ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿ : ಯತ್ನಾಳ 

Pratibha Boi
ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿ : ಯತ್ನಾಳ 
WhatsApp Group Join Now
Telegram Group Join Now
ಬೆಳಗಾವಿ : ಎಲ್ಲ ವಿಧಗಳಲ್ಲಿ ತಾರತಮ್ಯವನ್ನು ಎದುರಿಸುತ್ತಿರುವ ಉತ್ತರ ಕರ್ನಾಟಕಕ್ಕೆ ನ್ಯಾಯ ನೀಡುವ ಜೊತೆಗೆ ಕಲ್ಯಾಣ ಕರ್ನಾಟಕ ಹಾಗೂ ಮಲೆನಾಡು ಅಭಿವೃದ್ದಿ ಮಂಡಳಿ ರೀತಿ ಕಿತ್ತೂರು ಕರ್ನಾಟಕ ಅಭಿವೃದ್ದಿ ಮಂಡಳಿ ನೇಮಕ ಮಾಡಬೇಕು. ಕಿತ್ತೂರು ಕರ್ನಾಟಕದ ಪ್ರತಿ ಶಾಸಕರ ಮತಕ್ಷೇತ್ರಕ್ಕೆ ತಲಾ 50 ಕೋಟಿ ಅನುದಾನ ನೀಡುವಂತೆ ಶಾಸಕ ಬಸವರಾಜ ಪಾಟೀಲ ಯತ್ನಾಳ ಒತ್ತಾಯಿಸಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಗುರುವಾರ ಮಧ್ಯಾಹ್ನ ವಿಧಾನ ಸಭೆಯ ಕಲಾಪದಲ್ಲಿ ಉತ್ತರ ಕರ್ನಾಟಕದ ಅಭಿವೃದ್ದಿಯ ವಿಶೇಷ ಚರ್ಚೆಯಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ಬೆಳಗಾವಿಯ ಸುವರ್ಣ ಸೌಧದಲ್ಲಿ ಒಂದು ವರ್ಷದಲ್ಲಿ ಕೇವಲ 10 ದಿನಗಳ ಕಾಟಾಚಾರದ ಚಳಿಗಾಲ ಅಧಿವೇಶ ನಡೆಸುತ್ತಿರಿ. ಆದರೆ ಇಲ್ಲಿ 10 ದಿನಗಳಲ್ಲಿ ಧರಣಿ ಕಲಾಪ ಮುಂದೂಡಿಕೆ ಆಗಿ 4ರಿಂದ 5 ದಿನ ಮಾತ್ರ ಕಲಾಪ ನಡೆಯುತ್ತವೆ. ಇಲ್ಲಿ ಶಾಸಕರ ಭವನ ಇಲ್ಲ. ಕೋಟ್ಯಾಂತರ ರೂ. ಖರ್ಚು ಮಾಡಿ ಕಟ್ಟಿದ ಕಟ್ಟಡದ ಸಾರ್ಥಕತೆ ಏನು ಎಂದು ಪ್ರಶ್ನಿಸಿದರು. ಆದರೆ ಈ ಬಾರಿ ಮೊದಲಿಗೆ ಉತ್ತರ ಕರ್ನಾಟಕ ಅಭಿವೃದ್ದಿಯ ಚರ್ಚೆಗೆ ಮೊದಲ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದರು.
ಮಹಾರಾಷ್ಟç ನಾಗಪೂರದಲ್ಲಿ ನಿರ್ಮಿಸಲಾದ ವಿಧಾನ ಸಭೆಯ ರೀತಿ ಬೆಳಗಾವಿಯಲ್ಲೂ ಎಲ್ಲ ವ್ಯವಸ್ಥೆಗಳು ಬೆಳಗಾವಿಯ ಸುವರ್ಣ ಸೌಧದಲ್ಲಿ ಆಗಬೇಕು ಎಂದರು. ದಕ್ಷಿಣ ಕರ್ನಾಟಕದ ಶಾಸಕರು, ಅಧಿಕಾರಿಗಳ ಮಾತ್ರ  ಬೆಳಗಾವಿ ಕಡೆಗೆ ಜಾಲಿ ಮಾಡಲು ಬರುತ್ತಾರೆ. ಅಧಿವೇಶನ ಹೆಸರಲ್ಲಿ ಗೋವಾ, ಮಹಾರಾಷ್ಟç ಸುತ್ತುತ್ತಾರೆ. ಉತ್ತರ ಕರ್ನಾಟಕದ ವಿಷಯದಲ್ಲಿ ಎಲ್ಲ ವಿಭಾಗಗಳಲ್ಲಿ ತಾರತಮ್ಯ ಆಗುತ್ತಿದೆ ಎಂದು ಅಂಕಿಅAಶ ಸಮೇತ ಕಲಾಪದಲ್ಲಿ ವಿವರಿಸಿದರು.
ಚುನಾವಣೆಯ ಟಿಕೇಟು, ಸಚಿವ ಸ್ಥಾನ ತಪ್ಪುತ್ತದೆ ಎಂದು ಈ ಭಾಗದ ಕೆಲ ಶಾಸಕರು ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ. ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ. “ಐ ಡೋಂಟ್ ಕೇರ್” ನಾನು ಯಾರಿಗೆ ಹೆದರುವವನಲ್ಲ. ಈ ಭಾಗದ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತೇನೆ ಎಂದರು. 10 ಕೆಜಿ ಅಕ್ಕಿ ನೀಡಿದರೆ ಉತ್ತರ ಕರ್ನಾಟಕ ಅಭಿವೃದ್ದಿ ಆಗೊಲ್ಲ. ನೀರಾವರಿ ಯೋಜನೆಗೆ ಆದ್ಯತೆ ನೀಡಿ ಎಂದು ಒತ್ತಾಯಿಸಿದರು.
ಚುನಾವಣೆ ವೇಳೆಯಲ್ಲಿ ಕೆಲವರು ಕೃಷ್ಣೆಯ ನೀರಾವರಿ ವಿಷಯವಾಗಿ ನಾವು ಅಧಿಕಾರಕ್ಕೆ ಬಂದರೆ ರಕ್ತದಲ್ಲೆ ಕೃಷ್ಣೆಗೆ ಕಾಯಕಲ್ಪ ಮಾಡುತ್ತೇನೆ ಎಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಆನೆ ಪ್ರಮಾದ ಮಾಡಿದ್ದವರು ಎಲ್ಲಿ ಎಂದರು. ಈ ಭಾಗದ 7 ಜಿಲ್ಲೆಗಳಲ್ಲಿ ಸರಿಯಾಗಿ ಬಸ್ ಸಂಚಾರ ಇಲ್ಲ. ಈ ಸಮಸ್ಯೆಗಳನ್ನು ಸರಿ ಮಾಡಿ ಎಂದು ಒತ್ತಾಯಿಸಿದರು.
WhatsApp Group Join Now
Telegram Group Join Now
Share This Article