ಬೆಳಗಾವಿ: (ಡಿ.೧೧) ಸುವರ್ಣ ಸೌಧ ಗಾರ್ಡನ್, ರಾಜ್ಯ ಸರ್ಕಾರ ಕರ್ನಾಟಕ ವಿರೋಧಿ, ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಎಮ್ ಇ ಎಸ್ ಸಂಘಟನೆಯನ್ನು ನಿಷೇದಿಸಬೇಕು, ಗೋಕಾಕ ಜಿಲ್ಲಾ ರಚನೆ ಮಾಡಬೇಕು, ನರೇಗಾ ಉದ್ಯೋಗ ಯೋಜನೆಯಡಿಯಲ್ಲಿ 100 ದಿನಗಳ ಬದಲಾಗಿ 150 ದಿನಗಳ ಕಾರ್ಮಿಕರಿಗೆ ಕೆಲಸ ನೀಡಬೇಕು, ಉತ್ತರ ಕರ್ನಾಟಕ ಅಭಿವೃದ್ಧಿ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಹೊಸ ನಿಯಮ ಜಾರಿಗೆ, ಸುವರ್ಣ ಸೌಧಕ್ಕೆ ಸರ್ಕಾರಿ ಕಚೇರಿಗಳ ಪ್ರಾರಂಭ ಆಗಬೇಕು, ಹೊಸ ಮನೆಗಳ ಮಂಜುರಿ, ಹೊಸ ಪಡಿತರ ಚೀಟಿ ಪ್ರಾರಂಭ, ಮೈಕ್ರೋ ಫೈನಾನ್ಸ್ ಹಾವಳಿ ತಡೆಗಟ್ಟುವದು, ರೈತರಿಗೆ ಹಗಲಿ ವಿದ್ಯುತ್ ಪೂರೈಕೆ, ಗಡಿ ಶಾಲೆಗಳಿಗೆ ಉತ್ತೇಜನ, ರೈತರ ಸಾಲ ಮನ್ನಾ ಮಾಡಬೇಕೆಂದು ಕರುನಾಡು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಮರಕುಂಬಿ ಮತ್ತು ಉತ್ತರ ಕರ್ನಾಟಕ ಅಧ್ಯಕ್ಷರಾದ ಮಂಜುನಾಥ ಜಿಲ್ಲಿ ಹಾಗೂ ರಾಜ್ಯದ, ಜಿಲ್ಲೆಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸದಸ್ಯರು ಅಗ್ರಹಿಸಿದ್ದಾರೆ.
ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಕರುನಾಡು ರಕ್ಷಣಾ ವೇದಿಕೆ ಪ್ರತಿಭಟನೆ


