ಉತ್ಸವಕ್ಕೆ ಸಜ್ಜಾದ ಐತಿಹಾಸಿಕ ಪಟ್ಟಣ ಚನ್ನಮ್ಮನ ಕಿತ್ತೂರು; ರಾಣಿ ಚನ್ನಮ್ಮನ 200 ನೇ ವಿಜಯೋತ್ಸವಕ್ಕೆ ಕ್ಷಣಗಣನೆ!

Ravi Talawar
ಉತ್ಸವಕ್ಕೆ ಸಜ್ಜಾದ ಐತಿಹಾಸಿಕ ಪಟ್ಟಣ ಚನ್ನಮ್ಮನ ಕಿತ್ತೂರು; ರಾಣಿ ಚನ್ನಮ್ಮನ 200 ನೇ ವಿಜಯೋತ್ಸವಕ್ಕೆ ಕ್ಷಣಗಣನೆ!
WhatsApp Group Join Now
Telegram Group Join Now

♦ ಸಂಜೀವಕುಮಾರ ವೀ ತಿಲಗರ

 

ಚನ್ನಮ್ಮನ ಕಿತೂರು: ಭಾರತದ ಸ್ವಾತಂತ್ರದ ಇತಿಹಾಸದಲ್ಲಿ ಕಿತ್ತೂರು ತನ್ನದೇಯಾದ ವಿಭಿನ್ನ ಕುರುಹನ್ನು ಉಳಿಸಿಕೊಂಡಿದ್ದು. ಸ್ವಾತಂತ್ರ ಹೋರಾಟಕ್ಕೆ ಮೊಟ್ಟಮೊದಲ ಕಿಚ್ಚು ಹಚ್ಚಿದ್ದು ಕಿತ್ತೂರು ಸಂಸ್ಥಾನ. ಕಿತ್ತೂರಿನ ರಾಣಿ ಚನ್ನಮ್ಮಾಜಿಯ ಮೂಲಕ ಕಿತ್ತೂರು, ಭಾರತದ ಸ್ವಾತಂತ್ರದ ಐತಿಹಾಸಿಕ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ.  ಅ 23 ರಿಂದ 25 ರ ವರೆಗೆ ಮೂರು ದಿನಗಳ ಕಾಲ ಜರುಗುವ ಐತಿಹಾಸಿಕ ಚನ್ನಮ್ಮಾಜಿಯ ಕಿತ್ತೂರು ಉತ್ಸವಕ್ಕೆ ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣ ಸಜ್ಜಾಗಿದೆ.

ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಕೋಟೆಯ ಆವರಣದಲ್ಲಿರುವ ರಾಣಿ ಚನ್ನಮ್ಮ ಮುಖ್ಯ ವೇದಿಕೆ ಸಿದ್ದಗೊಂಡಿದ್ದು 180 ಅಡಿ ಅಗಲ 300 ಅಡಿ ಉದ್ದ ಅಳತೆಯ ಪೆಂಡಾಲ ಸಿದ್ದವಾಗಿದ್ದು, ಅಂದಾಜು 12000 ಆಸನ ವ್ಯವಸ್ತೆ ಮಾಡಲಾಗಿದ್ದು ವೇದಿಕೆಯ ಮುಂಭಾಗದಲ್ಲಿ ರಾಜಕೀಯ ಮುಖಂಡರ, ವ್ಹಿಐಪಿಗಳ, ಸಾದು ಸಂತರ ಹಾಗೂ ಪತ್ರಿಕಾ ಮಾಧ್ಯಮದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಮತ್ತು ಸಾರ್ವಜನಿಕರಿಗೆ ಕುಳಿತುಕೊಳ್ಳುವ ಸ್ಥಳದಲ್ಲಿ ನೆಲಹಾಸಿಗೆಯು ತಗ್ಗುದಿನ್ನೆಗಳಿಂದ ಕೂಡಿರುತಿತ್ತು ಹಾಗೂ ಸ್ವಲ್ಪ ಮಳೆಯಾದರೆ ಸಾಕು ಕೆಸರು ಗದ್ದೆಯಂತಾಗುತ್ತಿತ್ತು. ಈ ಭಾರಿ ವಿಶೇಷವಾಗಿ ಸಿಮೆಂಟ್‌ ವಿಶ್ರಿತ  ಕಡಿ ಮತ್ತು ಉಸುಕಗಳಿಂದ ಪೆಂಡಾಲ ಹಾಕಿದ ಸ್ಥಳದಲ್ಲೆಲ್ಲ ಹರಡಿ ದೊಡ್ಡಗಾತ್ರದ ರೋಡ ರೋಲರನಿಂದ ಲೇವಲ್ಲ ಮಾಡಲಾಗಿದೆ ಇದರಿಂದ ನೆಲಕಾಸಿಗೆ ಸಮತಳವಾಗಿ ಕೆಸರಿನಿಂದ ಮುಕ್ತವಾಗಿದೆ. ಸಾರ್ವಜನಿಕರಿಗೆ ಉತ್ತಮ ಆಸನ ವ್ಯವಸ್ಥೆ ಹಾಗೂ ಮಳೆಯಿಂದ ರಕ್ಚಣೆಯಾಗುವು ಪೆಂಡಾಲ ಹಾಕಲಾಗಿದೆ. ಅಲ್ಲಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಮುರಗೋಡ ಪೆಂಡಾಲ ಮತ್ತು ಡೆಕೋರೇಟರನ ಮಾಲೀಕ ಕೃಷ್ಣಾ ಬಾಳೇಕುಂದರಗಿ ತಿಳಿಸಿದ್ದಾರೆ.

