ದೆಹಲಿ ಸ್ಪೋಟ ಬೆನ್ನಲ್ಲೇ ಕರ್ನಾಟಕದಲ್ಲಿ ಹೈ ಅಲರ್ಟ್‌

Ravi Talawar
ದೆಹಲಿ ಸ್ಪೋಟ ಬೆನ್ನಲ್ಲೇ ಕರ್ನಾಟಕದಲ್ಲಿ ಹೈ ಅಲರ್ಟ್‌
WhatsApp Group Join Now
Telegram Group Join Now

ಬೆಂಗಳೂರು, ನವೆಂಬರ್​ 11: ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ ಹಿನ್ನೆಲೆ ಬೆಂಗಳೂರಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಏರ್​ಪೋರ್ಟ್​ಗೆ ಬರುವ & ಹೋಗುವ ವಾಹನಗಳ ಮೇಲೆ‌‌ ಹದ್ದಿನಕಣ್ಣಿಡಲಾಗಿದೆ. ಏರ್ಪೋಟ್ ಭದ್ರತೆಗೆ ಹೆಚ್ಚುವರಿ ಶಸ್ತ್ರ ಸಜ್ಜಿತ ಸಿಐಎಸ್ಎಫ್​ ನಿಯೋಜನೆ ಜೊತೆಗೆ ವಿಮಾನ ನಿಲ್ದಾಣದ ಒಳ & ಹೊರ ಆವರಣದಲ್ಲಿ ಪ್ಯಾಟ್ರೋಲಿಂಗ್ ಗಸ್ತು ಹೆಚ್ಚಳ ಮಾಡಲಾಗಿದೆ. ಏರ್​ಪೋರ್ಟ್​ಗೆ ಬರುವ ಪ್ರಯಾಣಿಕರು, ಸಿಬ್ಬಂದಿಯ ತಪಾಸಣೆ ಮಾಡಲಾಗುತ್ತಿದೆ. ಪಾರ್ಕಿಂಗ್ ಏರಿಯಾ ಸೇರಿ ಎಲ್ಲಡೆ ಭದ್ರತಾ ಪಡೆ ‌ ಅಲರ್ಟ್ ಆಗಿದೆ.

WhatsApp Group Join Now
Telegram Group Join Now
Share This Article