ನೇಸರಗಿ. ಇಲ್ಲಿನ ಕುವೆಂಪು ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು. ಗ್ರಾಮದ ಅನೇಕ ನಿವೃತ್ತ ಸೈನಿಕರು ಯುದ್ಧದಲ್ಲಿ ನಡೆಯುವ ಪ್ರಸಂಗ ಮತ್ತು ಗೆದ್ದಾಗ ಸೈನಿಕರ ಸಂತಸ ಹಾಗೆ ವೀರ ಮರಣ ಹೊಂದಿದ ಸೈನಿಕರ,ಕಮಾಂಡರ, ವೈದ್ಯಕೀಯ ಸಿಬ್ಬಂದಿ ಅವರ ಹೋರಾಡಿದ ಶ್ರಮವನ್ನು ನಾವು ನೆನೆದು ಅವರ ಕುಟುಂಬಕ್ಕೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು ಎಂದರು.
ಇದೆ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಶಿಕ್ಷಕರು ಪಾಲಕರಿಗೆ ತಾವು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೈಗೊಳ್ಳಬಹುದಾದ ವಿಷಯ ಕುರಿತು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ವೀರಭದ್ರೇಶ್ವರ ಪಿ ಕೆ ಪಿ ಎಸ್ ಅಧ್ಯಕ್ಷ ಸೋಮನಗೌಡ ಪಾಟೀಲ, ಚನ್ನಪ್ಪ ದಿನ್ನಿಮನಿ, ಮಹಾದೇವ ಹಂಚಿನಮನಿ, ನಿಂಗಪ್ಪ ತಳವಾರ, ನಿವೃತ ಸೈನಿಕರು,ಮುಖ್ಯ ಶಿಕ್ಷಕರು, ಗ್ರಾಮದ ಹಿರಿಯರು, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.