ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಅಶೋಕ ಬಿಡಕಾನ ಟೋಲ್ ಏನ್ ಹೆಚ್ 4 ಹೆದ್ದಾರಿ ಬಳಿ ಎರಡು ಕಡೆ ಜನರಿಗೆ, ಜಾನುವಾರುಗಳಿಗೆ ಸರಿಯಾದ್ ರಸ್ತೆ ಇಲ್ಲದೆ ಸಂಚಾರಿಸಿದಾಗ 3 ಜನರು, 2ಆಕಳು, ಮೂರು ಕುರಿ, 2 ಎತ್ತು ಸಾವನ್ನಪ್ಪಿದ್ದು ಮತ್ತು ಎರಡು ಕಡೆಗಳಲ್ಲಿ ಗಟ್ಟರ ಇಲ್ಲದೆ ನೀರು ಸಾಗಾಣಿಕೆ ಆಗುತ್ತಾ ಇಲ್ಲ. ಪಕ್ಕದ ಪೊಲೀಸ್ ಠಾಣೆ ಹತ್ತಿರ ಇರುವ ಶಾಲೆಗೆ ಹೋಗುವ ಮಕ್ಕಳಿಗೆ ರಸ್ತೆ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದು ಕಳೆದ 5 ತಿಂಗಳ ಹಿಂದೆ ಮನವಿ ಸಲ್ಲಿಸಿದಾಗ ಮೂರು ತಿಂಗಳ ಕಾಲಾವಕಾಶ ಕೋರಿ ಮನವಿ ಸ್ವೀಕರಿಸಿದ್ದ ಕಂಪನಿಯ ಹಿರಿಯ ಸಿಬ್ಬಂದಿ ಈಗ 5 ತಿಂಗಲಾದರೂ ಎನ್ನನ್ನು ಕೆಲಸ ಮಾಡದೇ ಜನತೆಗೆ ದಿನನಿತ್ಯ ತೊಂದರೆ ನೀಡುತ್ತಿರುವ ಅಶೋಕ ಬಿಡಾಕಾನ ವಿರುದ್ದ ಕರ್ನಾಟಕ ಯುವ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸುನಿಲ್ ಎಮ್. ಎಸ್, ಉಪಾಧ್ಯಕ್ಷ ಮಹಾಂತೇಶ ಕೂಲಿನವರ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಬಸವರಾಜ ತುಬಾಕಿ, ಪದಾಧಿಕಾರಿಗಳಾದ ಬಸವರಾಜ್ ಕುರಬೇಟ, ರಮೇಶ ಬಂಗಾರಿ, ಸುರೇಶ ಯಮನಾಬಾದಿಮಠ, ವಿನೋದ್ ಜಾಧವ, ಜೋತಿಭಾ ಧರ್ವಸಿ, ಅನಗೌಡ ಪಾಟೀಲ, ಉಮೇಶ ರೊಟ್ಟಿ, ಸವಿವುಲ್ಲಾ ಸನದಿ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.