ರನ್ನ ಬೆಳಗಲಿ: ಜು.೧೬., ಪಟ್ಟಣದ ಬೆಳಗಲಿ ವಿದ್ಯಾ ವರ್ಧಕ ಸಂಘದ ಆಶ್ರಯದಲ್ಲಿ. ಎಸ್.ಜಿ.ಎಮ್ ಪದವಿಪೂರ್ವ ಮಹಾವಿದ್ಯಾಲಯದ ದಶಮಾನೋತ್ಸವ ಪ್ರಯುಕ್ತ ಶ್ರೀ ಬಂದ ಲಕ್ಷ್ಮೀ ದೇವಿ ಕ್ರೀಡಾಂಗಣದಲ್ಲಿ ಬುಧವಾರ ದಂದು ಗಾಳಿಪಟ ಉತ್ಸವ ವಿಜೃಂಭಣೆಯಿಂದ ಜರುಗಿತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಂಸ್ಥೆ ಛೇರ್ಮನ್ ರಾದ ಪಂಡಿತ ಪೂಜಾರಿ ಭಾರತೀಯ ಪ್ರತಿಯೊಂದು ಹಬ್ಬಗಳಿಗೆ ತನ್ನದೇ ಆದಂತ ಇತಿಹಾಸ ಮತ್ತು ವೈಜ್ಞಾನಿಕ ಕಾರಣಗಳಿವೆ. ಋತುಮಾನಗಳಿಗೆ ತಕ್ಕಂತೆ ನಮ್ಮ ಸಂಸ್ಕೃತಿಯಲ್ಲಿ ಆಹಾರದ ಬದಲಾವಣೆ, ಉಡುಗೆ ತೊಡಗೆಗಳಲ್ಲಿ ಬದಲಾವಣೆಗಳನ್ನು ಕಾಣುತ್ತೇವೆ.ಗಾಳಿಪಟದ ಉತ್ಸವವು ಆಶಾಡ ಮಾಸದ ಪ್ರಮುಖ ಗುಳ್ಳವನ ಹಬ್ಬವಾಗಿದ್ದು ಈ ಸಮಯದಲ್ಲಿ ಮಕ್ಕಳು ಪ್ರಕೃತಿಯ ಜೊತೆಗೆ ಉತ್ತಮ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸುನಿಲ್ ಚರ್ಟಿ, ನಿರಂಜ್ ಛೋಪ್ರಾ, ಪಿ ವಿ ಸಿಂಧೂ ಮತ್ತು ಮೇರಿ ಕೋಮ್ ಎಂಬ ನಾಲ್ಕು ತಂಡಗಳಿಂದ ಗಾಳಿಪಟ ಸ್ಫರ್ಧೆ ಜರುಗಿತು,ವಿದ್ಯಾರ್ಥಿನಿಯರು ಸಾಂಸ್ಕೃತಿಕ ವೃತ್ತಿಗಳಿಗೆ ಹೆಜ್ಜೆ ಹಾಕಿದರು. ಸುಮಾರು ೬೮ ಬಗೆಯ ಖಾದ್ಯಗಳ ಭರ್ಜರಿ ಭೋಜನ ಜರಗಿತು.
ಹಿರಿಯರಾದ ಚಿಕ್ಕಪ್ಪ ನಾಯಕ, ಕಾಡಯ್ಯ ಗಣಾಚಾರಿ, ಮುತ್ತಪ್ಪ ಹೊಸಪೇಟಿ, ಶೇಖರ ಭದ್ರಶೆಟ್ಟಿ, ಸಂಗನಗೌಡ ಪಾಟೀಲ, ಪಿ ಜಿ ಸನ್ನಟ್ಟಿ, ಪ್ರಾಚಾರ್ಯರಾದ ಪರಶುರಾಮ ನಾಯಕ, ಯೋಗ ಶಿಕ್ಷಕರಾದ ರಾಘವೇಂದ್ರ ನೀಲನ್ನವರ ಸಂಸ್ಥೆಯ ಪದಾಧಿಕಾರಿಗಳು, ಉಪನ್ಯಾಸಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.