ಸಡಗರ ಸಂಭ್ರಮದ ಸಿಗರಕೊಳ್ಳದ ಕರೆಮ್ಮದೇವಿ ಜಾತ್ರೆ

Ravi Talawar
ಸಡಗರ ಸಂಭ್ರಮದ ಸಿಗರಕೊಳ್ಳದ ಕರೆಮ್ಮದೇವಿ ಜಾತ್ರೆ
WhatsApp Group Join Now
Telegram Group Join Now
ನೇಸರಗಿ.ಏಪ್ರಿಲ್ 02: ಇಲ್ಲಿಗೆ ಸಮೀಪದ ಮೇಕಲಮರಡಿ,ಸೋಮನಟ್ಟಿ ಹದ್ದಿಯ ಸಿಗರಕೊಳ‌್ಳದ ಪ್ರತಿಷ್ಠಿತ ಶ್ರೀ ಕರೆಮ್ಮ ದೇವಿಯ ಜಾತ್ರಾ ಮಹೋತ್ಸವವು ಮಂಗಳವಾರದಂದು ಸಡಗರ,ಸಂಭ್ರಮದಿಂದ ,ಅಭಿಷೇಕ, ಮಹಾ ಮಂಗಳಾರತಿ,ಮಹಾ ಪ್ರಸಾದ,ಭಕ್ತಿ ಭಾವದೊಂದಿಗೆ ನೇರವೇರಿತು.
ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಯುವ ಮುಖಂಡ ಸಚೀನ ಪಾಟೀಲ ಈ ದೇವಸ್ಥಾನದ ಅಭಿವೃದ್ಧಿಗೆ ಸಹಾಯ,ಸಹಕಾರ ನೀಡುವೆ ಎಂದರು. ಕಾರ್ಯಕ್ರಮದಲ್ಲಿ ಶ್ರೀಮತಿ ಯಲ್ಲವ್ವ ಗುಡಿ,ಮಂಜುನಾಥ ಹುಲಮನಿ,ಸಂಗಪ್ಪ ಗುಜನಟ್ಟಿ, ಮಲ್ಲಿಕಾರ್ಜುನ ಕಲ್ಲೊಳಿ, ನಾಗರಾಜ ಯರಗುದ್ದಿ,ಕುಬಣ್ಣ ಕಡಕೋಳ,ರಾಯನಗೌಡ ಪಾಟೀಲ, ಬೀಮಪ್ಪ ಕಡೆಟ್ಟಿ,ಮುತ್ತಯ್ಯ ಹಿರೇಮಠ,ಬಸವರಾಜ ಮೋಖಾಸಿ,ತಮ್ಮಣ್ಣ ಕಡಕೋಳ,ನಾಗಪ್ಪ ನೇಸರಗಿ, ಶ್ರೀಮತಿ ಜ್ಯೋತಿ ಯರಗುದ್ದಿ,ವಿಠ್ಠಲ ಕುರಗುಂದ ಸೇರಿದಂತೆ ಸೋಮನಟ್ಟಿ,ಮೇಕಲಮರಡಿ,ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಭಕ್ತಿ ಭಾವದಲ್ಲಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article