ಕಲಬುರಗಿ: ನಾಡು ಕಂಡ ಅಪರೂಪದ ಉದ್ಯಮಿ, ಸಹಸ್ರಾರು ಜನರಿಗೆ ಉದ್ಯೋಗ ನೀಡಿದ ಉದ್ಯೋಗದಾತ, ಪಾಟೀಲ ಗ್ರೂಪ್ ಅಪ್ ಇಂಡಸ್ಟ್ರೀಸ್ ಇದರ ಸಂಸ್ಥಾಪಕರು, ಎಫ್ ಕೆ ಸಿ ಸಿ ಐ ಬೆಂಗಳೂರು ಇದರ ಮಾಜಿ ಅಧ್ಯಕ್ಷರಾದ ದಿ. ಡಾ.ಶಾಂತಲಿಂಗಪ್ಪ ಶಿವಶರಣಪ್ಪಗೌಡ ಪಾಟೀಲರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮ ಮತ್ತು ಕರ್ಮಯೋಗಿ ಪ್ರಶಸ್ತಿ ಪ್ರಧಾನ ಸಮಾರಂಭವು ಶುಕ್ರವಾರ ದಿನಾಂಕ 23-08-2023 ರಂದು ಸಂಜೆ 6-00 ಘಂಟೆಗೆ ಡಾ. ಎಸ್ ಎಮ್. ಪಂಡಿತ ರಂಗ ಮಂದಿರ, ಪಬ್ಲಿಕ್ ಗಾರ್ಡನ, ಕಲಬುರಗಿಯಲ್ಲಿ ನೆರವೇರಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಲಬುರಗಿಯ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ನರಾದ ಮಾತೋಶ್ರೀ ಡಾ. ದ್ರಾಕ್ಷಿಯಿಣಿ ಎಸ್. ಅಪ್ಪ ವಹಿಸಲಿದ್ದಾರೆ.
‘ಉದ್ಘಾಟನೆಯನ್ನು ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ, ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಜೀವರ್ಗಿ ಶಾಸಕರಾದ ಡಾ. ಅಜಯಸಿಂಗ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಬಿ ಪೌಜಿಯಾ ತರನುಮ, ಎಸ್ ಆರ್. ಪಾಟೀಲ ಪೌoಡೇಷನ ಗೌರವ ಅಧ್ಯಕ್ಷರಾದ ಶ್ರೀಮತಿ ಸರೋಜಿನಿದೇವಿ ಎಸ್. ಪಾಟೀಲ. ಅಧ್ಯಕ್ಷತೆಯನ್ನು ನಾಡೋಜ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಮನು ಬಳಿಗಾರ,ಉದ್ಯಮಿಗಳು, ಬಿ ಆರ್. ಪಾಟೀಲ ಕಂಪನಿಯ ರೇವಣಸಿದ್ಧಪ್ಪ ಬಿ. ಪಾಟೀಲ, ಕಲಬುರಗಿಯ ಪಾಟೀಲ ಗ್ರೂಪ್ ಅಪ್ ಇಂಡಸ್ಟ್ರೀಸ್ ನ ನಿರ್ದೇಶಕರಾದ ಡಾ.ಲಿಂಗರಾಜ ಎಸ್. ಪಾಟೀಲ ಮತ್ತು ಸಿದ್ದಲಿಂಗ ಎಸ್. ಪಾಟೀಲ, ಶ್ರೀಮತಿ ಪದ್ಮಜಾ ಎಲ್. ಪಾಟೀಲ, ಶ್ರೀಮತಿ ಅಮೃತಾ ಎಸ್. ಪಾಟೀಲ, ಶ್ರೀಮತಿ ಶೋಭಾ ಮತ್ತು ಸುಭಾಷ್ ಬೆಂಬಲಗಿ, ಶ್ರೀಮತಿ ಶೈಲಜ ಮತ್ತು ವಿನಯ ಗುಂಡಿ, ಶ್ರೀಮತಿ ನಂದಾ ಮತ್ತು ಚೆನ್ನಬಸವ ಪ್ರಸಾದ ಹಾಗೂ ಪಾಟೀಲ ಪರಿವಾರದ ಎಲ್ಲ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಕರ್ಮಯೋಗಿ ಪ್ರಶಸ್ತಿ ಪುರಸ್ಕೃತರು.ಶಿಕ್ಷಣ ಕ್ಷೇತ್ರದಿಂದ ಬಾಲ್ಕಿ, ಬೀದರ ಹಿರೇಮಠದ, ನಾಡೋಜ ಶ್ರೀ ಮ ಘ ಚ ಡಾ. ಬಸವಲಿಂಗ ಪಟ್ಟದ ದೇವರು, ವಾಣಿಜ್ಯ ಕ್ಷೇತ್ರದಿಂದ ಬೆಂಗಳೂರು -ಕಲಬುರಗಿಯ ಉದ್ದಿಮೆದಾರರಾದ ಎನ್ ಕೆ. ಮಾಲು, ಕಲಾ ಕ್ಷೇತ್ರದಿಂದ ಕಲಬುರಗಿಯ ಚಿತ್ರ ಕಲಾವಿದರಾದ ಡಾ. ವಿ ಜಿ. ಅಂದಾನಿ, ಸಾಹಿತ್ಯ ಕ್ಷೇತ್ರದಿಂದ ಕೊಪ್ಪಳ ಸಾಹಿತಿಗಳಾದ ಪ್ರೋ ಅಲ್ಲಮಪ್ರಭು ಬೆಟದೂರ, ಸಮಾಜ ಸೇವಾ ಕ್ಷೇತ್ರದಿಂದ ಕಲಬುರಗಿಯ ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ. ವಿಜಯಲಕ್ಷ್ಮಿ ದೇಶಮನೆ ಅವರಿಗೆ ನೀಡಲಾಗುವದೆಂದು ಸಂಘಟಕರು ತಿಳಿಸಿದ್ದಾರೆ.