ರೈತರ ಕೈಯಲ್ಲಿರುವ ಭೂಮಿಯನ್ನು ಪರಿಶೀಲಿಸಿ ಉಳಿಮೆ ಮಾಡುವವರಿಗೆ ,ಭೂಮಿ ಕೊಡಿ, .ಸರ್ಕಾರ ಕ್ಕೆ ಕರಿಯಪ್ಪ ಗುಡಿಮನಿ ಅಗ್ರಹ

MK HasiruKranti
ರೈತರ ಕೈಯಲ್ಲಿರುವ ಭೂಮಿಯನ್ನು ಪರಿಶೀಲಿಸಿ ಉಳಿಮೆ ಮಾಡುವವರಿಗೆ ,ಭೂಮಿ ಕೊಡಿ, .ಸರ್ಕಾರ ಕ್ಕೆ ಕರಿಯಪ್ಪ ಗುಡಿಮನಿ ಅಗ್ರಹ
WhatsApp Group Join Now
Telegram Group Join Now

 

ವಿಜಯನಗರ (ಹೊಸಪೇಟೆ )ಏ.೧೦: ಸರ್ಕಾರ ಉಳಿಯಬೇಕೆಂದರೆ ಜನರಿಗೆ ನ್ಯಾಯ ಕೊಡಿ ಎಂದು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಸರ್ಕಾರಕ್ಕೆ ಎಚ್ಚರಿಸಿದರು .ಅವರು ಇಂದು ಪ್ರತ್ಯೇಕ ಸ್ಥಳದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡುತ್ತಾ, ,ಆಳಿದ ಸರ್ಕಾರ ಗಳು ದಶಕದಿಂದ ಅರಣ್ಯ ದಲ್ಲಿ ಭೂಮಿಯನ್ನು ಊಳುತ್ತಿರುವ ರೈತ ನಿಂದ ವಸತಿ ಮತ್ತು ಭೂಮಿಯನ್ನು ಕಸಿದು ಕೊಂಡಿದೆ , ಆದರೆ ಸಿದ್ದರಾಮಯ್ಯ ನವರ ಸರ್ಕಾರ ೨೫ ಲಕ್ಷ ಭೂ ಹೀನರಿಗೆ ಭೂಮಿಯನ್ನು ಕೇಳಿದರೆ ಕೇವಲ ಮೂರು ಲಕ್ಷ ಜನರಿಗೆ ಭೂಮಿ ಒದಗಿಸಿದೆ. ಆದ್ದರಿಂದ ಸ್ವತಂತ್ರ ಸೇನಾನಿ ಹೋರಾಟಗಾರ ದಿವಂಗತ ಎಚ್‌ಎಸ್ ದೊರೆ ಸ್ವಾಮಿ ಅವರ ೧೦೯ನೇ ಜಯಂತೋತ್ಸವ ನಿಮಿತ್ತ “ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ”ಯಿಂದ ಜನತೆ ಕೈಗೊಂದಿಷ್ಟು ಭೂಮಿ, ತಲೆಗೊಂದಿಷ್ಟು ಸೂರು, ಒಂದಿಷ್ಟು ನ್ಯಾಯ ಕೊಡಿ ಅವರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ, .ಎಂಬ ಹೋರಾಟ ವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಅವರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಭೂಮಿ ಮತ್ತು ವಸತಿಗಾಗಿ ರಾಜ್ಯದ್ಯಂತ ಇಂದು ಸುದ್ದಿಗೋಷ್ಠಿ ನಡೆಯುತ್ತಿದೆ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಹಮ್ಮಿಕೊಂಡಿದ್ದೇವೆ. ಹೊಸಪೇಟೆಯಲ್ಲಿ ನಡೆದ ಸರ್ಕಾರದ ಸಾಧನ ಸಮಾವೇಶದಲ್ಲಿ ೩ ಲಕ್ಷ ಜನರಿಗೆ ಪಟ್ಟಾ ಪಟ್ಟಕೊಟ್ಟಿದ್ದೇವೆ ಎಂದು ಘೋಷಣೆ ಮಾಡಿದರು. ೩ ಲಕ್ಷ ಅಲ್ಲ, ಇಡೀ ರಾಜ್ಯಾದ್ಯಂತ ೪೨ ಲಕ್ಷ ಜನ ಅರ್ಜಿ ಹಾಕಿಕೊಂಡಿದ್ದಾರೆ, ೨೫ಲಕ್ಷಕ್ಕೆ ನಿಂತಿದೆ, ಪ್ರಸ್ತುತವಾಗಿ ಉಳುಮೆ ಮಾಡುತ್ತಿರುವವರನ್ನು ಪರಿಶೀಲಿಸಿ ಜಿಪಿಎಸ್ ಮಾಡಿ ಪಟ್ಟ ಕೊಡುವ ಕಾರ್ಯ ಸರ್ಕಾರ ಮಾಡಬೇಕು. ರೈತರ ಕೈಯಲ್ಲಿರುವ ಭೂಮಿಯನ್ನು ಪರಿಶೀಲಿಸಿ ಉಳಿಮೆ ಮಾಡುವವರಿಗೆ ಕೊಡಿ. ಇದಕ್ಕೆ ಆಯಾ ಕ್ಷೇತ್ರದ ಶಾಸಕರುಗಳಿಗೆ ಇಚ್ಛಾಶಕ್ತಿ ಕೊರತೆ ಇದೆ, ಅವರು ರೈತರ ಪರವಾಗಿರದೆ ಕಾರ್ಪೊರೇಟರ್ ಗಳ ಪರವಾಗಿ ಗುಲಾಮರಾಗಿದ್ದು ನಿರ್ಲಕ್ಷ ತೋರುತ್ತಿದ್ದಾರೆ , ಶಾಸಕರುಗಳು ಎಚ್ಚೆತ್ತುಕೊಳ್ಳಬೇಕು.

