ಯರಗಟ್ಟಿ: ಕನ್ನಡ ರಾಜ್ಯೊ?ತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಎಲ್ಲರೂ ಕೂಡಿ ನಮ್ಮ ಕನ್ನಡದ ಅಭಿಮಾನವನ್ನು ಸಂಭ್ರಮಿಸೋಣ, ಕನ್ನಡಕ್ಕಾಗಿ ದುಡಿದವರನ್ನು ಗೌರವಿಸೋಣ ಎಂದು ತಹಸೀಲ್ದಾರ್ ಎಮ್. ವ್ಹಿ. ಗುಂಡಪ್ಪಗೋಳ ಹೇಳಿದರು.
ಸೋಮವಾರ ಇಲ್ಲಿನ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿಆಯೋಜಿಸಿದ ಕನ್ನಡ ರಾಜ್ಯೊ?ತ್ಸವದ ಪೂರ್ವಭಾವಿ ಸಭೆಯಲ್ಲಿಮಾತನಾಡಿದ ಅವರು, ನವೆಂಬರ್ ೧ ರಂದು ಬೆಳಗ್ಗೆ ೮.೩೦ಕ್ಕೆ ಗಾಂಧಿ ವೃತ್ತದಿಂದ ಸರಕಾರಿ ಇಲಾಖೆಗಳ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡು ಪ್ರಭಾತಭೇರಿ ಆರಂಭಿಸಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಮಾರಂಭ ನಡೆಸಲಾಗುವುದು.
ಕನ್ನಡ ಭುವನೇಶ್ವರಿಯನ್ನು ಅಲಂಕಾರಗೊಳಿಸಿ ಮೆರವಣಿಗೆ ನಡೆಸಲಾಗುವುದು. ಪ್ರಾಥಮಿಕ ಶಾಲಾ ಆವರಣದಲ್ಲಿ ಧ್ವಜಾರೋಹಣ ಹಾಗೂ ಗಣ್ಯರ ಹಿತ ನುಡಿಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸರಕಾರಿ ಕಚೇರಿಗಳನ್ನು ವಿದ್ಯುದ್ದಿ?ಪ ಸೇರಿದಂತೆ ವಿವಿಧ ರೀತಿಯಲ್ಲಿಅಲಂಕಾರಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡ ವಿಷಯದಲ್ಲಿಅತ್ಯುತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿಗೌರವಿಸಲಾಗುತ್ತದೆ. ಅದರೊಂದಿಗೆ ತಾಲೂಕಿನ ಪ್ರತಿಭಾವಂತರನ್ನು ಹಾಗೂ ಕನ್ನಡಕ್ಕಾಗಿ ಶ್ರಮಿಸಿದವರನ್ನು ಗೌರವಿಸಲಾಗುತ್ತದೆ ಎಂದರು.
ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಪಶು ವೈದ್ಯಾಧಿಕಾರಿ ಡಾ. ಎಂ ವ್ಹಿ ಪಾಟೀಲ, ಎಎ??? ವಾಯ್ ಎಂ. ಕಡಕೋಳ, ಹೇಸ್ಕಾಂ ಅಧಿಕಾರಿ ಮಹಾಂತೇಶ ಯರಗಟ್ಟಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಪ. ಪಂ. ಸದಸ್ಯರಾದ ನಿಖಿಲ ಪಾಟೀಲ, ಹನಮಂತ ಹಾರೂಗೊಪ್ಪ, ಸಲಿಂಬೇಗ ಜಮಾದಾರ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಭಾಸ್ಕರ ಹಿರೇಮೆತ್ರಿ, ಕಸಾಪ ಅಧ್ಯಕ್ಷ ತಮ್ಮಣ್ಣಾ ಕಾಮಣ್ಣವರ, ಕೃಷಿ ಅಧಿಕಾರಿ ಎಂ. ಜಿ. ಕಳಸಪ್ಪನವರ, ಆರೋಗ್ಯ ಇಲಾಖೆಯ ಸುನೀಲ ಕಾಶನ್ನವರ, ಕರವೇ ಅಧ್ಯಕ್ಷ ರಫೀಕ ಡಿ.ಕೆ, ನಿಲಯ ಪಾಲಕರಾದ ಆಶಾ ಪರೀಟ, ಉಪನ್ಯಾಸಕರಾದ ಡಾ. ರಾಜಶೇಖರ ಬಿರಾದಾರ, ಎಂ. ಡಿ. ಸರದಾರ, ಬಿ. ಎಸ್. ಆಲದಕಟ್ಟಿ, ಎ. ಎ. ಮಕ್ತುಮನ್ನವರ, ಎಂ ಎಂ. ಚಿಲದ, ಶಿವಾನಂದ ಕರಿಗೋಣವರ, ಫಾರುಕ್ ಅತ್ತಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮೊದಲಾದವರಿದ್ದರು.


