ಕಾಗವಾಡ:ಕಾಗವಾಡ ಮತಕ್ಷೇತ್ರದ ಬರಪೀಡಿತ ಭಾಗದ ರೈತರ ಕನಸಿನ ಬಹುನಿರೀಕ್ಷೀತ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಮೊದಲ ಹಂತದ ಕಾಮಗಾರಿ ಕಳೆದ ಎರಡು ತಿಂಗಳಿಂದ ಪ್ರಾರಂಭಗೊಂಡು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.ಆದರೆ ಈಗ ಕೆಂಪವಾಡ ಗ್ರಾಮದ ಹತ್ತಿರ ಮೇನ್ ಪೈಪಲೈನ್ ಒಡೆದು ರೈತರು ಹುಲುಸಾಗಿ ಬೆಳೆದ ೨೫ ಎಕರೆ ಜಮೀನಿನಲ್ಲಿ ನೀರು ನುಗ್ಗಿ ರೈತರಿಗೆ ವರದಾನವಾಗಬೇಕಿದ್ದ ಯೋಜನೆ ಶಾಪವಾಗಿ ಪರಿಣಮಿಸಿದೆ.
ಇಂದು ದಿನಾಂಕ ೨೯ ಸೋಮವಾರದಂದು ಬೆಳಿಗ್ಗೆ ಎಂಟು-ಒಂಭತ್ತು ಸುಮಾರಿಗೆ ಏತ ನೀರಾವರಿ ಕಾಲುವೆಯ ಮೇನ್ ಪೈಪಲೈನ ಒಡೆದು ತಮ್ಮ ಬೆಳೆಗಳಿಗೆ ನೀರು ನುಗ್ಗಿದ್ದನ್ನು ಕಂಡು ಅಲ್ಲಿಯ ರೈತರು ಸಂಭಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಇಲ್ಲಿಯವರೆಗೆ ಯಾವ ಅಧಿಕಾರಿಗಳೂ ಅದಕ್ಕೆ ಸ್ಪಂದಿಸಿಲ್ಲ ತಾವು ಕಷ್ಟ ಪಟ್ಟು ಬೆಳೆದ ಬೆಳೆಯು ತಮ್ಮ ಕಣ್ಣು ಮುಂದೆ ಹಾಳಾಗುತ್ತಿರುವದನ್ನ ಕಂಡ ರೈತ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಂಭಂಧಪಟ್ಟ ಅಧಿಕಾರಿಗಳು ಕೂಡಲೇ ಇದನ್ನು ರಿಪೇರಿ ಮಾಡಬೇಕು ಮತ್ತು ಇದಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ಸಹದೇವ ಬಂಡಗರ,ವಿಠ್ಠಲ ಬಂಡಗರ,ಮಾಯಪ್ಪ ಬಂಡಗರ,ಅಮಸಿದ್ದ ಬಂಡಗರ,ನೀಲಕಂಠ ಬಂಡಗರ,ನಿಂಗಪ್ಪ ಬಂಡಗರ,ಬಾಳು ಬಂಡಗರ,ಮಹದೇವ ಬಂಡಗರ,ಕಲ್ಲಪ್ಪ ಬಂಡಗರ,ಅಮಸಿದ್ದ ಬಂಡಗರ,ಲಕ್ಷ್ಮಣ ಲಂಗೋಟಿ,ಮಯೂರೇಶ ಬಂಡಗರ,ಸೇರಿದಂತೆ ಅನೇಕ ರೈತರ ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟವಾಗಿದೆ.
ಒಟ್ಟಿನಲ್ಲಿ ರೈತರಿಗೆ ವರದಾನವಾಗಬೇಕಿದ್ದ ಯೋಜನೆ ರೈತರ ಬೆಳೆಗಳಿಗೆ ಹಾನಿಯುಂಟು ಮಾಡಿದ್ದು ರೈತರ ಮುಖದಲ್ಲಿಯ ಮಂದಹಾಸ ಅಡಗಿದೆ.
ಬಾಕ್ಸ್ :
ಹುಲುಸಾಗಿ ಬೆಳೆದ ಬೆಳೆಯು ಪೈಪಲೈನ್ ಒಡೆದದ್ದರಿಂದ ಸಂಪೂರ್ಣ ನಾಶವಾಗಿವೆ.ಶೀಘ್ರಗತಿಯಲ್ಲಿ ಅದನ್ನು ರಿಪೇರಿ ಮಾಡಬೇಕು ಮತ್ತು ಬೆಳೆ ಹಾನಿಗೆ ಪರಿಹಾರ ನೀಡಬೇಕು
-ಸಹದೇವ ಬಂಡಗರ
ರೈತರು
ಬಾಕ್ಸ್:
ಕಳೆದ ಒಂದು ತಿಂಗಳಿಂದ ನೀರು ಬಿಡಲಾಗುತ್ತಿದೆ ಆದರೆ ಇಲ್ಲಿಯವರೆಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಆದರೆ ಇವತ್ತು ಇದ್ದಕ್ಕಿದ್ದಂತೆ ನೀರು ಹೊರಬರುತ್ತಿರುವ ಬಗ್ಗೆ ರೈತರು ನಮ್ಮ ಗಮನಕ್ಕೆ ತಂದಿದ್ದಾರೆ. ಶೀಘ್ರವಾಗಿ ಆ ಸಮಸ್ಯೆಯನ್ನು ಪರಿಹರಿಸಲಾಗುವದು.
-ಪ್ರವೀಣ ಹುಣಶಿಕಟ್ಟಿ
ಕಾರ್ಯನಿರ್ವಾಹಕ ಅಭಿಯಂತರರು ನೀರಾವರಿ ಇಲಾಖೆ ಅಥಣಿ