ರಾಯಬಾಗ: ರೈಲ್ವೆ ಸ್ಟೇಷನ(ಖೈರವಾಡಿ) ಶ್ರೀ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ನಡೆದ ವಿವಿಧ ಶರ್ಯತ್ತುಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ಜಾತ್ರಾ ಕಮಿಟಿಯವರು ವಿತರಿಸಿದರು.
ಶರ್ಯತ್ತುಗಳ ವಿವರ: ಜೋಡು ಎತ್ತಿನ ಗಾಡಿ ಶರ್ಯತ್ತು: ಶಂಕರ ಪೂಜೇರಿ(ಅಲಖನೂರ) ಪ್ರಥಮ, ಪ್ರತಾಪ ಕರಿಗಾರ (ಅಲಖನೂರ) ದ್ವಿತೀಯ ಮತ್ತು ರಮೇಶ ಕುಂಬಾರ (ರಾಯಬಾಗ) ತೃತೀಯ ಬಹುಮಾನ ಪಡೆದರು.
ಕುದುರೆ ಶರ್ಯತ್ತು: ಅಕ್ಷಯ (ರಾಯಬಾಗ)ಪ್ರಥಮ, ಅಪ್ರೋಜ್ ಸುಂದರಿ(ನಾಗರಮುನ್ನೋಳ್ಳಿ) ದ್ವಿತೀಯ, ಮಹಾದೇವ ಈಟೇಕರಿ(ಭಿರಡಿ) ತೃತೀಯ ಬಹುಮಾನ ಪಡೆದರು.
ಸೈಕಲ್ ಶರ್ಯತ್ತು: ಹನುಮಾನ ಚೋಪಡೆ (ಸಾಂಗಲಿ) ಪ್ರಥಮ, ಬಾಳು ಹೀರೆಮಠ(ಇಂಚಲಕರಂಜಿ) ದ್ವಿತೀಯ ಮತ್ತು ಬಸು ಧರ್ಮಟ್ಟಿ (ಧರ್ಮಟ್ಟಿ) ತೃತೀಯ ಬಹುಮಾನ ಪಡೆದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಆರ್.ಎಚ್.ಗೊಂಡೆ, ಅಪ್ಪಾಸಾಹೇಬ ಕೆಂಗನ್ನವರ, ಗುಣಪಾಲ ಬಡೋರೆ, ಮಹಾವೀರ ಶೆಟ್ಟಿ, ರಮೇಶ ಕುಂಬಾರ, ಸಂಜು ಬಾವಚೆ, ಸಂತೋಷ ಶೆಟ್ಟಿ, ಹಾಲಪ್ಪ ಅಳಗವಾಡಿ, ತಾನಾಜಿ ದೀಪಾಳೆ, ಪ್ರಭಾಕರ ಗೆನ್ನಾನಿ, ಬೀರಪ್ಪ ಗೆನ್ನಾನಿ, ಶ್ರೀಪತಿ ದೇಸಾಯಿ, ಜಿ.ಎಸ್.ಕಲಾಲ ಸೇರಿ ಜಾತ್ರಾ ಕಮಿಟಿ ಸದಸ್ಯರು ಇದ್ದರು.