ನಮ್ಮ ಕ್ಷೇತ್ರದಲ್ಲಿ ಭೂಮಿ ಕೊಡುವ ವಿಚಾರದಲ್ಲಿ ಶಾಸಕ ಗವಿಯಪ್ಪನವರ ಬಳಿ ಮಾತನಾಡಿ ಡಿಸಿ, ಎಸಿ,ತಹಶೀಲ್ದಾರ್, ಮತ್ತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಅರ್ಜಿ ಹಾಕಿದವರನ್ನು ಪರಿಶೀಲನೆಮಾಡಿ ಕಾನೂನಿನಲ್ಲಿರುವ ತೊಡಕುಗಳ ಮತ್ತು ಸಾಧಕ ಬಾಧಕಗಳ ಕುರಿತು ಅವಲೋಕಿಸಿ ತಿದ್ದುಪಡಿ ಮಾಡುವ ಅಥವಾ ಸರಿಪಡಿಸುವ ಅವಶ್ಯಕತೆ ಇದ್ದರೆ ಅಂತಹ ಕೆಲಸ ಮಾಡೋಣ ಎಂದು ಹತ್ತಾರು ಬಾರಿ ಸುತ್ತಾಡಿದರು ಯಾವುದೇ ಪ್ರಯೋಜನವಾಗಿಲ್ಲ.

