ಜಿಂದಾಲ್ ಗೆ ಕಾನೂನು ಪ್ರಕಾರವೇ ಜಮೀನು ಮಂಜೂರು – ಕೆ.ಸಿ.ಕೊಂಡಯ್ಯ

Ravi Talawar
ಜಿಂದಾಲ್ ಗೆ ಕಾನೂನು ಪ್ರಕಾರವೇ ಜಮೀನು ಮಂಜೂರು – ಕೆ.ಸಿ.ಕೊಂಡಯ್ಯ
WhatsApp Group Join Now
Telegram Group Join Now
ಬಳ್ಳಾರಿ: ಜಿಂದಾಲ್ ಕಂಪನಿಗೆ ಕಾನೂನು ಪ್ರಕಾರವೇ ಸರ್ಕಾರ  ಜಮೀನು ಮಂಜೂರು ಮಾಡಿದೆ, ಇದರಲ್ಲೇ ಯಾವುದೇ ಅಕ್ರಮ ನಡೆದಿಲ್ಲ, ಎಲ್ಲವೂ ಪಾರದರ್ಶಕವಾಗಿ ನಡೆದಿದೆ, ವಿರೋಧ ಪಕ್ಷದವರು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ, ಇದು ಸರಿಯಲ್ಲ ಎಂದು ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಅವರು ಹೇಳಿದರು. ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹುಬ್ಬಳ್ಳಿಯ ಶಾಸಕ ಅರವಿಂದ ಬೆಲ್ಲದ ಅವರು, ಜಿಂದಾಲ್ ಗೆ ಕಾನೂನು ಪ್ರಕಾರವೇ ಕ್ರಯ ಮಾಡಿದ ಜಮೀನು ಕುರಿತು ಸುಳ್ಳು ಆರೋಪ ಮಾಡುತ್ತಿದ್ದು, ಇದು ಸರಿಯಲ್ಲ, ಬೇರೆ ಜಿಲ್ಲೆಯವರು ಅವರು, ಇದರ ಬಗ್ಗೆ ಅವರಿಗೆ ಮಾಹಿತಿ ಕೊರೆತೆ ಇರಬಹುದು, ಅವರಿಗೆ ಜಿಂದಾಲ್ ಕಂಪನಿಗೆ ಕಾನೂನು ಪ್ರಕಾರವೇ ಜಮೀನು ಕ್ರಯ ಮಾಡಿಕೊಟ್ಟಿರುವ ಕುರಿತು ಪೂರಕ ದಾಖಲೆಗಳನ್ನು ಕಳಿಸಿಕೊಡುವೆ ಎಂದರು. ಸಿ.ಎಂ.ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ, ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಜೆಎಸ್ ಡಬ್ಲ್ಯೂ ಕಂಪನಿಯವರಿಗೆ ಕ್ರಯಕ್ಕೆ ಜಮೀನು  ನೀಡಿರುವ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದೆ. ಸರ್ಕಾರಕ್ಕೆ ಇಡಿ ಸಂಪುಟದ ಸಹುದ್ಯೋಗಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.