ವೇದಿಕೆಯ ಹಿಂಬಾಗದಲ್ಲಿ ಮಾಧ್ಯಮ ಕೇಂದ್ರ ತೆರೆಯಲಾಗಿದೆ. ಎಡಬಾಜು ಕಲಾವಿದರಿಗೆ ಸಜ್ಜಾಗಲು ಮೇಕಪ್ಪ ರೂಂ ನಿರ್ಮಿಸಲಾಗಿದ್ದು ಪತ್ರಿಕಾ ಮಾದ್ಯಮ ಮತ್ತು ಕಲಾವಿದರಿಗೆ ಬೇರೆ ಬೇರೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.

ವಿನೂತನ ಹಾಗೂ ಆಕರ್ಷನೀಯ ದೀಪಾಲಂಕಾರಗಳಿಂದ ಜಗಮಗಿಸುತ್ತಿರುವ ಕಿತ್ತೂರು:  ಪಟ್ಟಣದ ಮುಖ್ಯ ರಸ್ತೆಗಳು, ಗಡಾದ ಮರಡಿ, ವಸ್ತು ಸಂಗ್ರಾಹಾಲಯಗಳು ವಿನೂತನ ಮತ್ತು ಆಕರ್ಷಣಿಯ ವಿದ್ಯುತ್‌ ದೀಪಾಲಂಕರಗಳಿಂದ ಅಲಂಕರಿಸಲಾಗಿದೆ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಕಲಾವಿದರು ಕಿತ್ತೂರು ಚನ್ನಮ್ಮಾಜೀಯ ಸಾಹಸ ಶೌರ್ಯಗಳ ಸಹಾಸಗಾತೆಯ ಚಿತ್ರಗಳನ್ನು  ಕಂಗೋಳಿಸುವಂತೆ ಬಿಡಿಸಿದ್ದಾರೆ.  ಕೋಟೆ ಆವರಣದಲ್ಲಿರುವ ಎಲ್ಲ ಸ್ಮಾರಕಗ ಭತ್ತೇರಿ ಕೋಟೆ ಸೇರಿಂತೆ ಬೃಹದಾಕಾರದ ಮರಗಳಿಗೆ, ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ.

ಮೂರು ದಿನಗಳ ವರೆಗೆ ನಡೆಯುವ ಉತ್ಸವಕ್ಕೆ ಬಾರಿ ಮಳೆಯ ನಡುವೆಯು ಸಿದ್ಧತೆಯನ್ನು ಮಾಡಲಾಗುತ್ತಿದ್ದು, ಈ ಉತ್ಸವದಲ್ಲಿ ನಾಡಿನ ಹೆಸರಾಂತ ಸಾಹಿತಿಗಳು, ಸಂಗೀತ ಕಲಾವಿದರು, ಚಲನಚಿತ್ರ ನಟರು, ಖ್ಯಾತ ಗಾಯಕರು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ನೃತ್ಯ ಕಲಾವಿದರು ಭಾಗವಹಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ,ಕೆ.ಶಿವಕುಮಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ  ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಸೇರಿದಂತೆ ಸಚಿವರು, ಸಂಸದರು, ಶಾಸಕರು, ಶ್ರೀಗಳು ಭಾಗವಹಿಸಲಿದ್ದು, ಇವರೆಲ್ಲರ ಸ್ವಾಗತಕ್ಕೆ ಕಿತ್ತೂರು ಪಟ್ಟಣ  ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಕಿತ್ತೂರಿಗೆ ಪ್ರವೇಶ ಪಡೆಯುವ ನಾಲ್ಕು ದಿಕ್ಕುಗಳಲ್ಲಿ ಸ್ವಾಗತ ಕಮಾನುಗಳು ಸರ್ವರನ್ನೂ ಸ್ವಾಗತಿಸಲು ಹಾತೊರೆಯುತ್ತಿವೆ.

ಮೂರು ದಿನಗಳವರೆಗೆ ನಡೆಯುವ ಈ ಉತ್ಸವದಲ್ಲಿ ಮ್ಯಾರಾಥಾನ್, ಸೈಕ್ಲಿಂಗ್, ವಾಲಿಬಾಲ್, ಕಬಡ್ಡಿ ಹಗ್ಗ ಜಗ್ಗಾಟ ಹಾಗೂ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದ ಜಟ್ಟಿಗಳಿಂದ ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ, ಉತ್ಸವದ ಅಂಗವಾಗಿ ವಿಚಾರ ಸಂಕೀರಣ ಮತ್ತು ವಿಚಾರ ಗೋಷ್ಠಿಗಳನ್ನು ಏರ್ಪಡಿಸಲಾಗಿದ್ದು, ನಾಡಿನ ಹೆಸರಾಂತ ಸಾಹಿತಿಗಳು, ಕವಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಾನಪದ ಕಲಾವಾಹಿನಿ ಮೇರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ. ಸರ್ಕಾರದಿಂದ ವಸ್ತು ಪ್ರದರ್ಶನ ವಿವಿಧ ರೀತಿಯ ಕಾದ್ಯಗಳ ಮಾರಾಟ ಮಾಡಲು ಸುಮಾರು 140 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು ಕೋಟೆಯ ಹೊರಭಾಗದಲ್ಲಿ ರಸ್ತೆಯೂದ್ದಕ್ಕು ನೂರಾರು ಮಳಿಗೆಗಳನ್ನು ತೆರೆಯಲಾಗಿದೆ. ಉತ್ಸವದ ಕೊನೆಯ ದಿನ ಕಿತ್ತೂರ ಕೋಟೆ ಆವಣರದಲ್ಲಿ ಇರುವ ಭತ್ತೇರಿ ಮೇಲೆ ದೀಪೋತ್ಸವ ಮತ್ತು ಸಿಡಿಮದ್ದು ಪ್ರದರ್ಶನ ಜರುಗಲಿದೆ.

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ  ಜಮೀನಿನಲ್ಲಿ ಕುಸ್ತಿ ಅಖಾಡಾ ಸಿದ್ದಪಡಿಸಲಾಗಿದೆ.  ಕಬಡ್ಡಿ, ವ್ಹಾಲಿಬಾಲ್ ಹಾಗೂ ಸಾಹಸ ಕ್ರೀಡೆಗಳಿಗಾಗಿ ಸಕಲ ಸಿದ್ದತೆಗಳನ್ನು ಗುರುಸಿದ್ದೇಶ್ವರ ಪ್ರೌಢ ಶಾಲಾ ಕ್ರೀಡಾಂಗನದಲ್ಲಿ ಮಾಡಿಕೊಳ್ಳಲಾಗಿದೆ.

ಜ್ಯೋತಿಯೊಂದಿಗೆ ಬರುವ ಹಾಗೂ ಮೇರವಣಿಗೆಯಲ್ಲಿ ಭಾಗವಹಿಸಿದ ಸರ್ವರಿಗೂ ನಿಚ್ಚಣಕಿಯ ಶ್ರೀ ಮಡಿವಾಳೇಶ್ವರ ಮಠದಲ್ಲಿ ಊಟೋಪಚಾರದ ವ್ಯವಸ್ತೆ ಇದೆ, ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಗಣ್ಯಮಾನ್ಯರಿಗೆ, ಪೊಲೀಸ್‌ ಇಲಾಖೆಯವರಿಗೆ ಗದ್ದಿ ಓಣಿಯಲ್ಲಿ ಇರುವ ರಾಘವೇಂದ್ರ ಮಠದಲ್ಲಿ ಊಟೋಪಚಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ.

