ವಿಜಯಪುರ – ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಜಯಂತಿ ಪ್ರಯುಕ್ತ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರೌಢಶಾಲಾ ಶಿಕ್ಷಕ ವಿ .ಕೆ . ಗುಜುರಿ ಕನ್ನಡ ನಾಡು ಸಾಮಾಜಿಕ ಮತ್ತು ಆರ್ಥಿಕ ಶಕ್ತಿಗೆ ಮೂಲ ಪ್ರೇರಕ ಶಕ್ತಿಯಾಗಿದ್ದರು, ಕೃ?ರಾಜಸಾಗರ ಅಣೆಕಟ್ಟು ಮೈಸೂರು ಸ್ಯಾಂಡಲ್ ಸೋಪ್ ಜೋಗ ಜಲಪಾತದಲ್ಲಿ ವಿದ್ಯುತ್ ಶಕ್ತಿ ಉತ್ಪಾದನಾ ಘಟಕವನ್ನು ಲಿಂಗನಮಕ್ಕಿಯಲ್ಲಿ ಸ್ಥಾಪಿಸಿದರು ಇನ್ನು ಅನೇಕ ವೈಜ್ಞಾನಿಕ ಘಟಕಗಳನ್ನು ಅಭಿವೃದ್ಧಿಪಡಿಸಿದರು ಕನ್ನಡಿಗರ ಮಾತೃ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿ?ತ್ತಿನ ಮೂಲ ಕಾರಣ ಕರ್ತರಾಗಿದ್ದರು .
ಅವರು ಇಂದು ನಮ್ಮ ಕನ್ನಡದ ನೆಲ ಜಲ ವಿಜ್ಞಾನ ತಂತ್ರಜ್ಞಾನ ತವರಾಗಿರುವದು ಇದರ ಹಿಂದಿನ ಶಕ್ತಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರ ದೃಷ್ಟಿ ಸಮಾಜಮುಖಿ ಚಿಂತನೆ ನಿಜವಾದ ಅರ್ಥದಲ್ಲಿ ಮೈಸೂರು ಸಂಸ್ಥಾನದ ಭಾಗ್ಯವಿಧಾತ ಆಧುನಿಕ ಮೈಸೂರಿನ ನಿರ್ಮಾಪಕರಾಗಿದ್ದರು. ಹೈದ್ರಾಬಾದಿನ ನಿಜಾಮರ ಕರೆಯ ಮೇರೆಗೆ ಪ್ರವಾಹದಿಂದ ರಕ್ಷಿಸಲು ಯೋಜನೆ ತಯಾರಿಸಿ ಕೊಟ್ಟರಲ್ಲದೆ ಹೈದರಾಬಾದಿನ ಒಸ್ಮಾನ್ ಸಾಗರ ಮತ್ತು ಹಿಮಾಯುತ್ ಸಾಗರಗಳನ್ನು ನಿರ್ಮಿಸಿ ಆಧುನಿಕ ಹೈದರಾಬಾದಿನ ನಿರ್ಮಾಣಕ್ಕೂ ಕಾರಣರಾದ ಕನ್ನಡ ಅದ್ಭುತ ಚೇತನ ಅವರಾಗಿದ್ದರು ಎಂದು ತಿಳಿಸಿದರು ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯ ರಮೇಶ್ ಕೋಟ್ಯಾಳ , ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಬೋಧಕ ಬೋಧಕೇತರ ಸಿಬ್ಬಂದಿ, ಪಾಲಕರು ಪಾಲ್ಗೊಂಡಿದ್ದರು.