ಎಂಇಎಸ್‌ನ ಶುಭಂ ಶಿಳಕೆ ವಿರುದ್ಧ ಕಠಿಣ ಕ್ರಮಕ್ಕೆ ಕರವೇ ಆಗ್ರಹ

Pratibha Boi
ಎಂಇಎಸ್‌ನ ಶುಭಂ ಶಿಳಕೆ ವಿರುದ್ಧ ಕಠಿಣ ಕ್ರಮಕ್ಕೆ ಕರವೇ ಆಗ್ರಹ
WhatsApp Group Join Now
Telegram Group Join Now

ಜಮಖಂಡಿ :ಮಹರಾಷ್ಟ್ರ ಏಕೀಕರಣ ಸಮಿತಿಯ ಶುಭಂ ಶಿಕಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಗಡಿಪಾರು ಮಾಡಬೇಕೆಂದು ತಾಲೂಕು ಕರವೇ ಅಧ್ಯಕ್ಷ ಅರುಣ ಲಗಳಿ ಆಗ್ರಹಿಸಿದ್ದಾರೆ. ಕನ್ನಡ ನಾಡು, ನುಡಿಗಾಗಿ ಶ್ರಮಿಸುತ್ತಿರುವ ಕನ್ನಡದ ಸೇವಕರನ್ನು ಅತ್ಯಂತ ಹೀನವಾಗಿ ಟೀಕೆ ಮಾಡುವ ಎಂಇಎಸ್‌ ಗೂಂಡಾಗಳನ್ನು ಕಠಿವಾಗಿ ಶಿಕ್ಷಿಸಬೇಕು , ಕನ್ನಡಕ್ಕಾಗಿ ದುಡಿಯುತ್ತಿರುವ ನಾರಾಯಣಗೌಡ ರನ್ನು ವೈರಸ್‌ ಎಂದು ಟೀಕಿಸಿರುವ ಶುಭಂ ವಿರುದ್ಧ ಕೂಡಲೇ ಕಠಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸದೇ ಹೋದಲ್ಲಿ ಕರವೇ ಮಹಿಳಾ ಕಾರ್ಯಕರ್ತರು ಶುಭಂಗೆ ಚಪ್ಪಲಿ ಸೇವೆ ಮಾಡಲಿದ್ದಾರೆ, ಬೆಳಗಾವಿಯ ಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಮರಾಠಿಗರ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.ನಾಡದ್ರೋಹಿ ಎಂಇಎಸ.ಗೆ ಕರಾಳ ದಿನಾಚರಣೆಗೆ ಯಾವುದೇ ರೀತಿಯ ಪರವಾನಿಗೆ ನೀಡಬಾರದು, ಇಲ್ಲವಾದಲ್ಲಿ ರಾಜ್ಯಾದ್ಯಂತ ಕರವೇ ಕಾರ್ಯಕರ್ತರು ಬೆಳಗಾವಿಗೆ ನುಗ್ಗಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

WhatsApp Group Join Now
Telegram Group Join Now
Share This Article