ಹುನಗುಂದ: ತಾಲೂಕಿನ ಕೂಡಲಸಂಗಮ ಪುನರ್ವಸತಿ ಕೇಂದ್ರದಲ್ಲಿರುವ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯದ ಮಕ್ಕಳಿಗೆ ಕುಡಿಯುವ ನೀರು ಮತ್ತು ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸುವಂತೆ ಒತ್ತಾಯಿಸಿ ಇತ್ತೀಚಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕೂಡಲಸಂಗಮ ಗ್ರಾಮ ಪಂಚಾಯತಿಯ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ಪಿಡಿಓ ಆನಂದ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಕರವೇ ಹುನಗುಂದ ಯುವ ಘಟಕದ ಅಧ್ಯಕ್ಷ ಪ್ರವೀಣ ವಾಲಿಕಾರ ಮಾತನಾಡಿ ಕೂಡಲಸಂಗಮ ಪುನರ್ವಸತಿ ಕೇಂದ್ರದಲ್ಲಿರುವ ಕಸ್ತೂರಿ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ೧೫೦ ಕ್ಕೂ ಹೆಚ್ಚು ಮಕ್ಕಳು ಅಧ್ಯಯನ ಮಾಡುತ್ತಿದ್ದು.ಇಲ್ಲೀನ ಮ್ಮಕ್ಕಳು ಪ್ರತಿನಿತ್ಯ ಶುದ್ದ ಕುಡಿಯುವ ನೀರು ಮತ್ತು ಶೌಚಾಲಯಕ್ಕಾಗಿ ಪರದಾಡುವ ಪರಿಸ್ಥಿತಿಯಿದೆ. ಈ ಮೊದಲು ಶಾಲೆಗೆ ೨೪x೭ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ ಕಳೆದ ಒಂದುವರೆ ವ?ದಿಂದ ಅದು ಬಂದ್ ಆಗಿ ಮಕ್ಕಳ ಕುಡಿಯುವ ನೀರಿನ ಸಮಸ್ಯೆ ಉಲ್ಬನವಾಗಿದ್ದು.ಶಾಲಾ ಆವರಣದಲ್ಲಿ ಕುಡಿಯುವ ನೀರಿನ ಒಂದೇ ಟಾಕಿಯಿದ್ದು. ಗ್ರಾಮ ಪಂಚಾಯತಿಯಿಂದ ಬೆಳಗ್ಗೆ ಮತ್ತು ಸಾಯಂಕಾಲ ಒಂದು ಗಂಟೆ ಕಾಲ ನೀರು ಬಿಡುತ್ತಿದ್ದು.ಇದು ಅಲ್ಲೀನ ಮಕ್ಕಳಿಗೆ ಸಾಕಾಗುತ್ತಿಲ್ಲ. ಇನ್ನು ೧೫೦ ಮಕ್ಕಳು ಮತ್ತು ೨೦ ಜನ ಶಿಕ್ಷಕ ಹಾಗೂ ಸಿಬ್ಬಂದಿಗಳಿಗೆ ೧೦ ಶೌಚಾಲಯಗಳಿದ್ದು. ಅವುಗಳು ಕೂಡಾ ಶಿಥಿಲಾವಸ್ತೆಯಲ್ಲಿವೆ. ಇದರಿಂದ ಅಲ್ಲಿನ ಮಕ್ಕಳು ಮತ್ತು ಶಿಕ್ಷಕರು ಕುಡಿಯುವ ನೀರು ಮತ್ತು ಶೌಚಾಲಯಕ್ಕಾಗಿ ತೊಂದರೆ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಹೈಟೆಕ್ ಶೌಚಾಲಯವನ್ನು ನಿರ್ಮಿಸಿ ಕೊಡಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಕರವೇಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕರವೇ ಹುನಗುಂದ ರೈತ ಘಟಕದ ಅಧ್ಯಕ್ಷ ರವಿ ಕೊಪ್ಪದ ಮಾತನಾಡಿ ಈ ಒಂದು ಸಮಸ್ಯೆ ೨೦೧೬ ರಿಂದಲೂ ಇದ್ದು. ಈ ಸಮಸ್ತ ಪರಿಹರಿಸುವಂತೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸಾಕ? ಬಾರಿ ಮನವಿ ಸಲ್ಲಿಸಿದರು ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಹೈಟೆಕ್ ಶೌಚಾಲಯವನ್ನು ಒಂದು ವಾರದೊಳಗೆ ಒದಗಿಸದಿದ್ದರೆ ಕರವೇ ಉಗ್ರವಾದಂತ ಹೋರಾಟ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಕರವೇ ಕೂಡಲಸಂಗ ಗ್ರಾಮ ಘಟಕದ ಅಧ್ಯಕ್ಷ ಮಂಜು ವಡ್ಡರ,ಪ್ರಮೋದ ಬಿರಾದಾರ,ಶ್ರವಣ ಹಿರೇಮಠ,ವಿಠ್ಠಲ ಲಗಮನ್ನವರ, ಶಶಿಕಾಂತ ಮಂಕಣಿ, ಮುತ್ತು ದಾಸರ, ಕಾರ್ತಿಕ ಛಲವಾದಿ,ಬರಮು ಬೆಳಗಲ್ಲ,ವಿಠ್ಠಲ್ ಜುಮ್ಮಣ್ಣವರ, ಮಾಳಿಂಗರಾಯ ಮಾಗಿ,ದಶರಥ ವಡ್ಡರ,ಮುತ್ತು ಬೆಳಗಲ್ಲ,ಸಂತೋ? ಬೆಳಗಲ್ಲ,ಸಂತೋ? ಛಲವಾದಿ, ಶಿವು ಹಂಡರಗಲ್ಲ,ಬಾಲು ಛಲವಾದಿ, ಕಿರಣ ವಡ್ಡರ ಸೇರಿದಂತೆ ಅನೇಕರು ಇದ್ದರು.
ಬಾಕ್ಸ್; ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಿಸಲು ಒಂದು ವಾರ ಗಡುವು– ಕೂಡಲಸಂಗಮ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿಯ ೧೫೦ ಮಕ್ಕಳು ಮತ್ತು ೨೦ ಜನ ಶಿಕ್ಷಕ ಹಾಗೂ ಸಿಬ್ಬಂದಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಸುಸಜ್ಜಿತ ಶೌಚಾಲಯವಿಲ್ಲದೆ ನಿತ್ಯ ನರಕಾಯಾತನೆ ಪಡುತ್ತಿರುವ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಒಂದು ವಾರದೊಳಗಾಗಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಹೈಟೆಕ್ ಶೌಚಾಲಯ ನಿರ್ಮಿಸುವಂತೆ ಕರವೇ ಕಾರ್ಯಕರ್ತರು ಗಡುವು ನೀಡಿದ್ದಾರೆ.


