ಕನ್ನಡ ಭಾಷೆ, ಕನ್ನಡಿಗರ ಭಾವನೆಗಳ ಸಂಸ್ಕೃತಿ ಡಾ. ಅಲ್ಲಮಪ್ರಭು ಮಹಾ ಸ್ವಾಮೀಜಿ

Ravi Talawar
ಕನ್ನಡ ಭಾಷೆ, ಕನ್ನಡಿಗರ ಭಾವನೆಗಳ ಸಂಸ್ಕೃತಿ ಡಾ. ಅಲ್ಲಮಪ್ರಭು ಮಹಾ ಸ್ವಾಮೀಜಿ
WhatsApp Group Join Now
Telegram Group Join Now
ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಯಬೇಕಾದರೆ ನಾವು ಕೇವಲ ನವೆಂಬರ್ 1ನೇ ತಾರೀಕಿನ ಕನ್ನಡಿಗರಾಗಬಾರದು . ವರ್ಷದುದ್ದಕ್ಕೂ, ಜೀವನದುದ್ದಕ್ಕೂ ನಿರಂತರ ಕನ್ನಡ ಭಾಷೆಯನ್ನು ಬಳಸಬೇಕು ಮತ್ತು ಕನ್ನಡ ಕೇವಲ ಹೋರಾಟದ ಭಾಷೆಯಾಗದೆ ಅಭಿವೃದ್ಧಿಯ ಭಾಷೆಯಾಗಬೇಕು ಆದ್ದರಿಂದ,ಕನ್ನಡ ಭಾಷೆ ನಮ್ಮ  ಭಾವನೆಗಳ ಸಂಸ್ಕೃತಿಯಾಗಿದೆ ಅದನ್ನು ನಾವು ಗೌರವಿಸಬೇಕು
ಎಂದು ನಾಗನೂರು ರುದ್ರಾಕ್ಷಿಮಠ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು   ಅಭಿಪ್ರಾಯಪಟ್ಟರು. ಅವರು ಇಂದು ಬೆಳಗಾವಿ ಶಿವಬಸವ ನಗರದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ 70 ನೇ ಕನ್ನಡ ರಾಜ್ಯೋತ್ಸವದ ಸಮಾರಂಭದ  ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ  ಮಾತನಾಡಿದರು. ಮುಂದುವರೆದು ಕನ್ನಡದ ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಭಾಷೆ ಉಳಿಯಲು, ಕರ್ನಾಟಕದಲ್ಲಿ ಬೆಳಗಾವಿ ಗಟ್ಟಿಯಾಗಿ ನೆಲೆಗೊಳ್ಳಲು ನಾಗನೂರು ಶ್ರೀ ರುದ್ರಾಕ್ಷಿ ಮಠದ ಸೇವೆ ಅಪಾರವಾದದು ಎಂದು ಸ್ಮರಿಸಿದರು.

ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್‌.ಪಿ. ಹಿರೇಮಠ ಸಭೆಯ ಅಧ್ಯಕ್ಷತೆ ವಹಿಸಿ ಕನ್ನಡ ಪ್ರಾಚೀನ ಕಾಲದಿಂದಲೂ ಜಗತ್ತಿನ  ಎರಡನೆಯ ಭಾಷೆಯಾಗಿದೆ, ಸುದೀರ್ಘ ಇತಿಹಾಸ ಉಳ್ಳ ಈ  ಭಾಷೆಯನ್ನು ಕಾಪಾಡಿಕೊಂಡು ಸಮೃದ್ಧಗೊಳಿಸಬೇಕೆಂದರು ವೇದಿಕೆ ಮೇಲೆ ಸಾಧಕರಾದ ವಿಶ್ವನಾಥ ದೇವರು ಹಾಗೂ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು  ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಉಪನ್ಯಾಸಕರಾದ ಏ.ಕೆ ಪಾಟೀಲ  ಸ್ವಾಗತಿಸಿ ಪ್ರಾಸ್ತಾವಿಕ ಪರ ನುಡಿಗಳನ್ನಾಡಿದರು, ಉಪನ್ಯಾಸಕಿ ಜಯಶ್ರೀ ಕೆಂಗೇರಿ  ನಿರೂಪಿಸಿದರು ಕೊನೆಗೆ ಉಪನ್ಯಾಸಕ ರವಿರಾಜ ಖೋತ ವಂದಿಸಿದರು

WhatsApp Group Join Now
Telegram Group Join Now
Share This Article