್ಲ ಆದರರ್ಶಪ್ರಾರಯರಾಗಿದ್ದು ಇವರ ಜೀವನ ಚರಿತ್ರೆ ಇಂದಿನ ಯುವ ಪಿಳಿಗೆ ಓದಬೇಕು.  ನಮ್ಮ ನೆರೆಯ ರಾಷ್ಟ್ರ ಪಾಕಿಸ್ಥನಕ್ಕೆ ಎಷ್ಟೆ ಸಹಾನ ಬೂತಿ ತೊರಿದರು ಅದು ಪಾಠ ಕಲೆಯುವದಿಲ್ಲ ಒಂದು ಗುಂಡು ಹಾರಿದರೆ ಎರೆಡು ತೆಲೆ ಉದರುವ ರೀತಿಯಲ್ಲಿ ಪ್ರತ್ಯುತ್ತರ ಕೊಡುತ್ತಿರುವ ಇತ್ತಿಚ್ಚಿನ‌ ಆಪರೇಷನ್‌ ‌ಸಿಂಧೂರ ನಡೆಸಿದ ಸೈನಿಕರ ಮಾರ್ಗ ಯಶಸ್ವಿಯಾಗಿದೆ ಎಂದರು.
   ಅಧ್ಯಕ್ಷತೆ ವಹಿಸಿದ್ದ ಡಾ.ಸಿ.ಬಿ.ಗಣಾಚಾರಿ ಹಾಗೂ  ಕಾರ್ಗಿಲ್ ಯುದ್ದದಲ್ಲಿ ಪಾಲ್ಗೊಂಡ ಮಾಜಿ ಸೈನಿಕ ರಾಜಕುಮಾರ ಸವಟಗಿ ಮಾತನಾಡಿದರು.ಪ್ರಸಕ್ತ ಸಾಲಿನಲ್ಲಿ ನಿವೃತ್ತಿ ಹೊಂದಿದ  ಸೈನಿಕರನ್ನು ಮತ್ತು  ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದ ಸೈನಿಕರನ್ನು  ಸತ್ಕರಿಸಲಾಯಿತು. ವೇದಿಕೆಯ ಮೇಲೆ ಮಾಜಿ ಜಿಪಂ‌ ಸದಸ್ಯ ಶಂಕರ ಮಾಡಲಗಿ, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಚಂದ್ರಶೇಖರ ನೇಸರಗಿ, ಮಹಾದೇವ ಮಡಿವಾಳರ, ಸುರೇಶ ಕಂಬಾರ ವೀರ ನಾರಿಯರಾದ ರತ್ನಾ ಗೋಧಿ, ಮಲ್ಲವ್ವ ಕಾಡನ್ನವರ  ಇದ್ದರು.
     ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಮಹಾದೇವ ಹಡಪದ ಅವರ ಪತ್ನಿ ಮಹಾದೇವಿ ಹಡಪದ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.ಕಾರ್ಯಕ್ರಮದಲ್ಲಿ  ಮಾಜಿ ಸೈನಿಕರಾದ ಮಂಜುನಾಥ ಬಾಗೇವಾಡಿ, ಯಲ್ಲಪ್ಪ ಗಡದ, ಮಹಾಂತೇಶ ಕಮತ,  ದೇಮಪ್ಪ ಶಿರಗಾಂವಿ,ಟಿ.ಬಿ. ಮಾವಿನಕಟ್ಟಿ, ಬಿ.ಎಸ್.ಹೊಂಗಲ, ಎಸ್.ಜಿ.ಹಡಪದ, ಶಂಕರ ಬೇವಿನ, ಬಸವರಾಜ ಗುರನ್ನವರ, ಮಹಾಂತೇಶ ಕುಸಲಾಪೂರ,     ಸಿದ್ದಾರೋಢ ಹೊಂಡಪ್ಪನವರ, ಗೌಡಪ್ಪ ಹೊಸಮನಿ, ಮುಶೆಪ್ಪ ಜಡಿ, ಸದಾಶಿವ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು,  ಸಾರ್ವಜನಿಕರು ಹಾಗೂ ನಿವೃತ್ತ ನೂರಾರು ಸೈನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕುಮಾರಿ,  ಕುಮಾರಿ ವಿಜಯಲಕ್ಷ್ಮಿ ಉಳವಿ ಮತ್ತು ರೇಣುಕಾ  ಕೊನ್ಮನಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಪವಿತ್ರಾ ಮಜತಿ ಸ್ವಾಗತಿಸಿದರು. ಕುಮಾರಿ ಶ್ರೀದೇವಿ ಪೂಜೇರ ವಂದಿಸಿದರು.
*ಭಾರತದೇಶದ ಸೈನಿಕರ ಸಾಹಸ ಪ್ರಪಂಚವೆ ಹಾಡಿ ಹೊಗಳುತ್ತಿದೆ. ಒರ್ವ ಸೈನಿಕ ನಿಗೂ ಗಾಯವಾಗದಂತೆ ಶತೃರಾಷ್ಟ್ರದಲ್ಲಿ ಅಡಗಿ ಕುಳಿತ ಉಗ್ರರ ತಾಣಗಳನ್ನ ಪತ್ತೆ ಮಾಡಿ ಹುಡಕಿ ಹುಡಕಿ ಪಾಕಿಸ್ತಾನದ ಒಳಹೊಕ್ಕು ಘಂಟೆಯಲ್ಲಿ 9ತಾಣಗಳನ್ನ ದ್ವಂಸಮಾಡಿದ ಆಪರೇಷನ್ ಸಿಂಧೂರ ಕಾರ್ಯಚರಣೆಗೆ ಜಗತ್ತೆ ನಿಬ್ಬೆರಗಾಗಿದೆ. ನಮ್ಮ ಸೈನಿಕರ ಸಾಹಸ ನಮ್ಮಹೆಮ್ಮೆ.*
WhatsApp Group Join Now
Telegram Group Join Now
Share This Article