ಅಥಣಿ: ಕರ್ನಾಟಕ ಸರ್ಕಾರದ ಸ್ಪಷ್ಟ ಆದೇಶದನ್ವಯ ಪ್ರತಿಯೊಂದು ವ್ಯಾಪಾರ ಮಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳ ನಾಮಫಲಕ ಮತ್ತು ಫ್ಲೆಕ್ಸ್ಗಳಲ್ಲಿ ಶೇ60 ರಷ್ಟು ಕನ್ನಡ ಬಳಕೆ ಕಡ್ಡಾಯವಾಗಿದೆ. ಆದರೆ ಅಥಣಿ ಪಟ್ಟಣದ ಹೊರವಲಯದಲ್ಲಿ ಸಾಯನಿಕೇತನ ಶಾಲೆಯ ಭೋರ್ಡಗಳನ್ನು ನಿಯಮವನ್ನು ಗಾಳಿಗೆ ತೂರಿ, ಸಂಪೂರ್ಣ ಆಂಗ್ಲ ಭಾಷೆಯಲ್ಲಿ ಬ್ಯಾನರ್ ಅಳವಡಿಸಿರುವುದು ಕನ್ನಡ ಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾದ ಘಟನೆ ನಡೆದಿದೆ
ಪಟ್ಣದ ಶಿವಯೋಗಿ ವೃತ್ತದ ಬಳಿ ಅಳವಡಿಸಲಾಗಿದ್ದ ಸಾಯಿನಿಕೇತನ ಕಾಲೇಜಿನ ಬ್ಯಾನರ್ನಲ್ಲಿ ಸಂಪೂರ್ಣ ಇಂಗ್ಲಿಷ್ ಭಾಷೆಯ ಬ್ಯಾನರ್ನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹರಿದು ಹಾಕಿ, ಶಾಲಾ ಆಡಳಿತ ಮಂಡಳಿ ಹಾಗೂ ಪುರಸಭೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕರವೆ ತಾಲೂಕು ಅಧ್ಯಕ್ಷ ಶಬ್ಬೀರ್ ಸಾತಬಚ್ಚೆ “ಸರ್ಕಾರದ ಆದೇಶದಂತೆ 60:40 ಅನುಪಾತದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ನಾವು ಪದೇ ಪದೇ ಮನವಿ ಮಾಡುತ್ತಿದ್ದರೂ ಕೆಲವರು ಉದ್ದಟತನ ಪ್ರದರ್ಶಿಸುತ್ತಿದ್ದಾರೆ. ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಲು ಒಂದು ವಾರದ ಗಡುವು ನೀಡುತ್ತಿದ್ದೇವೆ. ತಪ್ಪಿದಲ್ಲಿ ಅಂತಹ ಬೋರ್ಡ್ಗಳಿಗೆ ಕಪ್ಪು ಮಸಿ ಬಳಿಯುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು,” ಎಂದು ಎಚ್ಚರಿಸಿದರು.
ತಾಲೂಕು ಉಪಾಧ್ಯಕ್ಷ ಮಂಜು ಹೋಳಿಕಟ್ಟಿ ಮಾತನಾಡಿ ಪುರಸಭೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು ಸರ್ಕಾರದ ನಿಯಮವಿದ್ದರೂ ಸಾಯಿನಿಕೇತನ ಶಾಲೆಯ ಸಂಪೂರ್ಣ ಆಂಗ್ಲ ಭಾಷೆಯ ಬ್ಯಾನರ್ಗೆ ಅನುಮತಿ ನೀಡಿದ ಅಧಿಕಾರಿಗಳ ನಡೆ ನಾಚಿಕೆಗೇಡು. ಇನ್ನು ಮುಂದೆ ಇಂತಹ ನಿಯಮಬಾಹಿರ ಫ್ಲೆಕ್ಸ್ಗಳಿಗೆ ಅನುಮತಿ ನೀಡಿದರೆ, ಸಂಬಂಧಪಟ್ಟ ಅಧಿಕಾರಿಗಳಿಗೂ ಕಪ್ಪು ಮಸಿ ಬಳಿದು ಹೋರಾಟ ಮಾಡ ಬೇಕಾಗುತ್ತದೆ ಎಂದು ಹೇಳಿದರು
ಈ ವೇಳೆ ಹೋರಾಟದಲ್ಲಿ ಉಪಾಧ್ಯಕ್ಷ ಸಿದ್ದಗೌಡ ಹಿಪ್ಪರಗಿ, ಸಚಿನ ಪಾಟಿಲ, ಜಾಫರ್ ಪಟೇಲ, ಪ್ರಹಲಾದ ವಾಗಮೋರೆ, ರಾಹಿದ ಮಾಸ್ಟರ್, ಯಾಸಿನ ಮಕಾನದಾರ, ರಾಜು ತಂಗಡಿ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು
ಕನ್ನಡ ಭಾಷೆ ಬಳಕೆ ಮಾಡದ ಅನ್ಯ ಭಾಷೆ ಬೊರ್ಡ ಹರಿದು ಕರವೆ ಪ್ರತಿಭಟನೆ


