ಬೆಂಗಳೂರಿನಲ್ಲಿ ಕೆಎ​ಎಸ್ ಅಧಿಕಾರಿಯ ಪತ್ನಿ ಆತ್ಮಹತ್ಯೆ

Ravi Talawar
ಬೆಂಗಳೂರಿನಲ್ಲಿ ಕೆಎ​ಎಸ್ ಅಧಿಕಾರಿಯ ಪತ್ನಿ ಆತ್ಮಹತ್ಯೆ
WhatsApp Group Join Now
Telegram Group Join Now

ಬೆಂಗಳೂರು, ಮೇ 11: ಕೆಎ​ಎಸ್ ಅಧಿಕಾರಿಯ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ​ಸಂಜಯ್​ನಗರದ ನಿವಾಸದಲ್ಲಿ ನಡೆದಿದೆ. ಚೈತ್ರಾಗೌಡ ಮೃತ ಮಹಿಳೆ. ವೃತ್ತಿಯಲ್ಲಿ ವಕೀಲರಾಗಿದ್ದರು.

ಮನೆಯಲ್ಲಿ ಫ್ಯಾನ್​​ಗೆ ನೇಣುಬಿಗಿದ ಸ್ಥಿತಿಯಲ್ಲಿ ಶವಪತ್ತೆ ಆಗಿದ್ದು, ಮನೆಯಲ್ಲಿ ಯಾವುದೇ ಡೆತ್​​ನೋಟ್ ಪತ್ತೆಯಾಗಿಲ್ಲ. ಇನ್ನು ಸಾವಿಗೆ ಕಾರಣ ಏನು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಸದ್ಯ ಘಟನಾ ಸ್ಥಳಕ್ಕೆ ಸಂಜಯ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

 

WhatsApp Group Join Now
Telegram Group Join Now
Share This Article