ಹಲವು ಒಡಂಬಡಿಕೆಗಳಿಗೆ ಸಹಿ ಸಾಧ್ಯತೆ; ವಿಜಯವಾಡಕ್ಕೆ ಖಂಡ್ರೆ, ನಾಳೆ ಪವನ್ ಕಲ್ಯಾಣ್ ಜೊತೆ ಸಭೆ

Ravi Talawar
ಹಲವು ಒಡಂಬಡಿಕೆಗಳಿಗೆ ಸಹಿ ಸಾಧ್ಯತೆ; ವಿಜಯವಾಡಕ್ಕೆ ಖಂಡ್ರೆ, ನಾಳೆ ಪವನ್ ಕಲ್ಯಾಣ್ ಜೊತೆ ಸಭೆ
WhatsApp Group Join Now
Telegram Group Join Now

ಸೆ.26: ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಇಂದು ವಿಜಯವಾಡಕ್ಕೆ ಪ್ರಯಾಣ ಬೆಳೆಸಿದ್ದು, ನಾಳೆ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರೊಂದಿಗೆ ಸಭೆ ನಡೆಸಲಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿ, ಅರಣ್ಯ ಸಚಿವರೊಂದಿಗೆ ಸಭೆ ನಡೆಸಿದ್ದ ಪವನ್ ಕಲ್ಯಾಣ್, ತಮ್ಮ ರಾಜ್ಯಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ 2 ದಿನಗಳ ಆಂಧ್ರ ಪ್ರದೇಶ ಪ್ರವಾಸ ಕೈಗೊಂಡಿರುವ ಈಶ್ವರ ಖಂಡ್ರೆ, ನಾಳೆ ಸಭೆಯ ಬಳಿಕ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಲಿದ್ದಾರೆ.

ಮಹತ್ವದ ಒಡಂಬಡಿಕೆಗಳಿಗೆ ಸಹಿ: ಈ ಭೇಟಿಯ ವೇಳೆ ಇಬ್ಬರೂ ಸಚಿವರ ಸಮ್ಮುಖದಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕದ ನಡುವೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. ಈ ಒಪ್ಪಂದಗಳಲ್ಲಿ ಆನೆ ಸೆರೆ ಕಾರ್ಯಾಚರಣೆ ಮತ್ತು ಆನೆ ಪಳಗಿಸುವ ಬಗ್ಗೆ ಆಂಧ್ರಪ್ರದೇಶದ ಅರಣ್ಯ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡುವುದು, ಅರಣ್ಯ ಮತ್ತು ಅರಣ್ಯ ಸಂಪನ್ಮೂಲ ಸಂರಕ್ಷಣೆ ಕುರಿತ ಜ್ಞಾನ ವಿನಿಮಯವೂ ಸೇರಿದೆ.

WhatsApp Group Join Now
Telegram Group Join Now
Share This Article