ಧಾರವಾಡ: ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಧಾರವಾಡ 5 ನೇ ವಾರ್ಡ್ ಅಧಿಶಕ್ತಿ ನಗರದಲ್ಲಿ ಶ್ರೀ ಆದಿ ಶಕ್ತಿ ದೇವಸ್ಥಾನ ದಲ್ಲಿ ಗೌರಮ್ಮ ಬಲೋಗಿ ಮತ್ತು ಮಹಿಳೆಯರಿಂದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನಡೆಯಿತು.
ಶ್ರೀ ಆದಿ ಶಕ್ತಿದೇವಿಗೆ ಉಡಿ ತುಂಬಿ ಭಕ್ತಿಯಿಂದ ಆರತಿ ಮಾಡಿ ದೇವರ ಸ್ತುತಿ ಹಾಡುಗಳನ್ನು ಹಾಡಿದರು ನಂತರ ಎಲ್ಲ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು ದೇವಸ್ಥಾನದ ಸುತ್ತಮುತ್ತಲಿನ ನಿವಾಸಿಗಳು ದೇವರ ಅನುಗ್ರಹ ಪಡೆದರು. ಕಾರ್ಯಕ್ರಮದಲ್ಲಿ ಸುಶೀಲಾ ಹಿರೇಮಠ, ಭಾರತಿ ಆಯಟ್ಟಿ, ರಜನಾ ಗಾಯಕವಾಡ, ವಿದ್ಯಾ ಸಂಕನಗೌಡ್ರ, ಶೋಭಾ ಕರಿಸುಬ್ಬಣ್ಣವರ, ಮಂಜುಳಾ ಸುರಣ್ಣವರ, ಗೌರಮ್ಮಾ ಅಂಗಡಿ, ಪ್ರತಿಭಾ ಕುಲಕರ್ಣಿ, ಭಾರತಿ ಹಜಾರೆ, ಜಯಾ ವಾಲಿ ವಾರ್ಡ್ ನ ಹಿರಿಯರು ಉಪಸ್ಥಿತರಿದ್ದರು.


