ಬೆಂಗಳೂರು, ಜುಲೈ 18: ಮೆಟಾ ಸೇವೆಯಲ್ಲಿ ಕನ್ನಡ ಅನುವಾದ ಲೋಪ ಬಗ್ಗೆ ಗುರುವಾರ ಸಿಎಂ ಕಚೇರಿಯಿಂದ ಮೆಟಾಗೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಇದೀಗ ಈ ವಿಚಾರವಾಗಿ ಮೆಟಾ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಷಮೆ ಕೋರಿದೆ. ಜೊತೆಗೆ ತಪ್ಪು ಅನುವಾದ ಸಮಸ್ಯೆಯನ್ನು ಸದ್ಯ ಪರಿಹರಿಸಲಾಗಿದೆ ಎಂದು ಮೆಟಾ ವಕ್ತಾರರು ತಿಳಿಸಿರುವುದಾಗಿ ವರದಿ ಆಗಿದೆ.
ಸಿಎಂ ಸಿದ್ದರಾಮಯ್ಯ ಆಕ್ಷೇಪಣೆ ಬಗ್ಗೆ ಇದೀಗ ಸ್ಪಂದಿಸಿರುವ ಮೆಟಾ ಸಂಸ್ಥೆ, ತನ್ನ ಅನುವಾದ ವ್ಯವಸ್ಥೆಯಲ್ಲಿನ ಲೋಪವನ್ನು ಒಪ್ಪಿಕೊಂಡಿದೆ. ‘ತಪ್ಪು ಕನ್ನಡ ಅನುವಾದಕ್ಕೆ ಕಾರಣವಾದ ಸಮಸ್ಯೆಯನ್ನು ನಾವು ಸರಿಪಡಿಸಿದ್ದೇವೆ. ಈ ವಿಚಾರವಾಗಿ ನಾವು ಕ್ಷಮೆಯಾಚಿಸುತ್ತೇವೆ’ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.