ವಿವಾದಿತ ಪಠ್ಯ ವಾಪಸ್ ಪಡೆದ ಕರ್ನಾಟಕ ವಿವಿ: ಪರೀಕ್ಷೆ ಮುಂದೂಡಿಕೆ

Ravi Talawar
ವಿವಾದಿತ ಪಠ್ಯ ವಾಪಸ್ ಪಡೆದ ಕರ್ನಾಟಕ ವಿವಿ: ಪರೀಕ್ಷೆ ಮುಂದೂಡಿಕೆ
WhatsApp Group Join Now
Telegram Group Join Now

ಧಾರವಾಡ, ಜನವರಿ 24: ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ  ಬಿಎ ಪದವಿ ಪುಸ್ತಕದಲ್ಲಿನ ಪಠ್ಯದ ವಿಚಾರ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದ ಹಿನ್ನಲೆ ವಿವಾದಿತ ನಾಲ್ಕನೇ ಅಧ್ಯಾಯ ಕೈಬಿಟ್ಟು ಪಠ್ಯಪುಸ್ತಕ ಮುಂದುವರಿಕೆ ವಿವಿ ಮುಂದಾಗಿದ್ದು, ಕವಿವಿ ಮೌಲ್ಯಮಾಪನ ಕುಲಸಚಿವರಿಂದ ಆದೇಶ ಹೊರಡಿಸಲಾಗಿದೆ.

ಘಟಕ-1ರ ನಾಲ್ಕನೆಯ ಅಧ್ಯಾಯದ ಈ ಲೇಖನವನ್ನು ತಕ್ಷಣದಿಂದ ಜಾರಿಗೆ ಬರುವ ಕೈಬಿಟ್ಟು (ಹೊರತುಪಡಿಸಿ) ಬೆಳಗು-1 ಪಠ್ಯಪುಸ್ತಕವನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ತತ್ಸಮಂಭಂಧಿತ ಪೂರಕ ಕಾರ್ಯಗಳನ್ನು ಜಾರಿ ಮಾಡುವುದಾಗಿ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಪಠ್ಯ ವಿವಾದ ಹಿನ್ನೆಲೆ ಜ.29ರಂದು ನಡೆಯಬೇಕಿದ್ದ ಎನ್‌ಇಪಿ ಸೆಮಿಸ್ಟರ್-1 ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ವಿವಾದಿತ ಪಠ್ಯ ಬೆಳಗು-1 ಕೃತಿ ಆಧಾರಿತ ಪ್ರಶ್ನೆ ಪತ್ರಿಕೆವಾಗಿತ್ತು. ಆದರೆ ಬೆಳಗು-1 ಕೃತಿಯ ನಾಲ್ಕನೇ ಪಾಠ ವಿವಾದದ ಬೆನ್ನಲ್ಲಿಯೇ ಪಾಠ ವಾಪಸ್ ಪಡೆದಿದ್ದ ಕವಿವಿ, ಈಗ ಪರೀಕ್ಷೆ ಸಹ ಮುಂದೂಡಿದೆ.

ಬಿಎ, ಬಿಪಿಎ ಮ್ಯೂಸಿಕ್‌, ಬಿಎಫ್​ಎ, ಬಿಎಸ್​ಡಬ್ಲ್ಯೂ, ಬಿವಿಎ, BSc(ಹೋಮ್ ಸೈನ್ಸ್), ಬಿಟಿಟಿಎಂ ಈ ಎಲ್ಲಾ ಕೋರ್ಸ್‌ಗಳಿಗೆ ಬೆಳಗು-1 ಕೃತಿ ಸೇರಿತ್ತು. ಆದರೆ ಇದೀಗ ತಾಂತ್ರಿಕ ಕಾರಣದ ನೆಪ ಹೇಳಿ ಪರೀಕ್ಷೆ ಮುಂದೂಡಿಕೆ ಮಾಡಿ ಕವಿವಿ ಮೌಲ್ಯಮಾಪನ ಕುಲಸಚಿವರಿಂದ ಆದೇಶ ಹೊರಡಿಸಿದ್ದು, ಮುಂದಿನ ದಿನಾಂಕ ನಂತರ ತಿಳಿಸುವುದಾಗಿ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article