ರನ್ನ ಬೆಳಗಲಿ: ಜು.೧೦., ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿಯ ಸಿದ್ಧಾರೂಢ ಮಠ ಶಂಭುಲಿಂಗಾಶ್ರಮದ ಆವರಣದಲ್ಲಿ ಎರಡು ದಿನಗಳ ಕಾಲ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬಾಗಲಕೋಟೆ, ಸ್ಥಳೀಯ ಸಂಸ್ಥೆ ಮುಧೋಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ತೃತಿಯ ಸೋಪಾನ ಪರೀಕ್ಷೆ ಹಾಗೂ ರಾಜ್ಯ ಪುರಸ್ಕಾರ ಪೂರ್ವಭಾವಿ ಶಿಬಿರದ ಸಮಾರೋಪ ಸಮಾರಂಭ ಜರಗಿತು.
ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀಮತಿ ಶಿವ ಶರಣೆ ಕಾಶಿಬಾಯಿ ಪುರಾಣಿಕ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ವಿದ್ಯಾರ್ಥಿಗಳ ಸವಾಂಗಿನ ಪ್ರಗತಿಗೆ ಪೂರಕವಾಗಿದೆ. ಯಾವುದೇ ರೀತಿಯ ಅಡಚಣೆಗಳ ಪರಿಸ್ಥಿತಿ ಎದುರಾದರೆ ಪಾರಾಗುವ ಕೌಶಲ್ಯಗಳನ್ನು ಕಲಿಸಿಕೊಡುವ ಈ ಶಿಬಿರವು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಅವರಲ್ಲಿರುವ ನಾಯಕತ್ವ ಗುಣಗಳನ್ನು ಬೆಳೆಸುತ್ತಿದೆ. ಇಂತಹ ಒಂದು ಅತ್ಯುತ್ತಮ ಶಿಬಿರವನ್ನು ನಮ್ಮ ಮಠದಲ್ಲಿ ಆಯೋಜನೆ ಮಾಡಿದ್ದಕ್ಕೆ ಆಯೋಜಕರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶ್ರೀ ಮಠ ಮತ್ತು ಆಶ್ರಮಗಳು ವಿದ್ಯಾರ್ಥಿಗಳ ಇಂತಹ ಉಪಯುಕ್ತ ಶಿಬಿರಗಳಿಗೆ ಸದಾಕಾಲ ಅವಕಾಶವನ್ನು ನೀಡುತ್ತವೆ, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಶಿಬಿರಗಳಿದ್ದರೆ ನಮ್ಮ ಆಶ್ರಮದಲ್ಲಿ ಆಯೋಜನೆ ಮಾಡಲು ಶ್ರೀ ಮಠವು ಕೈಜೋಡಿಸುತ್ತದೆ ಎಂದು ತಿಳಿಸಿದರು.
ಗಣ ಅಧ್ಯಕ್ಷತೆ ವಹಿಸಿದ ಎಸ್. ಎಸ್. ನಾರಾ (ಜಿಲ್ಲಾ ಪ್ರತಿನಿಧಿಗಳು ಸ್ಕೌಟ್ ವಿಭಾಗ) ಅವರು ಶಿಬಿರದಲ್ಲಿ ತಾವು ಪಡೆದುಕೊಂಡ ತರಬೇತಿಯ ಜ್ಞಾನವನ್ನು ಪ್ರತಿನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಪುರಸ್ಕಾರ ಪ್ರಮಾಣ ಪತ್ರಗಳಿಗೆ ಮಾತ್ರ ಶಿಬಿರದ ಶಿಕ್ಷಣದ ಮಹತ್ವವನ್ನು ಸೀಮಿತಗೊಳಿಸಬಾರದು. ನಿರಂತರ ಕಲಿಕೆ ಯಶಸ್ವಿ ಜೀವನಕ್ಕೆ ರಹಧಾರಿಯಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿದ್ಧಾರೂಢ ಆಶ್ರಮದ ಕಾರ್ಯದರ್ಶಿಗಳಾದ ಬಸವರಾಜ ಪುರಾಣಿಕ, ಎಸ್.ಎಸ್.ದಳವಾಯಿ (ಬಾಗಲಕೋಟೆ ಜಿಲ್ಲಾ ಕಾರ್ಯದರ್ಶಿಗಳು) ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ,ಎಂ.ಬಿ. ಹಿಡ್ಕಲ (ಶಿಬಿರದ ನಾಯಕರು ಸ್ಕೌಟ್ಸ್ ವಿಭಾಗ) ಕಾರ್ಯಕ್ರಮದ ಕುರಿತು ಹಾಗೂ ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಣದ ಕುರಿತು ಮಾತನಾಡಿದರು.
ಆರ್. ಡಿ. ಗಲಗಲಿ (ಮುಧೋಳ ತಾಲೂಕ ಕಾರ್ಯದರ್ಶಿಗಳು) ಶಿಬಿರಕ್ಕೆ ಸಹಾಯ ಸಹಕಾರ ನೀಡಿದ ದಾನಿಗಳನ್ನು ಮತ್ತು ಸಾಧಕರನ್ನು ಸನ್ಮಾನಿಸಿ ಗೌರವಿಸುವುದರ ಜೊತೆಗೆ ಶರಣ ದಂಪತಿಗಳಿಗೆ ವಿಶೇ?ವಾಗಿ ಸನ್ಮಾನಿಸಿ ಮಾತನಾಡಿದರು.
ಎಂ. ಬಿ. ಸನಟ್ಟಿ ,ಎಸ್.ಆರ್ ದಾಸರ (ಶಿಬಿರ ನಾಯಕಿಯರು ಗೈಡ್ ವಿಭಾಗ),ಸುರೇಶ್ ಹಿರೇನಿಂಗಪ್ಪನವರ (ಬೀಳಗಿ ತಾಲೂಕ ಕಾರ್ಯದರ್ಶಿಗಳು), ಪ್ರಮೋದ್ ಚೌಗುಲೆ (ಜಿಲ್ಲಾ ಸಂಘಟಕರು),ರಮೇಶ್ ಕತ್ತಿಕೈ (ಬದಾಮಿ ತಾಲೂಕ ಕಾರ್ಯದರ್ಶಿಗಳು) ಮುತ್ತಪ್ಪ ಹೊಸಪೇಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆಯನ್ನುಕಿರಣ. ಆರ್. ನಾಯಕ ಸ್ಕೌಟ್ ಮಾಸ್ಟರ್, ಮತ್ತು ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತರಾದ ಸಪ್ನಾ ಅನಿಗೊಳ ನಿರ್ವಹಿಸಿದರು,ಸುರೇಶ್ ಬಾಡಗಿ ಮತ್ತು ಎಸ್.ಬಿ. ರಡರಟ್ಟಿ ಸ್ಕೌಟ್ ಮಾಸ್ಟರ್ಸ್ ಸ್ವಾಗತಿಸಿದರು.
ಎಸ್.ಎಸ್.ದಳವಾಯಿ ಸ್ಕೌಟ್ಸ್ ಮಾಸ್ಟರ್ ವಂದಿಸಿದರು. ಶಿಬಿರದಲ್ಲಿ ಸುಮಾರು ೫೫೦ ವಿದ್ಯಾರ್ಥಿಗಳು ಮತ್ತು ಪಾಲಕ ಪೋ?ಕರು ಸ್ಥಳೀಯ ಹಿರಿಯರು ಪಾಲ್ಗೊಂಡಿದ್ದರು.