ಚ. ಕಿತ್ತೂರು. ಕಿತ್ತೂರು ರಾಣಿ ಚನ್ನಮ್ಮನ 201 ನೇ ವರ್ಷದ ವಿಜಯೋತ್ಸವದ ಅಂಗವಾಗಿ ಕಿತ್ತೂರು ಉತ್ಸವದ ಮುಖ್ಯ ವೇದಿಕೆಯಲ್ಲಿ ಜಾನಪದ ಹಾಡು, ಭಜನೆ, ನೃತ್ಯ, ಭರತ ನಾಟ್ಯ, ಕನ್ನಡ ಹಾಡು ನೃತ್ಯ ಇನ್ನೂ ಅನೇಕ ಕಾರ್ಯಕ್ರಮಗಳು ಜನರ ಮನಸೊರೆಗೊಳಿಸಿದವು. ಬೆಳಿಗ್ಗೆ ಬಸಲಿಂಗಯ್ಯ ಹಿರೇಮಠ ಅವರಿಂದ ಲಾವಣಿ ಪದ, ಜೋತಿರ್ಲಿಂಗ್ ಹೊಣಕಟ್ಟೆ ತಂಡದಿಂದ ಜಾನಪದ ಸಂಗೀತ, ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯಿಂದ, ಶಂಬಯ್ಯಾ ಹಿರೇಮಠ ಅವರಿಂದ ಜಾನಪದ ಸಂಗೀತ, ಜೋಗತಿ ನೃತ್ಯ, ಸುಗಮ ಸಂಗೀತ, ನೃತ್ಯ ರೂಪಕ, ಹಾಸ್ಯ ಸಂಜೆ, ವಚನ ಸಂಗೀತ, ರಸಮಂಜರಿ, ಓಡಿಫಿ ಡ್ಯಾನ್ಸರ, ನೃತ್ಯ ವೈವಿದ್ಯ, ಕ್ಲಾರಿಯೋನೆಟ್, ಶಹನಾಯಿ, ಏಕಪಾತ್ರಭಿನಯ ಚಿತ್ರ ಸಹ ನಟರ ಕಾರ್ಯಕ್ರಮ ಇನ್ನೂ ಅನೇಕ ಕಾರ್ಯಕ್ರಮಗಳು ಜನರ ಮನಸೊರೆಗೊಂಡವು. ಬೆಳ್ಳಿಗ್ಗೆ ಸುರಿದ ಭಾರಿ ಮಳಿಗೆ ಕಡಿಮೆ ಇದ್ದ ಪ್ರೇಕ್ಷಕರು ನಿಧಾನವಾಗಿ ಮಳೆ ನಿಂತ ನಂತರ ಜನ ಬಹಳ ಪ್ರಮಾಣದಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಿದರು.


