ನೇಸರಗಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಕಿತ್ತೂರು ಪಟ್ಟಣದ ಆರ್ ಜಿ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2025-26 ನೇ ಸಾಲಿನ ಕಿತ್ತೂರು ತಾಲ್ಲೂಕಾ ಮಟ್ಟದ ಕ್ರೀಡೆಗಳಲ್ಲಿ ನೇಸರಗಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಾಲಿಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಹಾಗೂ ತಾಲೂಕಿಗೆ ಹೆಮ್ಮೆಯನ್ನು ತಂದಿರುತ್ತಾರೆ. ಹಾಗೂ ಅಥ್ಲೆಟಿಕ್ಸನಲ್ಲೂ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಬಹುಮಾಗಳನ್ನು ಗೆದ್ದಿರುತ್ತಾರೆ ಇವರಿಗೆ ನಮ್ಮ ಕಾಲೇಜಿನ ಸಿಬಿಸಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಪ್ರಾಚಾರ್ಯರು ಹಾಗೂ ಎಲ್ಲಾ ಉಪನ್ಯಾಸಕ ಬಳಗದವರು ಮತ್ತು ಬೋಧಕೇತ್ತರ ಸಿಬ್ಬಂದಿ ಅಭಿನಂದಿಸಿದ್ದಾರೆ.