ಹುನಗುಂದ: ತಾಲೂಕಿನ ಕೂಡಲಸಂಗಮ ಪುನರ್ವಸತಿ ಕೇಂದ್ರದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನವನ್ನು ದುರಸ್ತಿಗೊಳಿಸುವಂತೆ ಕಳೆದ ಮೂರು ತಿಂಗಳ ಹಿಂದೆ ಮನವಿ ಮಾಡಿದರೂ ಕೂಡಾ ಇಲ್ಲಿವರಿಗೆ ಗ್ರಾ.ಪಂ.ಅಧಿಕಾರಿಗಳು ಮರಸ್ತಿ ಕಾರ್ಯಕ್ಕೆ ಮುಂದಾಗದೇ ಇರೋದಕ್ಕೆ ಬುಧವಾರ ಮತ್ತೆ ಟಿ. ನಾರಾಯಣಗೌಡ ಬಣಪ ಕರ್ನಾಟಕ ರಕ್ಷಣಾ ವೇದಿಕೆ ಕಾರ್‍ಯಕರ್ತರು ಕೂಡಲಸಂಗಮ ಗ್ರಾಮ ಪಂಚಾಯತಿಯ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ನಡೆಸಿ, ಪಿಡಿಓ ಆನಂದ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ : ರಮಜಾನ್ ನದಾಫ್ ಮಾತನಾಡಿ ಕೂಡಲಸಂಗಮದ ಪುನರ್ವಸತಿ ಕೇಂದ್ರದಲ್ಲಿನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭವನದ ಸಂಪೂರ್ಣ ಒಡೆದು ಹೋಗಿದ್ದು, ವೇದಿಕೆಯ ಮುಂಬಾಗದ ಮೆಟ್ಟಿಲುಗಳು ಮತ್ತು ವೇದಿಕೆಯ ಮುಂಭಾಗದ ಪರ್ಶಿಗಳು (ಬಂಡಿಗಳು) ಒಡೆದು ಹೋಗಿವೆ, ವಿದ್ಯುತ ಸರಬರಾಜು ಸಹ ಕಾರ್ಯನಿರ್ವಹಿಸುತ್ತಿಲ್ಲ, ಮಳೆಯಾದರೇ ಸಾಕು ಭವನದ ಛಾವಣಿಯು ಸೊರುತ್ತಿದೆ ಇವೆಲ್ಲವನ್ನೂ ಪುರಸ್ತಿಗೊಳಿಸುವಂತೆ ಕಳೆದ ಮೂರು ತಿಂಗಳ ಹಿಂದೆ ಮನವಿ ಮಾಡಿದರೂ ಇಲ್ಲಿವರೆಗೆ ಮರಸ್ತಿ ಕಾರ್ಯಕ್ಕೆ ಕೈ ಹಾಕದೆ ಇರುವುದು ಕೇದಕರ ಸಂಗತಿಯಾಗಿದೆ. ೬೯ ಸಾವಿರ ಅನುದಾನದಲ್ಲಿ ಮರಸ್ತಿ ಕಾರ್ಯ ಕೈಗೊಳ್ಳುತ್ತೇವೆಂದು ಪಂಚಾಯತಿ ಅಧಿಕಾರಿಗಳು ಹೇಳಿದ್ದರೂ ಕೂಡಾ ಇನ್ನುವರೆಗೆ ಕೆಲಸ ಆರಂಭಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಮರಸ್ತಿ ಕಾರ್ಯಕ್ಕೆ ಮುಂದಾಗುವರಿಗೂ
ನಮ್ಮ ಕರವೇ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದು ಗ್ರಾಮ ಪಂಚಾಯಿತಿ ಕಾರ್ಯಾಲಯದ ಪಕ್ಕದಲ್ಲಿ ಒಂದುವರೆ ಗಂಟೆಗೂ ಹೆಚ್ಚು ಕಾಲ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗ್ರಾಪಂ ಪಿಡಿಒ ಆನಂದ ಹಿರೇಮಠ ಮಾತನಾಡಿ ನಾವು ಹೇಳಿದಂತೆ ಸಧ್ಯ ೬೯ ಸಾವಿರ ಅನುದಾನದಲ್ಲಿ ಕಾರ್ಯವನ್ನು ಆರಂಭಿಸುತ್ತೇವೆ. ಸಂಪೂರ್ಣ ದುರಸ್ಥಿ ಕಾರ್ಯಕ್ಕೆ ಅನುದಾನದ ಕೊರತೆ ಇರೋದರಿಂದ ಮುಂದಿನ ದಿನಗಳಲ್ಲಿ ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಸುಮಾರು ಎರಡೂವರೆ ಲಕ್ಷ ಅನುದಾನದಲ್ಲಿ ಸಂಪೂರ್ಣ ದುರಸ್ಥಿ ಕಾರ್‍ಯ ಮಾಡುತ್ತೇವೆಂದು ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿ ಮನವಲಿಸಿದರು. ಸದ್ಯ ಪ್ರತಿಭಟನೆಯನ್ನು ಹಿಂಪಡಿಬೇಕೆಂದು ಮನವಿ ಮಾಡಿದಾಗ ಕರವೇ ಕಾರ್ಯಕರ್ತರು ಅವರ ಮನವಿಗೆ ಒಪ್ಪಿಕೊಂಡು ಪ್ರತಿಭಟನೆಯನ್ನು ಹಿಂಪಡೆದರು. ಇಲಕಲ್ ತಾಲೂಕ ಅಧ್ಯಕ್ಷ ಅಶೋಕ ಪೂಜಾರ, ಪ್ರಕಾ ಜಹೀರ ಸಂಗಮಕರ, ಹುಸೇನ್ ಸಂದಿಮನಿ, ಯುವ ಘಟಕದ ಅಧ್ಯಕ್ಷ ಪ್ರವೀಣ ವಾಲಿಕಾರ, ಗ್ರಾಮ ಘಟಕ ಅಧ್ಯಕ್ಷ ಮಂಜು ವಡ್ಡರ, ದಶರಥ ವಡ್ಡರ, ಶ್ರವಣ ಹಿರೇಮಠ, ಸದ್ದಾಂ ಕಲಾಲ್, ರವಿ ಕೊಪ್ಪದ, ಮುತ್ತು ದಾಸರ, ಪ್ರಮೋದ ಬಿರಾದಾರ, ಬರಮು ಬೆಳಗಲ್, ವಿನೋದ ಚಲವಾದಿ, ಸಂತೋಷ ಮೂಲಿಮನಿ, ಬಾಲು ಚಲವಾದಿ ಇದ್ದರು.


