ಕಾಗವಾಡ:ಸರ್ಕಾರ ಸಮುದಾಯ ಭವನಗಳಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು ಸಾರ್ವಜನಿಕರು ಅದರ ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ರಾಜು ಕಾಗೆ ಹೇಳಿದರು.
ಅವರು ಗುರುವಾರ ದಿ.17 ರಂದು ಕಾಗವಾಡ ಮತಕ್ಷೇತ್ರದ ಐನಾಪೂರ ಗ್ರಾಮದ ಪದ್ಮಾವತಿ ಯುವಕ ಮಂಡಳದ ಸಮುದಾಯ ಭವನ ಹಾಗೂ ನಾಯಿಕ ಓಣಿಯಲ್ಲಿ ಸಮುದಾಯ ಭವನ, ಮೋಳೆ ಗ್ರಾಮದ ಕೋಳೇಕರ ಓಣಿಯಲ್ಲಿ ಸಮುದಾಯ ಭವನ, ಶಿವ ಬಸವ ಭಜನಾ ಮಂಡಲ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಾ
ಸಮುದಾಯ ಭವನಗಳಲ್ಲಿ ಸಾರ್ವಜನಿಕರ ಹಾಗೂ ಮಹಿಳೆಯರ ಸಬಲೀಕರಣಗೊಳಿಸುವ ಕಾರ್ಯಗಳನ್ನು ಹಮ್ಮಿಕೊಂಡು ಅವುಗಳ ಸದುಪಯೋಗ ಕಾರ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.
ಈ ವೇಳೆ ಮುಖಂಡರಾದ ಸುಭಾಷ ಪಾಟೀಲ,ಗೋಪಾಲ ಕಟ್ಟಿ ಚಮನರಾವ ಪಾಟೀಲ ಪ ಪಂ ಸದಸ್ಯ ಪ್ರವೀಣ ಗಾಣಿಗೇರ,ಅರುಣ ಗಾಣಿಗೇರ,ಸಂಜು ಭಿರಡಿ, , ದಾದಾ ಜೇಂತೆನ್ನವರ.ಸುರೇಶ ಗಾಣಿಗೇರ,ಸುರೇಶ ಅಡಿಶೇರಿ, ಕುಮಾರ ಜಯಕರ, ಅಮಗೋಂಡ ಒಡೆಯರ, ಸುದರ್ಶನ ಜೇಂತೆನ್ನವರ, ಗುರುರಾಜ ಮಡಿವಾಳ, ದೋಂಡಿಬಾ ಹರಳೆ,ಸಾಂವು ದೋಡಮನಿ,ಸರೋಜನಿ ಗಾಣಿಗೇರ,ಅನುಪ ಶೆಟ್ಟಿ,ಪ್ರಕಾಶ ಕೊರ್ಬು, ರಮೇಶ ದೋಡಮನಿ, ಹಣಮಂತ ದೋಡಮನಿ,ಮಹಾದೇವ ದೋಡಮನಿ ಸಿದರಾಯ ದೋಡಮನಿ, ನಾಗಪ್ಪ ದೋಡಮನಿ, ವಿನೋದ ಕೋಳೆಕರ,ಗುತ್ತಿಗೆದಾರ ಶಿವಾನಂದ ಮಡಿವಾಳ,ಸುನೀಲ ಚಮಕೇರಿ, ಅಶೋಕ ಹುಗ್ಗಿ, ರಾಜು ಕನಾಳೆ,ಸಿದ್ದು ಹವಳೆ,ಇತರರು ಇದ್ದರು