ರಾಮದುರ್ಗ : ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಯಬಾಗ ತಾಲೂಕಿನ ಹಾರೂಗೇರಿಯ ಶ್ರೀ ಆದಿನಾಥ ದಿಗಂಬರ ಜೈನ ಸಮುದಾಯದಲ್ಲಿ ಜ.10 ರಂದು ಭವ್ಯ ಮೆರವಣಿಗೆಯೊಂದಿಗೆ ವೇದಿಕೆಯಲ್ಲಿ ಆಗಮಿಸಿದ ಸಮ್ಮೇಳನದ ಸರ್ವಾಧ್ಯಕ್ಷರಾದ ವಿ ಎಸ್ ಮಾಳಿ ದಂಪತಿಗಳನ್ನು ವೇದಿಕೆಗೆ ಕರೆತರಲಾಯಿತು.
ನಂತರ ವೇದಿಕೆಯಲ್ಲಿ ದಿವ್ಯ ಸಾನಿಧ್ಯ ವಹಿಸಿರುವ ಪೂಜ್ಯಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ, ಸಮ್ಮುಖ ವಹಿಸಿರುವ ಪೂಜ್ಯಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು ಮೋಟಗಿ ಮಠ ಅಥಣಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಪ್ರೊ ಚಂದ್ರಶೇಖರ ಅಕ್ಕಿ, ಉದ್ಘಾಟಕರಾದ ಪ್ರೊ ಎಸ್ ಜಿ ಸಿದ್ಧರಾಮಯ್ಯ ಹಿರಿಯ ಸಾಹಿತಿಗಳು ಬೆಂಗಳೂರು, ಅಧ್ಯಕ್ಷತೆಯನ್ನು ಮಹೇಂದ್ರ ತಮ್ಮಣ್ಣವರ ಶಾಸಕರು ಕುಡಚಿ, ಸ್ಮರಣ ಸಂಪುಟ ಬಿಡುಗಡೆಗೊಳಿಸಿದ ದುರ್ಯೋಧನ ಐಹೊಳೆ ಶಾಸಕರು ರಾಯಬಾಗ, ಸಮ್ಮೇಳನದ ಸರ್ವಾಧ್ಯಕ್ಷರಾದ ವಿ ಎಸ್ ಮಾಳಿ, ಈರನಗೌಡ ಪಾಟೀಲ, ಶಂಕರ ಕ್ಯಾಸ್ತಿ, ಟಿ ಎಸ್ ವಂಟಗೂಡಿ ಹಾಗೂ ಕವಿಗಳು ಮತ್ತು ಸಾಹಿತಿಗಳು ಭಾಗವಹಿಸಿದ್ದರು.
ಈ ಸಮ್ಮೇಳನದಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದ ಶ್ರೀ ಪವಾಡಗೈದ ಮಹಿಮಾಂತಕ ಮಾಳಿಂಗೇಶ್ವರ ಪೂಜಾರಿಗಳು, ಜಾನಪದ ಡೊಳ್ಳಿನ ಪದಗಳ ಕಲಾವಿದರು, ಸಂಘಟಕರು ಯುವ ಸಾಹಿತಿಗಳಾದ ಆನಂದ ಹಕ್ಕೆನ್ನವರ ಅವರು “ಕನ್ನಡದ ಆನಂದ” ಕಾವ್ಯನಾಮದಿಂದ ರಚಿಸಿದ ಪ್ರಥಮ ಕವನ ಸಂಕಲನ “ಹೃದಯಾಂತರಾಳ” ಕೃತಿ ಲೋಕಾರ್ಪಣೆ ಮಾಡುವ ಮೂಲಕ ಗೌರವಿಸಿ ಹಾರೈಸಿ ಶುಭ ಹಾರೈಸಿದರು.
ನಂತರ ಇಳಿಹೊತ್ತಿನಲ್ಲಿ ನಡೆದ ಗೋಷ್ಠಿ – ೨. ಕವಿ ಸಮಯ. ಅಧ್ಯಕ್ಷರಾಗಿ ಕಲ್ಮೇಶ ಕುಂಬಾರ, ಉದ್ಘಿಟಕರಾದ ನಾಗೇಶ ನಾಯಕ ಅವರು ತಮ್ಮ ಕವನ ವಾಚನ ಮಾಡುವ ಮೂಲಕ ಉದ್ಘಾಟಿಸಿದರು. ಅನೇಕ ಕವಿಗಳು ಭಾಗವಹಿಸಿದ್ದರು. ಇದರಲ್ಲಿ ಕನ್ನಡದ ಆನಂದ ಆನಂದ ಹಕ್ಕೆನ್ನವರ ಅವರು ರಾಮದುರ್ಗ ತಾಲೂಕನ್ನು ಪ್ರತಿನಿಧಿಸುವ ಮೂಲಕ ವೇದಿಕೆಯಲ್ಲಿ ಉಪಸ್ಥಿತರಾಗಿದ್ದು, ತಮಗೆ ಒದಗಿ ಬಂದ ಈ ಕವಿ ಸಮಯದಲ್ಲಿ ಎಲ್ಲಾ ಸಾಹಿತಿಗಳಿಗೆ ತಮ್ಮ ಹೃದಯಾಂತರಾಳ ಕವನ ಸಂಕಲನ ನೀಡಿ, ಅದೇ ವೇದಿಕೆಯಲ್ಲಿ ತಮ್ಮ ಕವನ ವಾಚನ ಮಾಡುವ ಮೂಲಕ ಜನಮೆಚ್ಚಿಸಿ ಚಪ್ಪಾಳೆಗಳ ಕರತಾಡನ ಮುಗಿಲು ಮುಟ್ಟುವಂತಿತ್ತು. ಎಲ್ಲರ ಮನದಲ್ಲಿ ತಮ್ಮ ಕವನದ ಮೂಲಕ ಮೆಚ್ಚುಗೆ ಪಡೆದ ಆನಂದ ಹಕ್ಕೆನ್ನವರ ಅವರಿಗೆ ವೇದಿಕೆಯ ಮೇಲೆ ಉಪಸ್ಥಿತರಿರುವ ವಿ ಎಸ್ ಮಾಳಿ ಹಾಗೂ ಗಣ್ಯರು ಗೌರವ ಅಭಿನಂದನೆ ಪತ್ರ ನೀಡಿ ಗೌರವಿಸಿ ಹಾರೈಸಿ ಅಭಿನಂದಿಸಿದರು ಎಂದು “ಕನ್ನಡದ ಆನಂದ” ರವರು ತಿಳಿಸಿದ್ದಾರೆ.