ಶಾಸಕ ಗವಿಯಪ್ಪನವರಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲ ಆದರೆ ಅತೀವ ತಾಳ್ಮೆ ತೆಗೆದುಕೊಳ್ಳುತ್ತಾರೆ, ಇದರಿಂದ ಜನತೆಗೆ ನ್ಯಾಯ ಕೊಡಿಸುವಲ್ಲಿ ವಿಳಂಬವಾಗುತ್ತಿದೆ.ತ್ವರಿತ ನಿರ್ಧಾರ ಕೈಗೊಳ್ಳಬೇಕು. ಭೂಮಿ ಕೊಟ್ಟರೆ ಮತ್ತೊಮ್ಮೆ ಆಯ್ಕೆಯಾಗುವ ಸಾಧ್ಯತೆ ಇದೆ, ಇಲ್ಲವಾದಲ್ಲಿ ಜನ ತಿರಸ್ಕರಿಸುತ್ತಾರೆ. ನ್ಯಾಯ ಕೊಡಬೇಕಾದವರೇ ನಿರ್ಲಕ್ಷ ವಹಿಸಿದರೆ ಜನರಿಗೆ ನ್ಯಾಯ ಸಿಗಲು ಸಾಧ್ಯವೇ. ಜಿಲ್ಲೆಯಲ್ಲಿರುವ ಎಲ್ಲಾ ಶಾಸಕರು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಬೇಕು.

ಜನತೆಗೆ ನ್ಯಾಯ ಕೊಡಲೇಬೇಕು, ಒಂದು ವೇಳೆ ಕೊಡದೆ ಹೋದರೆ ವಸತಿ ಮತ್ತು ಭೂ ವಂಚಿತರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೇರಿ ಸರಣಿ-ಧರಣಿ ಹಮ್ಮಿಕೊಂಡು ಅಲ್ಲೇ ನಿದ್ದೆ ಅಲ್ಲೇ ಮುದ್ದೆ ಎನ್ನುವ ಅಂಶವನ್ನಿಟ್ಟುಕೊಂಡು ಭೂಮಿ ಸಿಗುವವರೆಗೂ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರೆ ಕೊಡುತ್ತಿದ್ದೇವೆ.

ಪ್ರತಿಯೊಂದು ತಾಲೂಕು ವ್ಯಾಪ್ತಿಯ ಕಂದಾಯ ಭಾಗದಲ್ಲಿ ೩ ರಿಂದ ೫ರಿಂದ ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಅರಣ್ಯ ಭಾಗದಲ್ಲಿ ಉಳಿಮೆ ಮಾಡುತ್ತಿರುವ ರೈತರಿಗೆ ಅಧಿಕಾರಿಗಳು ೭೦- ೮೦ ವರ್ಷದ ದಾಖಲೆಗಳನ್ನು ಕೇಳುತ್ತಾರೆ ಇಲ್ಲದ ದಾಖಲೆಗಳನ್ನು ಎಲ್ಲಿಂದ ತಂದು ಕೊಡಲು ಸಾಧ್ಯ. ರೈತನು ಹೊಲದಲ್ಲಿರುವ ಬದುಗಳೆ ಸಾಕ್ಷಿ, ಹೊಲಗಳಲ್ಲಿ ಅವರು ಬೆಳಸಿದಂತಹ ಗಿಡ ಮರಗಳೇ ಸಾಕ್ಷಿ. ದಾಖಲೆಗಳನ್ನು ಕೊಡುವವರು ನೀವೇ ಆಗಿದ್ದಾಗ ಅವರನ್ನೇ ದಾಖಲೆ ಕೇಳಿದರೆ ಎಲ್ಲಿಂದ ತಂದು ಕೊಡಲು ಸಾಧ್ಯ.

ಇಂದು ಅವರಿಂದ ಹೊಲವನ್ನು ಬಿಡಿಸಿ ಅನ್ನ ಬೆಳೆಯುವ ಜಾಗದಲ್ಲಿ ಮರಗಳನ್ನು ಬೆಳೆಸಿದ್ದಾರೆ, ಅನ್ನವೇ ಇಲ್ಲದೆ ಹೋದರೆ ಹೊಟ್ಟೆಗೆ ಏನು ತಿನ್ನುತ್ತೀರಾ ಎಂದು ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದರು. ಕೂಡಲೇ ರೈತರಿಗೆ ಭೂಮಿ ಮತ್ತು ಸೂರು ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

 

WhatsApp Group Join Now
Telegram Group Join Now
Share This Article