ಬಗರು ಹುಕುಂ ಭೂಮಿಯ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ – ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯ

Hasiru Kranti
ಬಗರು ಹುಕುಂ ಭೂಮಿಯ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ – ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯ
WhatsApp Group Join Now
Telegram Group Join Now
 ಬಳ್ಳಾರಿ ಜುಲೈ 19 : ಸರ್ಕಾರಿ ಜಮೀನು ಗೋಮಾಳ ಸೇರಿದಂತೆ  ತಲೆತಲಾಂತರದಿಂದ ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಶೀಘ್ರ ಪಟ್ಟ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚಿಕ್ಕ ಗಾದಿಲಿಂಗಪ್ಪ ಒತ್ತಾಯಿಸಿದರು.
ಇಂದು ಹೊಸ ಜಿಲ್ಲಾಡಳಿತ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕ ಸಮಿತಿ ವತಿಯಿಂದ  ಒಂದು ದಿನದ ಸಾಂಕೇತಿಕ ಪ್ರತಿಭಟನಾ ಧರಣಿಯನ್ನು ನಡೆಸಿ ಸಿದ್ದರಾಮಯ್ಯನವರಿಗೆ ಮನವಿ ಪತ್ರವನ್ನು ಮಾತನಾಡಿ, ಬಗರ್ ಹುಕುಂ ಸಾಗುವಳಿದಾರರು ಕಳೆದ ಹಲವಾರು ದಶಕಗಳಿಂದ ಭೂಮಿಯನ್ನು ಉಳಿಲಿ ಮಾಡಿಕೊಂಡು ಜೀವನ ಸಾಗಿಸುತ್ತಾ ಇಂದು ಆ ಸಾಗುವಳಿ ಭೂಮಿಯ ಪಟ್ಟ ನೀಡುವಂತೆ ಫಾರಂ ನಂಬರ್ 50 53 57 ಸಲ್ಲಿಸಿಕೊಂಡಿರುತ್ತಾರೆ. ಆದರೆ ಸರ್ಕಾರ ಇಲ್ಲಿಯವರೆಗೂ ಆ ಅರ್ಜಿಗಳನ್ನು ವಿಲೇವಾರಿ ಮಾಡದೆ ಮೀನಾ ಮೇಷ ಎಣಿಸುತ್ತ ಕಾಲಹರಣ ಮಾಡುತ್ತಿದೆ ಕೂಡಲೇ ಬಗರ್ ಹುಕುಂ ರೈತರಿಗೆ ತಾವು  ಮಾಡುತ್ತಿರುವ ಭೂಮಿಗೆ ಪಟ್ಟ ನೀಡಬೇಕು ಎಂಬ ಬೇಡಿಕೆ ಸೇರಿದಂತೆ ಹಲವಾರು ಹಕ್ಕುತ್ತಾಯಿಗಳನ್ನು ನೀಡಿ  ಒತ್ತಾಯಿಸಿದರು.
 ಈ ಪ್ರತಿಭಟನಾ ಧರಣಿಯಲ್ಲಿ ಹುಸೇನಪ್ಪ ರಾಜೇಶ್ವರಿ ಮಾತನಾಡಿದರು, ಈ ಸಂದರ್ಭದಲ್ಲಿ ಪಿತಾಯಪ್ಪ ದುರ್ಗಪ್ಪ ತಳವಾರ್, ಈರಪ್ಪ ತಿಪ್ಪೇಸ್ವಾಮಿ ಲಾಲಪ್ಪ ವಿ ರಾಜಶೇಖರ್, ಸಂಗನಕಲ್ಲು ವಿಜಯ್ ಕುಮಾರ್, ರಮೇಶ್, ಆಂಜನೇಯ ವೆಂಕಪ್ಪ ಏಕೆ ಗಾದಿಲಿಂಗ ದೇವೇಂದ್ರ ಸಿದ್ದರಾಜು ಸೇರಿದಂತೆ ಹಲವಾರು ಜನರಿದ್ದರು.
WhatsApp Group Join Now
Telegram Group Join Now
Share This Article