ನೇಸರಗಿ. ಸಮೀಪದ ಮೇಕಲಮರ್ಡಿ ಗ್ರಾಮದಲ್ಲಿ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವ ದಿವಸ ಆಚರಿಸಲಾಯಿತು.ಕಾರ್ಗಿಲ್ ಹುತಾತ್ಮ ಯೋಧ ದಿ. ಯಶವಂತ ಕೋಲಕಾರ ಅವರ ಪ್ರತಿಮೆಗೆ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸುವುದರ ಮೂಲಕ ವಿಜಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ ಉಪಾಧ್ಯಕ್ಷರಾದ ಖಾಸಿಂಸಾಬ ಮೈಬೂಬಸಾಬ್ ಜಮಾದಾರ, ರಾಜು ಕಡಕೋಳ, ಮಂಜುನಾಥ ಹೊಸಮನಿ, ವಿನೋದ ಹೊಸಮನಿ, ಪ್ರಮೋದ ಅಕ್ಕೋಳ, ಬೀಮರಾವ ಕಡಟ್ಟಿ, ಸಂದೀಪ ಕೊಲಕಾರ, ಹನುಮಂತ ಕೋಲಕಾರ, ತಮ್ಮಣ್ಣ ಕಡಕೋಳ ಮೇಕಲಮರಡಿ ಗ್ರಾಮದ ಅನೇಕ ಸಾರ್ವಜನಿಕರು ಭಾಗಿಯಾಗಿದ್ದರು.