ಬಳ್ಳಾರಿ. ಆ. 11: ತಾಲೂಕಿನ ಕೇ ವೀರಾಪುರ ಗ್ರಾಮದ ಹಲವಾರು ಜನ ಕನ್ನಡ ಅಭಿಮಾನಿಗಳು ಗ್ರಾಮದ ಯುವಕತಿಪ್ಪೇಸ್ವಾಮಿ ನೇತೃತ್ವದಲ್ಲಿ ಕರವೇ ಶಿವರಾಮೇ ಗೌಡ ಬಣಕ್ಕೆ ಬಳ್ಳಾರಿಯ ಕಛೇರಿಯಲ್ಲಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಜಶೇಖರ್, ವೀರಾಪುರ ಗ್ರಾಮದ ಹಲವು ಯುವಕರು ನಮ್ಮ ಸಂಘಟನೆಯ ಕೆಲಸವನ್ನು ಮೆಚ್ಚಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದಲ್ಲಿ ಸೇರಲು ಆಸಕ್ತಿ ತೋರಿಸಿರುತ್ತಾರೆ ಆದ್ದರಿಂದ ಅವರನ್ನು ನಮ್ಮ ಸಂಘಟನೆಗೆ ತುಂಬಾ ಸಂತೋಷದಿಂದ ಬರಮಾಡಿಕೊಂಡು ಸಂಘಟನೆಯ ನಿಯಮ ನಿಬಂಧನೆಗಳಿಗೆ ಒಳಪಟ್ಟು ವೇದಿಕೆಯ ಹೆಸರಿಗೆ ಕಳಂಕ ಬರದಂತೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳ ಬೇಕೆಂದು ಸೂಚಿಸಿ ಅವರನ್ನು ವೇದಿಕೆಗೆ ಸೇರ್ಪಡೆ ಮಾಡಿಕೊಳ್ಳಲಾಯಿತು ಎಂದರು.
ಈ ಸಂದರ್ಭದಲ್ಲಿ ದಿಲೀಪ್ ಕುಮಾರ್. ಬಾಲಕೃಷ್ಣ. ರಾಜಶೇಖರ. ದುರ್ಗೇಶ್. ನರಸಿಂಹ. ಸುನಿಲ್. ವಂಶಿ. ಕುಮಾರ್. ರಗು. ಶ್ರೀನಿವಾಸ್ ರೆಡ್ಡಿ. ಹಾರ್ವೆಜ್ ಬಾಷಾ. ಮನೋಜ್. ಶ್ರೀಕಾಂತ್. ಸರ್ಮಸ್ ವಲಿ ಸೇರಿದಂತೆ ಹಲವರಿದ್ದರು.