ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ ಕಸಾಪ 110 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ

Ravi Talawar
ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ ಕಸಾಪ 110 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ
WhatsApp Group Join Now
Telegram Group Join Now

ಬೆಳಗಾವಿ:02-ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ, ಕ.ಸಾ.ಪ ೧೧೦ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ರವಿವಾರ ದಿ:೦೫/೦೫/೨೦೨೪ರಂದು,
ಸಮಯ:ಸಂಜೆ:೦೪:೦೦ಕ್ಕೆ, ಸ್ಥಳ:ಕನ್ನಡ ಭವನ ನೆಹರು ನಗರ, ರಾಮದೇವ ಹೊಟೇಲ್ ಹಿಂದೆ ಬೆಳಗಾವಿಯಲ್ಲಿ ನಡೆಯಲಿದೆ.

ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ .ಮಂಗಲಾ ಶ್ರೀ ಮೆಟಗುಡ್ಡ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬೆಳಗಾವಿಯ ನಿವೃತ್ತ ಮುಖ್ಯೋಪಾಧ್ಯಾಯರು ಅಶೋಕ ಉಳ್ಳೆಗಡ್ಡಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು ವಿಷಯದ ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ. ಬೆಳಗಾವಿಯ ನಿವೃತ್ತ ಅಭಿಯಂತರರು ಬಸವರಾಜ ಚೆಟ್ಟರ ಹಾಗೂ ಬೆಳಗಾವಿಯ ನಿವೃತ್ತ ನ್ಯಾಯಾಧೀಶರು ಉಲ್ಲಾಸ  ಬಾಳೇಕುಂದ್ರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಹುಕ್ಕೇರಿಯ ಸಾಹಿತಿಗಳು ಲೀಲಾವತಿ ರಜಪೂತ  ಅತಿಥಿಗಳಾಗಿ ಆಗಮಿಸಲಿದ್ದಾರೆ. .ಎಂ.ವೈ.ಮೆಣಸಿನಕಾಯಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ..ಸುಧಾ ಪಾಟೀಲ ಸ್ವಾಗತ ಮಾಡಲಿದ್ದಾರೆ. ವೀರಭದ್ರಪ್ಪ ಅಂಗಡಿ  ಅವರು ಉಪನ್ಯಾಸಕರ ಮತ್ತು ಅತಿಥಿಗಳ ಪರಿಚಯವನ್ನು ಮಾಡಲಿದ್ದಾರೆ..ಮಲ್ಲಿಕಾರ್ಜುನ ಕೋಳಿ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ.

.ಸುನೀಲ ಹಲವಾಯಿ ವಂದನಾರ್ಪಣೆಯನ್ನು ಸಲ್ಲಿಸಲಿದ್ದಾರೆ. ಕ.ಸಾ.ಪ. ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ  ಅಧ್ಯಕ್ಷರುಗಳು, ಹಾಗೂ ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಕ.ಸಾ.ಪ. ಸರ್ವ ಸದಸ್ಯರು, ಸಾಹಿತಿಗಳು, ಕಲಾವಿದರು ಮತ್ತು ಕನ್ನಡಪರ ಸಂಘಟನೆಗಳು, ಸಮಸ್ತ ಕನ್ನಡ ಮನಸ್ಸುಗಳು ಎಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ
ಶೋಭೆತರಬೇಕೆಂದು, ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಂಗಲಾ ಶ್ರೀ ಮೆಟಗುಡ್ಡ ವಿನಂತಿಸಿಕೊಂಡಿದ್ದಾರೆ.

 

WhatsApp Group Join Now
Telegram Group Join Now
Share This Article