ಜಿಂದಾಲ್ ಕಂಪನಿ ಪ್ರಾರಂಭವಾಗುವ ಮುನ್ನವೇ ಸರ್ಕಾರದ ಜೊತೆಗೆ ಮಾಡಿಕೊಂಡ ಒಪ್ಪದಂತೆ ಲೀಸ್ ಗೆ ಜಮೀನುಗಳನ್ನು ನೀಡಲಾಗಿತ್ತು, ಅದನ್ನು ಈಗ ಕ್ರಯಕ್ಕೆ ನೀಡಿದೆ. 3666 ಎಕರೆ ಜಮೀನನ್ನು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ, ನಿರ್ಧಾರವನ್ನು ತೆಗೆದುಕೊಂಡು ಪರಭಾರೆಗೆ ಸಮ್ಮತಿಸಿದೆ, ಸರ್ಕಾರದ ಈ ತೀರ್ಮಾನ ಕಾನೂನು ಪ್ರಕಾರವೇ ನಡೆದಿದ್ದರೂ ವಿನಾಕಾರಣ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಂದಾಲ್ ಉಕ್ಕು ಕಾರ್ಖಾನೆ 28 ಲಕ್ಷಕ್ಕೂ ಹೆಚ್ಚು ಟನ್ ಉತ್ಪಾದನೆ ಮಾಡುತ್ತಿದ್ದು, ಕಂಪನಿಯ ದಾಖಲೆ ಗಮನಿಸಿ ಜನರಿಗೆ ಸುಳ್ಳುಗಳನ್ನು ಹೇಳಿ ಸತ್ಯವನ್ನು ಮರೆಮಾಚುತ್ತಿದ್ದಾರೆ. ಲೀಸ್ ಕೊಡುವ ದಿನದಂದು ಇರುವ ದರದ ಆಧಾರದ ಮೇಲೆ ಒಪ್ಪಂದವಾಗಿರಲಿದೆ. ನೌಕರರ, ಎಂಜಿನಿಯರ್ ಗಳ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ಇತ್ತೀಚೆಗೆ ಪ್ಲಾಂಟ್ ನಡೆಸುವುದು ಕಷ್ಟವಾಗುತ್ತಿದೆ. ನಮ್ಮ ಭಾಗದಲ್ಲಿ ಬಹುದೊಡ್ಡ ಪ್ಲಾಂಟ್ ಇದಾಗಿದೆ, ಮತ್ತೆ ಯಾವ ಕಂಪನಿಯು ಬರೋಲ್ಲ, ಪ್ರಯತ್ನ ನಡೆದರೂ ಎಲ್ಲ ಪ್ರಕ್ರಿಯೆ ಅರ್ಧಕ್ಕೆ ನಿಂತಿದೆ. ಮಿತ್ತಲ್ ಕಂಪನಿ 4 ಸಾವಿರ ಎಕರೆ ಜಮೀನು, ಬ್ರಹ್ಮಣಿ ಸ್ಟೀಲ್ 3.5 ಸಾವಿರ ಎಕರೆ, ಎನ್ ಎಂ ಡಿಸಿ 3.5 ಸಾವಿರ ಎಕರೆ ಜಮೀನು ಪಡೆದಿದ್ದರು ಇಲ್ಲಿವರೆಗೆ ಯಾವ ಪ್ಲಾಂಟ್ ಶುರುವಾಗಿಲ್ಲ. ನೀರಿನ ಸಮಸ್ಯೆ ಎದುರಾದರೆ ಜಿಂದಾಲ್ ಕಂಪನಿ ಅವರು, ಆಲಮಟ್ಟಿ ಜಲಾಶಯದಿಂದ 1200 ಕೋಟಿ ರೂ. ಖರ್ಚು ಮಾಡಿ ಪೈಪ್ ಲೈನ್ ಮೂಲಕ ಪ್ಲಾಂಟ್ ಗೆ ನೀರು ತಂದಿದ್ದಾರೆ, ದೇಶದಲ್ಲೇ ಅತ್ಯಂತ ಮುಂಚೂಣಿಯಲ್ಲಿರುವ ಪ್ಲಾಂಟ್ ಇದಾಗಿದೆ. ಕಳೆದ 2021 ರಲ್ಲೇ ಕ್ಯಾಬಿನೆಟ್ ನಲ್ಲಿ ಹೋಗಿತ್ತು, ನಂತರ ನಾನಾ ಕಾರಣಗಳಿಂದ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. 2024ರಲ್ಲಿ ಸರ್ಕಾರ ಅನುಮತಿ ನೀಡಿದೆ, ಇದರಲ್ಲಿ ಯಾವುದೇ ಅಕ್ರಮವೂ ನಡೆದಿಲ್ಲ, ಎಲ್ಲವೂ ಪಾರದರ್ಶಕವಾಗಿದೆ  ಎಂದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಪಿ.ಗಾದೆಪ್ಪ, ಆಯಾಜ್ ಇದ್ದರು.

 

WhatsApp Group Join Now
Telegram Group Join Now
Share This Article