ಕೊಪ್ಪಳ ಆಗಸ್ಟ್ 29, ತಾಲೂಕಿನ ಕಿನ್ನಾಳ ಗ್ರಾಮದ ಕನಕದಾಸ ವೃತ್ತದ ಬಳಿ ಹೊಸಮನಿ ಕ್ರಾಸ್ ಹತ್ತಿರ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ವತಿಯಿಂದ ಗ್ರಾಮದ ಹಿರಿಯ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ರಾದ ಪ್ರಸನ್ನ ಗಣಾದ್ ಮತ್ತು ಇನ್ನೋವ೯ ಗ್ರಾಮದ ಮುಖಂಡ ಮತ್ತು ತಾಲೂಕ ಪಂಚಾಯಿತಿಯ ಮಾಜಿ ಅಧ್ಯಕ್ಷ ಅಮರೇಶ್ ಉಪಲಾಪುರ ರವರುಗಳ ಜಂಟಿ ನೇತೃತ್ವದಲ್ಲಿ ಗೆಳೆಯರ ಬಳಗದ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇರಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಕಿನ್ನಾಳ ಕಾ ರಾಜಾ ಎಂಬ ಹೆಸರಿನ ಗಣೇಶ್ ಮೂರ್ತಿ ಪ್ರತಿಷ್ಠಾಪಿಸಿ ಪ್ರತಿದಿನ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸುವುದಲ್ಲದೆ ಶುಕ್ರವಾರದಂದು ಬೆಳಿಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಸಹ ಏರ್ಪಡಿಸಲಾಗಿತ್ತು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗ ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಗೆಳೆಯರ ಬಳಗದ ಪದಾಧಿಕಾರಿಗಳು ಯುವಕರು ಒಳ್ಳೆಯ ವ್ಯವಸ್ಥೆಯನ್ನು ಮಾಡಿ ಅಚ್ಚುಕಟ್ಟಾದ ಕಾರ್ಯ ಕ್ರಮ ನಡಿಸಿ ಜನ ಮನ ಸೆಳೆಯುವಲ್ಲಿ ಯಶಸ್ವಿ ಯಾದರು,
ಸಂಭ್ರಮದ ಗಣೇಶೋತ್ಸವ ಆಚರಣೆ ಕಾರ್ಯದಲ್ಲಿ ತೊಡಗಿರುವ ಗೆಳೆಯರ ಬಳಗದ ಪದಾಧಿಕಾರಿ ಯುವಕರುಗಳಾದ ರಮೇಶ್ ಉಪ್ಪಾರ್, ಸುಮಂತ್ ಉಪ್ಪಾರ್, ಸಂಕೇತ್, ಶಂಕರ್ ಡಂಬಳ್, ಶಿವು ಕಾಟ್ರಳ್ಳಿ, ಬಸವರಾಜ್ ವಾಲ್ಮೀಕಿ, ಕಾಶಿ, ಮಂಜುನಾಥ ಉಪ್ಪಾರ್, ಆನಂದ್, ತಿಪ್ಪೇಶ್ ಹೊನ್ನುಂಚಿ, ರವಿ ಹುಳ್ಳಿ, ಮಂಜುನಾಥ, ಹನುಮೇಶ್, ಭರಮಪ್ಪ, ವಿಕಾಸ, ವೀರೇಶ್ ಲಾಳಕ್ಕಿ, ದುರ್ಗೇಶ್ ಸೇರಿದಂತೆ ಅನೇಕ ಜನ ಯುವಕರು ಕಾರ್ಯಕರ್ಮದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ, ಅವರೆಲ್ಲರಿಗೆ ಶ್ರೀ ಗಣೇಶನ ಕೃಪ ಆಶೀರ್ವಾದ ಸಿಗಲಿ ಎಂದು ಶುಭ ಹಾರೈಸಲಾಗಿದೆ