ಕೊಪ್ಪಳ: (ಡಿ.13), ನಾವು ಆಸ್ಪತ್ರೆಯಲ್ಲಿ ಸ್ವಚ್ಚತಾ ಕಾರ್ಯ ಮಾಡುತ್ತೆವೆ. ಕಳೆದ ಹತ್ತು ವರ್ಷಗಳಿಂದ ಇದೇ ಕೆಲಸ ಮಾಡುವ ನಮಗೆ ಸಹಿತ ಉಸಿರಾಟದ ತೊಂದರೆ ಆಗಿದೆ. ವೈದ್ಯರು ಅಲರ್ಜಿ ಎನ್ನುತ್ತಾರೆ, ಕಾರಣ ಕೇಳಿದರೆ ಮಾಲಿನ್ಯದ ಕಡೆಗೆ ಬೊಟ್ಟು ಮಾಡುತ್ತಾರೆಂದು ಕಿಮ್ಸ್ ಸಿಬ್ಬಂದಿ ನೌಕರರ ಸಂಘದ ಕಾರ್ಯಾಧ್ಯಕ್ಷ ಯಲ್ಲಪ್ಪ ಆಡಿನ ಹೇಳಿದರು.
ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಕೊಪ್ಪಳ ಪಕ್ಕದಲ್ಲಿ ಬಲ್ನೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ ಇಂಡಿಯಾ ಮಾಲಿನ್ಯಕಾರಕ ಕಾರ್ಖಾನೆಗಳ ವಿಸ್ತರಣೆ ಬೇಡ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ ೪೪ನೇ ದಿನದ ಧರಣಿ ಬೆಂಬಲಿಸಿ ಮಾತನಾಡಿದರು.
ಕಿಮ್ಸ್ ಸಿಬ್ಬಂದಿ ನೌಕರರ ಸಂಘದ ಸದಸ್ಯರು ಅಶೋಕ ವೃತ್ತದಿಂದ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ ಇಂಡಿಯಾ ವಿಸ್ತರಣೆ ಬೇಡವೆಂದು ಘೋಷಣೆ ಕೂಗುತ್ತಾ ಧರಣಿ ಸ್ಥಳಕ್ಕೆ ಬಂದು ಹೋರಾಟ ಬೆಂಬಲಿಸಿದರು.
ಮುಂದುವರೆದು, ಇದು ನಮಗಷ್ಟೇ ಅಲ್ಲದೇ ಆಸ್ಪತ್ರೆಗೆ ಬರುವ ರೋಗಿಗಳು ಕಾರ್ಖಾನೆ ದೂಳು ಬಾಧಿತರು ಎಂದು ಗೊತ್ತಾದಾಗ ಅವರನ್ನು ಮಾತನಾಡಿಸುತ್ತೇವೆ, ಅವರ ಸಮಸ್ಯೆ ಕಾರ್ಖಾನೆಗಳ ಮಾಲಿನ್ಯ. ನಾವು ಆಸ್ಪತ್ರೆ ಸ್ವಚ್ಛಗೊಳಿಸುವಾಗ ಆಸ್ಪತ್ರೆ ಸ್ಥಳ ಸಂಪೂರ್ಣ ದೂಳು, ಹೊಗೆಯಂತ ಪದಾರ್ಥ ಮೆತ್ತಿಕೊಂಡಿರುತ್ತದೆ. ಇದು ಎಲ್ಲಿಂದ ಬರುತ್ತದೆ ಎಂದು ತಿಳಿಯಲು ನಮಗೇನೂ ಕಷ್ಟವಲ್ಲ. ಕೆವಲ ೧ ಕಿ.ಮೀ. ಅಂತರದಲ್ಲಿ ಬೃಯತ್ ಗಾತ್ರದ ಬಲ್ಡೋಟಾ ಕಾರ್ಖಾನೆಯ ಏಕೈಕ ಚಿಮಣಿ ಸಹಿಸಿಕೊಳ್ಳಲು ಆಗದಷ್ಟು ಮಾಲಿನ್ಯ ಮಾಡುತ್ತಿದೆ. ಅದರ ಜೊತೆಗೆ ಗಾಳಿಯ ಮೂಲಕ ಬರುವ ಹತ್ತಿರದ ಕಾರ್ಖಾನೆಗಳು ಎಂದರು.