ಪ್ರತಿವರ್ಷದಂತೆ ಬೇರೆ ಬೇರೆ ಊರುಗಳಿಂದ ಆಗಮಿಸುವ  ವ್ಯಾಪಾರಿಗಳ ದಂಡು ಕಿತ್ತೂರಿನಲ್ಲಿ ಬೀಡುಬಿಟ್ಟಿದೆ. ಉತ್ಸವಕ್ಕಾಗಿ ಬೇರೆ ಬೇರೆ ಭಾಗಗಳಿಂದ ಆಗಮಿಸುವ ಜನರಿಗೆ ತೊಂದರೆಯಾಗದಂತೆ  ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಗೆ ಬಗೆಯ ಬೃಹದಾಕಾರದ ತಿರುಗುವ ತೊಟ್ಟಿಲುಗಳು, ರೈಲು ಭಂಡಿ, ಕುದುರೆ, ಬೈಕ್, ಬ್ರೇಕ್‌ ಡ್ಯಾನ್ಸ್‌, ಕಾರುಗಳು ಸೇರಿದಂತೆ ಅನೇಕ ಆಟದ ಸಾಮಗ್ರಿಗಳು  ಹಾಗೂ ಮಾರಾಟದ ವಸ್ತುಗಳು ಹಿರಿಯರು ಸೇರಿದಂತೆ ಕಿರಿಯರನ್ನೂ ಕೈಬೀಸಿ ಕರಿಯುತ್ತಿವೆ.

ಪಟ್ಟಣದಲ್ಲಿ ಚರಂಡಿ ಹಾಗೂ ರಸ್ತೆಗಳ ಸ್ವಚ್ಚತಾ ಕಾರ್ಯ ಭರದಿಂದ ಸಾಗಿದೆ. ನೂತನವಾಗಿ ನಿರ್ಮಾಣವಾಗುತ್ತಿರುವ ಕೋಟೆ ರಸ್ತೆಯಲ್ಲಿ ಇರುವ  ಬೀದಿ ದೀಪಗಳ ದುರಸ್ತಿ ಮತ್ತು ಬಕ್ಬ ಅಳವಡಿಕೆ ಕಾರ್ಯ ನೋಡುಗರನ್ನು ಆಕರ್ಶಿಸಿತ್ತಿದೆ.   ಹೆಸ್ಕಾಂದಿಂದ ಹೆಚ್ಚಿನ ಪ್ರಮಾಣದಲ್ಲಿ ತಾತ್ಕಾಲಿಕ ವಿದ್ಯುತ್ ಪ್ರವರ್ತಕಗಳನ್ನು ಅಗತ್ಯ ಸ್ಥಳಗಳಲ್ಲಿ ಅಳವಡಿಸಲಾಗಿದೆ. ವಾಹನ ನಿಲುಗಡೆಗಾಗಿ ದನದ ಪೇಠೆ ಮೈದಾನ, ಪೊಲೀಸ್‌ ಠಾಣಾ ಮೈದಾನ, ಗುರಿಶಿದ್ದೇಶ್ವರ ಶಾಲಾ ಮೈದಾನ, ರಾಣಿ ಪ್ಯಾಲೇಸ್‌ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಖುಲ್ಲಾ ಜಾಗಗಳಲ್ಲಿ ಸಿದ್ದಪಡಿಸಲಾಗಿದ್ದು ರಾಣಿ ಚನ್ನಮ್ಮನ 200 ನೇ ವಿಜಯೋತ್ಸವದ ಯಶಸ್ವಿಗೆ ಬೇಕಾದ ಎಲ್ಲಾ  ಕಾರ್ಯಗಳು ಭರದಿಂದ ಸಾಗಿದ್ದು, ಉತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.

