ಕಿತ್ತೂರು ಅಭಿವೃದ್ಧಿಗೆ ಸಹಿಸದ ವಿರೋಧಿಗಳಿಂದ ಅಪಪ್ರಚಾರ : ರೋಹಿಣಿ ಪಾಟೀಲ 

Ravi Talawar
ಕಿತ್ತೂರು ಅಭಿವೃದ್ಧಿಗೆ ಸಹಿಸದ ವಿರೋಧಿಗಳಿಂದ ಅಪಪ್ರಚಾರ : ರೋಹಿಣಿ ಪಾಟೀಲ 
WhatsApp Group Join Now
Telegram Group Join Now
ನೇಗಿನಹಾಳ. ಕಳೆದ ಎರಡು ವರ್ಷಗಳಿಂದ ಚನ್ನಮ್ಮನ ಕಿತ್ತೂರ ಕ್ಷೇತ್ರದಲ್ಲಿ ಅನೇಕ ಕೆಲಸ ಕಾರ್ಯಗಳು ಕ್ಷಿಪ್ರವಾಗಿ ನಡೆಯುತ್ತಿದ್ದು ಮೂಲಭೂತ ಸೌಕರ್ಯ, ರಸ್ತೆ, ಕಿತ್ತೂರು ಪಟ್ಟಣ ಅಭಿವೃದ್ಧಿಗೆ, ಸೊಗಸಿನ ಕಿತ್ತೂರ ಉತ್ಸವ, ಥಿಮ್ಸ್ ಪಾರ್ಕ್ ನಿರ್ಮಾಣ, ಗ್ರಾಮೀಣ ಅಭಿವೃದ್ಧಿ ಇನ್ನೂ ಅನೇಕ ಜನ ಸಾಮಾನ್ಯರ ಕೆಲಸ ಕಾರ್ಯಗಳು ಕ್ಷೇತ್ರದ ತುಂಬೆಲ್ಲ ನಡೆಯುತ್ತಿರುವದು ವಿರೋಧಿಗಳಿಗೆ ಸಹಿಸಲಿಕ್ಕೆ ಆಗುತ್ತಿಲ್ಲ ಹೀಗಾಗಿ ಕೀಳು ಮಟ್ಟದಲ್ಲಿ ಅಪಪ್ರಚಾರ ಬಿಜೆಪಿ ನಾಯಕರು ಮಾಡುತ್ತಿದ್ದು ಇದೆ ಅವರಿಗೆ ಶೋಭೆ ತರುವದಿಲ್ಲ ಎಂದು ಕೆ ಪಿ ಸಿ ಸಿ ಸದಸ್ಯರು, ಮಾಜಿ ಜಿ ಪಂ ಸದಸ್ಯರಾದ  ರೋಹಿಣಿ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಗುರುವಾರದಂದು  ಗ್ರಾಮದ ಶಾಸಕರ ಗ್ರಹ ಕಚೇರಿಯಲ್ಲಿ ಅಪಾರ ಪ್ರಮಾಣದ ಶಾಸಕ ಬಾಬಾಸಾಹೇಬ ಪಾಟೀಲ ಅಭಿಮಾನಿಗಳ ಬಳಗ ಏರ್ಪಡಿಸಿದ ಸಭೆಯಲ್ಲಿ ಮಾತನಾಡಿ  ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಕೆಲವು ದಿನಗಳ ಹಿಂದೆ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ನಾವು ಪ್ರೀತಿಯಿಂದ ನಮ್ಮವರನ್ನು ಮಕ್ಕಳು ಅಂತಾ  ಬೈಯುತ್ತೇವೆ.ಅದನ್ನು ಬಿಜೆಪಿ ಮಕ್ಕಳು  ಅಪಾರ್ಥ ತಿಳಿಬಾರ್ದು ಅಂತಾ ಹೇಳಿದ್ದಾರೆ. ನಾವು 2014 ರಲ್ಲಿ ಸೊತ್ತು ಜನ ಸೇವೆಯಲ್ಲಿ ತೊಡಗಿಸಿಕೊಂಡೇವು, ಹಿಂದಿನ ಶಾಸಕರ ಕೆಲಸ ಕಾರ್ಯಗಳಲ್ಲಿ ಮೂಗು ತೋರಿಸಲಿಲ್ಲ. ಆದರೆ ಬಾಬಾಸಾಹೇಬ ಪಾಟೀಲರು  ನಮ್ಮ ಯುವ ಜನಾಂಗ ಮತ್ತು ಹಿರಿಯರ, ಮಹಿಳೆಯರ ಆಶೀರ್ವಾದದಿಂದ ಶಾಸಕರಾದರು. ಆದರೆ ನಿರಂತರ ಶಾಸಕರ ಮತ್ತು ಅವರ ಅಭಿಮಾನಿಗಳ ವಿರುದ್ಧವಾಗಿ, ಕೆಲಸ ಕಾರ್ಯಗಳಲ್ಲಿ ಬಗ್ಗೆ ಕೀಳು ಮಟ್ಟದಲ್ಲಿ ಟೀಕೆ ಬಿಜೆಪಿ ಯವರು ಮಾಡುತ್ತಿದ್ದಾರೆ. ಅವರು ಹೋರಾಟ ಮಾಡಲಿ ನಾವು ಶರಣರ, ಹಿರಿಯರ, ಮಠ ಮಂದಿರಗಳ ಆಶೀರ್ವಾದದಿಂದ ಜನ ಸೇವೆ ಮಾಡುತ್ತಿದ್ದು. ನಮ್ಮ ಕಾರ್ಯಕರ್ತರು ಅವರ ಮಟ್ಟಕ್ಕೆ ಇಳಿಯದೆ ಶಾಂತಿಯಿಂದ ಹೋರಾಟ ಮಾಡೋಣ ಎಂದರು.
    ಈ ಸಭೆಯಲ್ಲಿ ಅನೇಕ ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಮಾತನಾಡಿ ಧಣಿ ಬಾಬಾಸಾಹೇಬ ಅವರ ಯಾರಿಗೂ ಹೆದರುವ ಮಾತಿಲ್ಲ ಅವರೊಂದಿಗೆ ನಾವಿದ್ದೇವೆ  ಎಂದು ಹೇಳಿದರು.
  ಸಭೆಯಲ್ಲಿ ಮುಖಂಡರಾದ ನಾನಾಸಾಹೇಬ ಪಾಟೀಲ, ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ,ಕಿತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗನಗೌಡ ಪಾಟೀಲ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜು ಸಲೀಮ್ ಕಾಶಿಮನವರ, ಶಂಕರಪ್ಪ ಹೊಳಿ, ಶೇಖರ ಯರಗೊಪ್ಪ, ಬಾಬು ಕಟ್ಟಿ, ಅಬ್ಬಾಸ ಪಿರಜಾದೆ, ಬಸವರಾಜ ಚಿಕನಗೌಡರ, ಸುರೇಶ ಕಂಡ್ರಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಸಹಸ್ರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article