ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಪ್ರತಿಭಟಣೆ

Ravi Talawar
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಪ್ರತಿಭಟಣೆ
WhatsApp Group Join Now
Telegram Group Join Now

ಹುಕ್ಕೇರಿ: ಸರಕಾರ ಶಿಕ್ಷಣ ಇಲಾಖೆಯಲ್ಲಿ ಜಾರಿಗೆ ತಂದಿರುವ ಹೊಸ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲದಿದ್ದರೆ ಸರಕಾರ ಮತ್ತು ಶಿಕ್ಷಣ ಇಲಾಖೆ ವಿರುದ್ದ ಹೋರಾಟ ಮಾಡುವದು ಅನಿವಾರ್ಯವೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಹುಕ್ಕೇರಿ  ತಾಲೂಕಾ ಘಟಕ ಹಾಗೂ ತಾಲೂಕಿನ ಪ್ರಾಥಮಿಕ ವಿವಿಧ ಸಂಘಗಳ ಪದಾಧಿಕಾರಿಗಳು ಪ್ರತಿಭಟಣೆ ನಡೆಸಿ ಚಳುವಳಿಯ ಪತ್ರದ ಮನವಿ ಸಲ್ಲಿಸಿದರು.

ಸೋಮವಾರ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ ಶಿಕ್ಷಕರರು ಬಿಆರ.ಸಿ ಕೇಂದ್ರದಲ್ಲಿ ಸಭೆ ನಡೆಸಿ ೨೦೧೭ ಸರಕಾರ ಶಿಕ್ಷಣ ಇಲಾಖೆಯಲ್ಲಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳ ಅನುಷ್ಠಾನದ ತತ್ಪರಿಣಾಮವಾಗಿ ೨೦೧೬ ಕ್ಕಿಂತ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಾರಿ ಅನ್ಯಾಯವಾಗಿದೆ. ೧ ರಿಂದ ೭ ಹಾಗೂ ೮ ನೇ ವೃಂದಕ್ಕೆ
ನೇಮಕಾತಿ ಹೊಂದಿದ ಎಲ್ಲ ಪ್ರಾಥಮಿಕ ಶಿಕ್ಷಕರನ್ನು ೧ ರಿಂದ ೫ ಎಂದು ವೃಂದಕ್ಕೆ ಪರಿಗಣಿಸಿದ್ದು ಸರಿಯಲ್ಲ ಪದವಿ, ಬಿ.ಇಡಿ ವಿಧ್ಯಾರ್ಹತೆ ಹೊಂದಿದ್ದಾರೆ. ಕಾರಣ ನಿಯಮಗಳನ್ನು ಸರಿಪಡಿಸಿ, ಸೇವಾ ಜೇಷ್ಠತೆಯ ಮೇಲೆ ಬಡ್ತಿ ನೀಡುವದು, ರಕ್ಷಣೆ ನೀಡುವ ಬಗ್ಗೆ ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಿದರು.

ಆಗಷ್ಟ ೧೨ ರಂದು ನಡೆಯುವ ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಪಾಲ್ಗೋಳುವ ಬಗ್ಗೆ ತಿರ್ಮಾನಿಸಲಾಯಿತು.
ಬಹುದಿನಗಳ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮಟ್ಟದ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚಿಸಿ ಮಿನಿ ವಿಧಾನ ಸೌಧಕ್ಕೆ ತೆರಳಿ. ತಹಶೀಲ್ದಾರ ಮಂಜುಳಾ ನಾಯಕ, ಕ್ಷೇತ್ರ
ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ,ಕ್ಷೇತ್ರ ಸಮನ್ವಧಿಕಾರಿ ಎ.ಎಸ್ ಪದ್ಮನ್ನವರ, ಅವರಿಗೆ ಮನವಿ  ಅರ್ಪಿಸಿದರು.

ಶಿಕ್ಷಕರ ಸಂಘದ ತಾಲುಕಾ ಅಧ್ಯಕ್ಷ ಎನ್.ಎಸ್ ದೇವರಮನಿ, ಪ್ರದಾನ ಕಾರ್ಯದರ್ಶಿ ಪ್ರವೀಣ ಎನ್, ರಾಜ್ಯ ಸಂ ಘಟನಾ ಕಾಯದರ್ಶಿ ಬಸವಪ್ರಭು ಅಂಗಡಿ, ರಾಜ್ಯ ನೌಕರ ಸಂಘದ ಜಂಟಿ ಕಾರ್ಯದರ್ಶಿ ಮಹಾಂತೇಶ ನಾಯಿಕ, ಎಸ.ಸಿ. ಎಸ್.ಟಿ ಸಂಘದ ಅಧ್ಯಕ್ಷ ಎಸ.ಬಿ ಶಿಂಗೆ, ಎ.ಜಿ ಕಾಂಬಳೆ, ಶಿಕ್ಷಕರ ಪತ್ತಿನ ಅಧ್ಯಕ್ಷ ರಾಜು ಬಾಗೋಜಿ, ವಿನಾಯಕ ನಾಯಿಕ, ಎ,.ಎ.
ಮುಜಾವರ, ಎಸ.ಕೆ ಕಮತೆ, ಉಮಾ ಪಡೆಪ್ಪನ್ನವರ, ಎಚ್.ಎಲ್. ಪೂಜೇರಿ ಎನ್. ಸಣ್ಣಾಯಿಕ, ಕೆ.ಸಿ ಮುಚಖಂಡಿ, ಎಸ.ಆರ. ಖಾನಾಪುರೆ, ಮಹಾಂತೇಶ ಹಿರೇಮಠ, ಪಿ.ಪಿ ಟೋಪಗಿ, ಎನ್ ಎಸ್ ಅಸ್ಕಿ, ರಾಜು ತಳವಾರ, ಎಸ. ವಾಜರೆ, ಕೆ.ಆರ್ ಕುಲಕರ್ಣಿ ದಳವಾಯಿ, ಸೇರಿದಂತೆ ಪಿಎಸ.ಟಿ ಶಿಕ್ಷಕರು ಪಾಲ್ಗೋಂಡಿದ್ದರು.

 

WhatsApp Group Join Now
Telegram Group Join Now
Share This Article