ರಾಣಿ ಚನ್ನಮ್ಮಾಜಿಯ 200 ನೇ ವಿಜಯೋತ್ಸವ ನಮ್ಮ ಜೀವನದಲ್ಲಿ ಬಂದಿರುವುದು ನಮ್ಮೆಲ್ಲರ ಪೂರ್ವ ಜನ್ಮದ ಪೂಣ್ಯ. ಐತಿಕಾಸಿಕ ನಾಡಿನ ಉತ್ಸವದಲ್ಲಿ ಸರ್ವರು ಉತ್ಸಾಹದಿಂದ ಪಾಲ್ಗೊಳುವ ಮೂಲಕ ಉತ್ಸವಕ್ಕೆ ಮೆರಗೂ ತರಬೇಕು. ದೇಶದ ನಾನಾ ಭಾಗಗಳಿಂದ ನಮ್ಮ ನಿರೀಕ್ಷಗೂ ಮೀರಿ ಜನ ಆಗಮಿಸುವ ಸಾಧ್ಯತೆ ಇದ್ದು,  ಸ್ಥಳೀಯರಾದ ನಾವು ಉತ್ಸವಕ್ಕೆ ಬರುವ  ಜನರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಅವರಿಗೆ ಮೊದಲ ಆಧ್ಯತೆ ನೀಡುವ ಮೂಲಕ ಅವರನ್ನು ಗೌರವಿಸಬೇಕು. ರಾಣಿ ಚನ್ನಮ್ಮನ 200 ನೇ ವಿಜಯೋತ್ಸವ ನನ್ನ ಅಧಿಕಾರವಧಿಯಲ್ಲಿ ಬಂದಿರುವುದು ನನ್ನ ಪೂರ್ವ ಜನ್ಮದ ಪುಣ್ಯ. -ಬಾಬಾಸಾಹೇಬ ದೇ ಪಾಟೀಲ. ಶಾಸಕರು ಚನ್ನಮ್ಮನ ಕಿತ್ತೂರು.

ಇಬ್ಬರು ಡಿವೈಎಸ್ಪಿಗಳು, 10 ಜನ ಸಿಪಿಐಗಳು, 22 ಜನ ಪಿಎಸ್ಐಗಳು, ಪೊಲೀಸರು ಮತ್ತು ಹೋಮ್ ಗಾರ್ಡ್‌ ಸೇರಿ ಒಟ್ಟು 600 ಜನರು ಹಾಗೂ 4 ಜನ ಕೆಎಸ್‌ಆರ್‌ಪಿಗಳು ಆಗಮಿಸಲಿದ್ದು ಪೊಲೀಸ್‌ ಶ್ವಾನದಳದ ಅಧಿಕಾರಿಗಳು ಈಗಾಗಲೇ ಸ್ಥಳ ಪರೀಶೀಲನೆ ಮಾಡಿದ್ದಾರೆ. -ಪ್ರವೀಣ ಗಂಗೋಳ ಪಿಎಸ್ಐ ಆರಕ್ಷಕ ಠಾಣೆ ಚನ್ನಮ್ಮನ ಕಿತ್ತೂರು

ಮುಖ್ಯ ವೇದಿಕೆಯ ಕಾರ್ಯಕ್ರಮಕ್ಕೆ ಹೋಗುವ ಅಧಿಕಾರಿಗಳು, ಜನಪ್ರತಿನಿಧಿಗಳು, ಕಲಾವಿದರ ವಾಹನಗಳು ಸೇರಿದಂತೆ ಸಾರ್ವಜನಿಕರಿಗೆ ಕೋಟೆ ವೀಕ್ಷಣೆಗೆ ಅರಳಿಕಟ್ಟಿಯಿಂದ ಕೋಟೆ ಆವರಣಕ್ಕೆ ಹೋಗುವ ರಸ್ತೆ ಮೂಲಕ ಹೋಗುವುದರಿಂದ ಅರಳಿಕಟ್ಟಿ ಎದುರಿಗೆ ಬಹಳ ಜನದಟ್ಟನೆ ಆಗುತ್ತದೆ ಆದ್ದರಿಂದ ಅಗ್ತತ್ಯಕ್ಕೆ ಬೇಕಾದಷ್ಟು ಬ್ಯಾರಿಕೇಡ್, ಸಿಸಿ ಕ್ಯಾಮರಾ, ಸೈನ್ ಬಾಕ್ಸ್ ಹಾಗೂ ಕತ್ತಲು ಇರುವ ಸ್ಥಳಗಳಲ್ಲಿ ಸೂಕ್ತ ಬೆಳಕು ನೀಡುವ ಹಿತದೃಷ್ಠಿಯಿಂದ ಹೈ ಮಾಸ್ಕ್‌ ಲೈಟುಗಳನ್ನು ಅಳವಡಿಸಲಾಗಿದೆ. -ಶಿವಾನಂದ ಗುಡಗನಟ್ಟಿ ವೃತ್ತ ನಿರೀಕ್ಷಕರು ಆರಕ್ಷಕ ಠಾಣೆ ಚನ್ನಮ್ಮನ ಕಿತ್ತೂರು

1-‌ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ರಾಣಿ ಚನ್ನಮ್ಮನ ವರ್ತುಳ.

