ಬಿಜೆಪಿ ವಿರುದ್ಧ ನಾಲಿಗೆ ಹರಿಬಿಟ್ಟ ಕಿತ್ತೂರು ಶಾಸಕರ ವಿರುದ್ಧ ಪ್ರತಿಭಟನೆ :ಮಹಾಂತೇಶ ದೊಡ್ಡಗೌಡರ

Ravi Talawar
ಬಿಜೆಪಿ ವಿರುದ್ಧ ನಾಲಿಗೆ ಹರಿಬಿಟ್ಟ ಕಿತ್ತೂರು ಶಾಸಕರ ವಿರುದ್ಧ ಪ್ರತಿಭಟನೆ :ಮಹಾಂತೇಶ ದೊಡ್ಡಗೌಡರ
WhatsApp Group Join Now
Telegram Group Join Now
ಚನ್ನಮ್ಮನ ಕಿತ್ತೂರು. ದಿ. 14 ರಂದು ನೇಗಿನಹಾಳ ಗ್ರಾಮದ ಶಾಸಕರ ಕಾರ್ಯಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಸಿಸಿ ಮಾತನಾಡುವಾಗ ನಾನು ಪ್ರೀತಿಯಿಂದ ಬೈಯುತ್ತೇನೆ. ಆದರೆ ಆ ಬಿಜೆಪಿ ಮಕ್ಕಳು ಅಪಪ್ರಚಾರ ಮಾಡ್ತಾರೆ ಎಂಬ ಮಾತಿಗೆ  ಅವರು  ಬಿಜೆಪಿ ನಾಯಕರ, ಕಾರ್ಯಕರ್ತರ ಕ್ಷಮೆ ಕೊರಬೇಕು. ಮತ್ತು ಈ ಹೇಳಿಕೆಯನ್ನು ಖಂಡಿಸಿ ದಿ. 16 ರಂದು ಬೆಳಿಗ್ಗೆ 10 ಘಂಟೆಗೆ    ಹೊಸ ಕುರಗುಂದ   ಗ್ರಾಮದಿಂದ      ನೇಗಿನಹಾಳ ಗ್ರಾಮದ  ಶಾಸಕರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕುವ ಸ್ವಾಭಿಮಾನ ಬಿಜೆಪಿ ಕಾರ್ಯಕರ್ತರ  ಕಾರ್ಯಕ್ರಮವನ್ನು  ಕೈಗೊಳ್ಳಲಾಗಿದೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು. ಅವರು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಸ್ಥಿ ಉದ್ದೇಸಿಸಿ ಮಾತನಾಡಿದರು.
  ಇದಕ್ಕೂ ಮೊದಲು ಈ ಕುರಿತಂತೆ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಿ ಪಿ ಐ ಅವರಿಗೆ ಮನವಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ಕಿತ್ತೂರು ಮಂಡಳ ಬಿಜೆಪಿ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಶ್ರೀಮತಿ ಲಕ್ಷ್ಮೀ ಇನಾಮದಾರ, ಕೆ ಎಮ್ ಎಫ್ ನಿರ್ದೇಶಕ ಬಸವರಾಜ ಪರವಣ್ಣವರ, ಸಂದೀಪ ದೇಶಪಾಂಡೆ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article