ವಿಜೃಂಭಣೆಯಿಂದ ಕೇರಿಲಕ್ಕವ್ವಾದೇವಿ ಜಾತ್ರಾಮಹೋತ್ಸವ

MK HasiruKranti
ವಿಜೃಂಭಣೆಯಿಂದ ಕೇರಿಲಕ್ಕವ್ವಾದೇವಿ ಜಾತ್ರಾಮಹೋತ್ಸವ
WhatsApp Group Join Now
Telegram Group Join Now

 

ಮುಗಳಖೋಡ (31) ಪಟ್ಟಣದ ನೀರಲಖೋಡಿ ಅಂಗಡಿ ತೋಟದ ಕೇರಿಲಕ್ಕವ್ವಾದೇವಿ ಜಾತ್ರಾಮಹೋತ್ಸವ ನಿಮಿತ್ಯ ಮಂಗಳವಾರ 31 ರಂದು ಬೆಳಗ್ಗೆ 3 ರಿಂದ 6 ಗಂಟೆವರೆಗೆ ಭಕ್ತರಿಂದ ದೀರ್ಘದಂಡ ನಮಸ್ಕಾರ ನಂತರ ದೇವಿಗೆ ಅಭಿಷೇಕ ಪೂಜೆ ಸಲ್ಲಿಸಿ ಉಡಿತುಂಬಿ ನೈವೇದ್ಯ ಅರ್ಪಿಸಿ ಅನ್ನ ದಾಸೋಹ ಸಾಯಂಕಾಲ  6 ಗಂಟೆಗೆ ಸಿದ್ದಪ್ಪ ಅಂಗಡಿಯವರ ಮಹಾಮನೆಯಿಂದ ಸಕಲ ವಾದ್ಯವೃಂದ ಕುಂಭಾರೂತಿ ಹೊತ್ತ ಸುಮಂಗಲೇಯರೊಂದಿಗೆ ದೇವಸ್ಥಾನದವರೆಗೆ ದೇವಿ ಮೂರ್ತಿಯ ಭವ್ಯ ಮೆರವಣಿಗೆಯೊಂದಿಗೆ ಆಗಮನ ಪೂಜೆ ಮಂಗಳಾರತಿ ನಡೆಯಿತು. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಮುತ್ತೂರಿನ ಭೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘದ ಅಕ್ಷತಾ ಸಂಗಡಿಗರು ಹಾಗೂ ಕುಂಭಾರಿ ಗೇನಸಿದ್ದ ಡೊಳ್ಳಿನ ಗಾಯನ ಸಂಘದ ಮಹಾಸಿದ್ದ ಸಂಗಡಿಗರಿಂದ ಡೊಳ್ಳಿನ ಗಾಯನ ಕಾರ್ಯಕ್ರಮ ಆಯೋಜಿನೆಯೊಂದಿಗೆ ದೇವಿ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಸಿದ್ದು ಅಂಗಡಿ ಪುರಸಭೆಯ ಸದಸ್ಯ ಕೆಂಪಣ್ಣಾ ಅಂಗಡಿ, ಭೀಮಪ್ಪ ಅಂಗಡಿ ,ಗಂಗಪ್ಪಾ ಹೊಸಟ್ಟಿ, ಶ್ರೀಶೈಲ ಅಂಗಡಿ,ಮುತ್ತಪ್ಪ ಅಂಗಡಿ, ಸಂಜು ಕೋರೆ,ವಿವೇಕ ಸಪ್ತಸಾಗರ,ಕಾಡಪ್ಪ ಅಂಗಡಿ,ಶಿವಪ್ಪ ಕಾಪಶಿ,ಅಶೋಕ ಅಂಗಡಿ,ಮಲ್ಲಪ್ಪ ಮುಗಳಖೋಡ,ಶಿವಪ್ಪ ಅಂಗಡಿ ಹಾಗೂ ಸಾವಿರಾರು ಭಕ್ತರು ಇದ್ದರು.
WhatsApp Group Join Now
Telegram Group Join Now
Share This Article