2- ಕೋಟೆ ಆವರಣದಲ್ಲಿ ನಿರ್ಮಾಣವಾದ ಕಿತ್ತೂರು ರಾಣಿ ಚನ್ನಮ್ಮ ವೇದಿಕೆ (ವಾಡರ್‌ ಪ್ರುಪ್‌)

3- ಕೋಟೆ ಆವರಣದಲ್ಲಿ ನಿರ್ಮಾಣವಾದ ವಸ್ತು ಪ್ರದರ್ಶನ ಮತ್ತು ದಿನಸಿ ಮಾರಾಟ ಮಳಿಗೆಗಳು.

4- ಕೋಟೆ ಆವರಣದಲ್ಲಿ ವಿನೂತನ ದೀಪಾಲಂಕಾರದಿಂದ ಶೃಂಗಾರಗೊಂಡ ಕೋಟೆ ಕೊತ್ತಲು ಮತ್ತು ಭತ್ತೇರಿಗಳು.

5- ವಿನೂತನ ಹಾಗೂ ಆಕರ್ಷನೀಯ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಪಟ್ಟಣದ ಪ್ರಮುಖ ರಸ್ತೆಗಳು.

6-ರಾಣಿ ಚನ್ನಮ್ಮನ ವತೃಳದ ಹತ್ತಿರ ಇರುವ ಸಂಪರ್ಕ ಸೇತುವೆ ಗೋಡೆಗಳಿಗೆ ರಾಣಿ ಚನ್ನಮ್ಮಾಜಿ ಮತ್ತು ಕಿತ್ತೂರು ವೀರರ ಹಾಗೂ ಯುದ್ಧ ಸನ್ನಿವೇಶಗಳು ಚಿತ್ರಿಸಿರುವುದು.

7- ಬಾಕ್ಸ್‌ ಐಟಂ-1 ಕ್ಕೆ ಶಾಸಕ ಬಾಬಾಸಾಹೇಬ ದೇ ಪಾಟೀಲ ಅವರ ಬಾವಚಿತ್ರ

ಗ್ರಾಮೀಣ ಪ್ರದೇಶದ ಜನರ ಒತ್ತಾಸೆ ಮೇರೆಗೆ ವಿಶೇಷ ಭಜನಾ ಕಾರ್ಯಕ್ರಮ: 200 ನೇ ರಾಣಿ ಚನ್ನಮ್ಮಾಜಿ ವಿಜಯೋತ್ಸವದ ಅಂಗವಾಗಿ ಜನರ ಒತ್ತಾಸೆ ಮೇರೆಗೆ ಶಾಸಕ ಬಾಬಾಸಾಹೇಬ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅ. 27 ರಂದು ಭಜನಾ ಸ್ಪರ್ಧಯನ್ನು ಆಯೋಜಿಸಲಾಗಿದೆ. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರೂ 50 ಸಾವಿರ, ದ್ವಿತೀಯ ಬಹುಮಾನ ರೂ 25 ಸಾವಿರ  ಹಾಗೂ ತೃತೀಯ ಬಹುಮಾನ ರೂ 15 ಸಾವಿರ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು. ಉತ್ಸವದ ಮುಖ್ಯ ವೇದಿಕೆಯಲ್ಲಿ ಭಜನಾ ಸ್ಫರ್ಧೆ ನಡೆಯಲಿದೆ. ಸ್ಫರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದೂರವಾಣಿ ಸಂಖ್ಯೆ: 0831 – 2474649 ಸಂಪರ್ಕಿಸಿ ಹೆಸರುಗಳನ್ನು ನೋಂದಾಯಿಸಲು ಕೋರಲಾಗಿದೆ.

 

WhatsApp Group Join Now
Telegram Group Join Now
Share This Article