ಕಿಮ್ಸ್ ಸಿಬ್ಬಂದಿ ನೌಕರರ ಸಂಘದ ಅಧ್ಯಕ್ಷರಾದ ರತ್ನಮ್ಮ ಪುರಾಣಿಕಮಠ ಅವರು ಮಾತನಾಡಿ, ನಾವು ಆಸ್ಪತ್ರೆ ಸ್ವಚ್ಚಗೊಳಿಸುವ ಕೆಲಸ ಮಾಡುವಾಗ ಕೈ ಇಟ್ಟ ಜಾಗದಲ್ಲಿ ಕರಿಬೂದಿ, ದೂಳು. ನಾವು ಬಲ್ಬೋಟ ಕಾರ್ಖಾನೆಯ ಚಿಮಣಿ ಬಾಯಿಯಲ್ಲಿದ್ದೇವೆ. ಯಾರು ಇಲ್ಲಿಂದ ಹೋದರೂ ನಾವು ಇಲ್ಲಿಯೆ ಇರಬೇಕು. ನಮ್ಮ ಸೇವಾ ಕಾಲದವರೆಗೆ ಆರೋಗ್ಯದಿಂದ ಇರುವ ಭರವಸೆ ಇರುವದಿಲ್ಲ. ಇಲ್ಲಿಗೆ ಬರುವ ಬಹುತೇಕ ರೋಗಿಗಳು ಅಸ್ತಮಾ ಪೀಡಿತರೆ ಆಗಿದ್ದಾರೆ. ಕೊಪ್ಪಳ ಉಳಿಯಲು ಬಲ್ಡೋಟ ಕಾರ್ಖಾನೆ ತೊಲಗಬೇಕು ಎಂದರು.
ಧರಣಿಯಲ್ಲಿ ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಕಿಮ್ಸ್ ಸಿಬ್ಬಂದಿ ನೌಕರರ ಸಂಘದ ರಮೇಶ ಪಿ.ಬಿ, ಬಸಮ್ಮ ದೊಡ್ಡಮನಿ, ಅಕ್ಕಮ್ಮ ನೂಲ್ವಿ, ಮಂಜುನಾಥ ಮಡಿವಾಳರ, ಹನುಮವ್ವ ಕನಕಾಪುರ, ಮಂಜುನಾಥ ಕೆ.ಎಸ್, ಅಣ್ಣಪ್ಪಯ್ಯ ಪುರಾಣಿಕ್, ಹನುಮವ್ವ ವಿ, ಸಂತೋಷ ಹೊಸಮನಿ, ಬಸವರಾಜ ಉರಿಗೆಜ್ಜಿ, ಹುಲಿಗೆಮ್ಮ ಕೆ, ಈರಮ್ಭ ಕಟ್ಟಿಮನಿ, ಬಸವರಾಜ್ ತಲ್ಲೂರ, ಸಾವಿತ್ರಿ ಅಂಗಡಿ, ವಸಂತಾ ಗದಗಿನಮಠ, ಸುಂಕಮ್ಮ ಪಡಚಿಂತಿ, ಗಂಗಮ್ಮ ಕವಲೂರು, ನಿವೃತ್ತ ನೌಕರರು ಎಂ. ಜಂಬಣ್ಣ,, ಡಿ.ಎಂ.ಬಡಿಗೆರ್, ಎಸ್.ಬಿ. ರಾಜೂರು, ಗಾಳೆಪ್ಪ ಮುಂಗೋಲಿ, ಗವಿಸಿದ್ದಪ್ಪ ಹಲಿಗಿ, ಭೀಮಪ್ಪ ಯಲಬುರ್ಗಾ, ಮೂಕಪ್ಪ ಮೇಸ್ತಿç ಬಸಾಪುರ, ಶಂಭುಲಿAಗಪ್ಪ ಹರಗೇರಿ, ಬಸವರಾಜ್ ಶೀಲವಂತರ, ಮಹಾಂತೇಶ ಕೊತಬಾಳ ಪಾಲ್ಗೊಂಡರು.


