ಬೆಂಗಳೂರು, ಜೂನ್.03: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಪತ್ರಿಕಾ ಪ್ರಕಟಣೆ ನೀಡಿ, ಸುದ್ದಿಗೋಷ್ಠಿ ಮಾಡದೇ ಏಕಾಏಕಿ ಪ್ರಕಟಿಸಲಾಗಿತ್ತು. ಇದು ಭಾರೀ ಆಕ್ರೋಶ, ಗೊಂದಲಕ್ಕೆ ಕಾರಣವಾಗಿತ್ತು. ಸದ್ಯ ಈಗ ನಿರ್ದೇಶಕ ಪ್ರಸನ್ನ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನೀತಿ ಸಂಹಿತೆ ಜಾರಿ ಇರುವುದರಿಂದ ಈ ಗೊಂದಲವಾಗಿದೆ ಎಂದು ತಿಳಿಸಿದ್ದಾರೆ. ಹಾಗೆ ಮುಂದೆ ಈ ರೀತಿಯ ತಪ್ಪು ನಡೆಯುವುದಿಲ್ಲ ಎಂದಿದ್ದಾರೆ.
ಔಟ್ ಆಫ್ ಸಿಲೆಬಸ್ ವಿಚಾರವಾಗಿ ಸಾಕಷ್ಟು ಗೊಂದಲ ಗದ್ದಲ ಎದುರಾಗಿತ್ತು. ಇದೇ ಕಾರಣಕ್ಕೆ ಕೆಇಎ ಕಾರ್ಯನಿರ್ವಾಹಕಿ ರಮ್ಯಾ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದರ ಜೊತೆಗೆ ಕೆಇಎ ಮೊನ್ನೆ ದೀಢಿರ್ ಆಗಿ ಸಿಇಟಿ ಫಲಿತಾಂಶ ಘೋಷಿಸಿ ಮತ್ತೆ ಎಡವಟ್ಟು ಮಾಡಿತ್ತು. ಸುದ್ದಿಗೋಷ್ಠಿ ಕರೆಯದೇ ಪತ್ರಿಕಾ ಪ್ರಕಟಣೆ ಹೊರಡಿಸಿ ಫಲಿತಾಂಶ ಘೋಷಿಸಲಾಗಿತ್ತು. ನಿನ್ನೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕ ಹೆಚ್ ಪ್ರಸನ್ನ ಪತ್ರಿಕಾಗೋಷ್ಠಿ ನಡೆಸಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ಫಲಿತಾಂಶ ಪ್ರಕಟಣೆ ಮಾಡಲಾಗಿದ್ದು ಪತ್ರಿಕಾಗೋಷ್ಠಿ ಮಾಡದೇ ರಿಸಲ್ಟ್ ಅನೌನ್ಸ್ ಮಾಡಲಾಗಿದೆ. ಫಲಿತಾಂಶ ವಿಚಾರವಾಗಿ ಸಾಕಷ್ಟು ಒತ್ತಡವಿತ್ತು. ಈ ಹಿನ್ನೆಲೆ ಫಲಿತಾಂಶವನ್ನು ಬೇಡ ಬಿಡುವ ನಿಟ್ಟಿನಲ್ಲಿ ಎಡವಟ್ಟಾಗಿದೆ. ನಂತರದಲ್ಲಿ ನಮಗೆ ಅರಿವಾಯ್ತು ಸಾಕಷ್ಟು ಗೊಂದಲ ಆಯ್ತು ಇನ್ಮುಂದೆ ಸರಿಯಾಗಿ ನಿಯಮಗಳನ್ನು ಫಾಲೋ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನೂ ಈ ವರ್ಷ 3,49,653 ಅಭ್ಯರ್ಥಿಗಳ ಪೈಕಿ 3,10,314 ಮಂದಿ ಪರೀಕ್ಷೆ ಬರೆದು ರ್ಯಾಂಕಿಂಗ್ಗೆ ಅರ್ಹರಾಗಿದ್ದಾರೆ. ಅರ್ಹ ವಿದ್ಯಾರ್ಥಿಗಳ ಪೈಕಿ 1,39,274 ವಿದ್ಯಾರ್ಥಿಗಳು ಮತ್ತು 1,71,040 ವಿದ್ಯಾರ್ಥಿನಿಯರಿದ್ದಾರೆ. ಈ ವರ್ಷ ಒಟ್ಟು 2,74,595 ವಿದ್ಯಾರ್ಥಿಗಳು ಎಂಜಿನಿಯರಿಂಗ್‌ಗೆ ಅರ್ಹರಾಗಿದ್ದಾರೆ. ಎಂಜಿನಿಯರಿಂಗ್‌ನಲ್ಲಿ 9 ವಿದ್ಯಾರ್ಥಿಗಳು ಮತ್ತು ಒಬ್ಬ ವಿದ್ಯಾರ್ಥಿನಿ ಹೆಚ್ಚು ಅಂಕ ಗಳಿಸುವ ಮೂಲಕ ಬೆಂಗಳೂರಿನ ವಿದ್ಯಾರ್ಥಿಗಳು ಟಾಪ್ 10 ರ ರ್‍ಯಾಂಕ್‌ಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ.