ಕಾಯಕ ಬಂಧುಗಳ ತರಬೇತಿಗೆ ಚಾಲನೆ ಕಾಯಕ ಬಂಧುಕಳ ಕಾರ್ಯ ಉತ್ತಮವಾಗಲಿ : ರವಿ ಎನ್ ಬಂಗಾರೆಪ್ಪನವರ

Ravi Talawar
ಕಾಯಕ ಬಂಧುಗಳ ತರಬೇತಿಗೆ ಚಾಲನೆ ಕಾಯಕ ಬಂಧುಕಳ ಕಾರ್ಯ ಉತ್ತಮವಾಗಲಿ : ರವಿ ಎನ್ ಬಂಗಾರೆಪ್ಪನವರ
WhatsApp Group Join Now
Telegram Group Join Now
ಬೆಳಗಾವಿ : ಕಾಯಕ ಬಂಧುಗಳು ಮತ್ತು ಕೂಲಿಕಾರ್ಮಿಕರು ಉದ್ಯೋಗ ಖಾತರಿ ಯೋಜನೆಯ ಜೊತೆಗೆ ಇತರ ಯೋಜನೆಗಳ ಮಾಹಿತಿಯನ್ನು ಪಡೆದಕೊಂಡು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಅದ ರವಿ ಎನ್ ಬಂಗಾರೆಪ್ಪನವರ ಹೇಳಿದರು.
ಸ್ಥಳೀಯ ತಾಲ್ಲೂಕ ಪಂಚಾಯತ ಸಭಾ ಭವನದಲ್ಲಿ ಶುಕ್ರವಾರ (ಜನೆವರಿ16) ರಂದು ಗ್ರಾಮೀಣಾವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಜಿಲ್ಲಾ ಪಂಚಾಯತ ಬೆಳಗಾವಿ, ತಾಲ್ಲೂಕ ಪಂಚಾಯತ ಬೆಳಗಾವಿ, ಗ್ರಾಮ ಸ್ವರಾಜ ಅಭಿಯಾನ- ಕರ್ನಾಟಕ, (ನಾಗರಿಕ ಸಮಾಜ ಸೇವಾ ಸಂಸ್ಥೆಗಳ ಒಕ್ಕೂಟ) ಕರ್ನಾಟಕ ಪ್ರಜ್ವಲ ಸಂಸ್ಥೆ ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ತಾಲ್ಲೂಕ ಮಟ್ಟದ ಕಾಯಕ ಬಂಧುಗಳ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ ಹೆಡಗೆ ಅವರು ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 300 ಕಾಯಕ ಬಂಧುಗಳನ್ನು ಗುರುತಿಸಿ 7 ತಂಡಗಳಂತೆ ಪ್ರತಿ ತಂಡಗಳಿಗೆ 3 ದಿನಗಳಂತೆ ತರಬೇತಿ ನೀಡಿತಿದ್ದು, ಈ ತರಬೇತಿಯ ಸದುಪಯೋಗವನ್ನು ಕಾಯಕ ಬಂಧುಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾಯಕ ಬಂಧುಗಳು ಕಾಮಗಾರಿ ಸ್ಥಳದಲ್ಲಿ ತಮ್ಮ ಯಾವರೀತಿ ಕೆಲಸವನ್ನು ನಿರ್ವಹಿಸಬೇಕು, ತಮ್ಮ ಜವಾಬ್ದಾರಿಗಳನ್ನು ಈ ತರಬೇತಿಯ ಮೂಲಕ ಪಡೆದೊಂಡು ತಮ್ಮ ತಮ್ಮ ಗ್ರಾಮ ಪಂಚಾಯತಿ ಮಟ್ಟದಲ್ಲಿ ಉತ್ತಮ ಕಾಯಕ ಬಂಧುಗಳಾಗಿ ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಸಭೆಯಲ್ಲಿ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಬಿ.ಡಿ ಕಡೇಮನಿ, ಕರ್ನಾಟಕ ಸೇವಾ ಸಂಸ್ಥೆ ಮುಖ್ಯಸ್ಥೆ ವೈಶಾಲಿ ಬಳಟಗಿ, ಡಿಐಇಸಿ ಸಂಯೋಜಕರು ಪ್ರಮೋದ ಗೋಡೆಕರ, ತಾಐಇಸಿ ಸಂಯೋಜಕ ರಮೇಶ ಮಾದರ. ರಾಜ್ಯ ಮಾಸ್ಟರ ಟ್ರೈನರ್ ಸುಜಾತಾ ಈ ಕೋರಿಶೆಟ್ಟಿ ಎಸ್.ಐ.ಆರ್.ಡಿ ಶ್ರೀಮತಿ ಕುಸುಮಾ ಅವಕ್ಕನ್ನವರ, ಎಡಿಎಮ್ ಪ್ರಭಾವತಿ ಕೋಲಕಾರ್ ತಾಲ್ಲೂಕ ಪಂಚಾಯತ ಸಿಬ್ಬಂದಿಗಳು, ಇದ್ದರು
WhatsApp Group Join Now
Telegram Group Join Now
Share This Article