ಯಶ್, ದರ್ಶನ್ ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ: ನಟ ಸುದೀಪ್‌

Ravi Talawar
ಯಶ್, ದರ್ಶನ್ ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ: ನಟ ಸುದೀಪ್‌
WhatsApp Group Join Now
Telegram Group Join Now

ಬೆಂಗಳೂರು: ಯಶ್, ದರ್ಶನ್ ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಅದರ ಹೊರತಾಗಿ ನಾವು ಯಾರಿಗೂ ಟಾಂಟ್‌ ಕೊಡಲ್ಲ, ಯಾಕೆ ಕೊಡಬೇಕು ಎಂದು ನಟ ಕಿಚ್ಚ ಸುದೀಪ್‌ ಹೇಳಿದ್ದಾರೆ.

ಮ್ಯಾಕ್ಸ್‌ ಸಿನಿಮಾದ ಸಕ್ಸಸ್‌ ಮೀಟ್‌ನಲ್ಲಿ ಮಾತನಾಡಿದ ಕಿಚ್ಚ ಸುದೀಪ್‌, ʻಬಾಸ್ ಕಾಲ ಮುಗಿತು ಮ್ಯಾಕ್ಸ್ ಮಾಸ್ ಆಟ ಶುರುʼ ಕೇಕ್ ಕಂಟ್ರೋವರ್ಸಿಗೆ ಸುದೀಪ್ ಕ್ಲಾರಿಟಿ ಕೊಟ್ಟಿದ್ದಾರೆ. ಚಿತ್ರರಂಗದಲ್ಲಿ ಯಶ್, ದರ್ಶನ್, ಧ್ರುವ, ಉಪ್ಪಿ ಸರ್, ಶಿವಣ್ಣ ಪ್ರತಿಯೊಬ್ಬರೂ ಸೇರಿದರೇ ಕನ್ನಡ ಚಿತ್ರರಂಗ. ಸಂದರ್ಶನದಲ್ಲಿ ಇದೇ ದರ್ಶನ್ ಅವರ ಫ್ಯಾನ್ಸ್ ಬಗ್ಗೆ ಬಂದಾಗ ನಾನೇ ಹೇಳಿದ್ದೆ, ಫ್ಯಾನ್ಸ್ ಬಗ್ಗೆ ಬೈಯ್ಯುವುದಕ್ಕೆ ಹೋಗಬೇಡಿ. ಅವರಿಗೆ ಗೊತ್ತಾಗುತ್ತಿಲ್ಲ ಏನು ಮಾಡಬೇಕು ಅಂತ. ಅವರು ನೋವಿನಲ್ಲಿ ಇದ್ದಾರೆ ಅಂದಿದ್ದೆ. ಇದೇ ನಾನು ನನ್ನ ಬಾಯಾರೆ ಹೇಳಿದ ಮೇಲೆ ನಾವ್ಯಾಕೆ ಟಾಂಟ್ ಕೊಡೋಣ?” ಎಂದು ಸುದೀಪ್ ಕ್ಲಾರಿಟಿ ಕೊಟ್ಟಿದ್ದಾರೆ.

ನಾವೇನು ಛತ್ರಪತಿಗಳಾ? ಚಕ್ರವರ್ತಿಗಳಾ? ವಯಸ್ಸಾಗಿ ನಾವು ಒಂದು ದಿನ ಹೋಗೋರೇ. ಬದುಕಿರಬೇಕಾದರೆ, ಒಂದು ಸಿನಿಮಾ ಕೈ ಹಿಡಿದಿರಬೇಕಾದರೆ, ಬೆಳೆಯೋಣ, ಇನ್ನೊಂದಿಷ್ಟು ಸಿನಿಮಾ ಮಾಡೋಣ. ಈಗ ಯಶ್‌ಗೆ ಯಶ್ ಬಾಸ್ ಅನ್ನಲ್ವಾ? ಧ್ರುವಾಗೆ ಧ್ರುವ ಬಾಸ್ ಅನ್ನಲ್ವಾ?, ಶಿವಣ್ಣಗೆ ಶಿವಣ್ಣ ಬಾಸ್ ಅಂತ ಕರೆಯಲ್ವಾ? ಉಪ್ಪಿ ಬಾಸ್ ಅನ್ನಲ್ವಾ? ನನಗೂ ದರ್ಶನ್‌ಗೂ ಏನಿಲ್ಲ. ಬಹಳ ಕಷ್ಟಪಟ್ಟು ಅವರೂ ಮೇಲೆ ಬಂದಿದ್ದಾರೆ. ಪ್ರತಿ ಕಲಾವಿದರೂ ಬಂದಿದ್ದಾರೆ. ಚಿತ್ರರಂಗ ನೋವಿನಲ್ಲಿದೆ. ಅದು ಬೆಳೆಯಬೇಕು ಅಂದರೆ, ಅದು ಬೇಡ ನಮಗೆ ಎಂದಿದ್ದಾರೆ.

ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಇದೆ ದರ್ಶನ್ ಫ್ಯಾನ್ಸ್ ಬಗ್ಗೆ ಹೇಳ್ದಾಗ ನಾನು ಫ್ಯಾನ್ಸ್‌ಗೆ ಬೈಬೇಡಿ ಅಂದಿದ್ದೆ. ಅವರು ನೋವಿನಲ್ಲಿದ್ದಾರೆ ಏನ್‌ ಮಾತಡಬೇಕು ಅಂತ ಗೊತ್ತಾಗ್ತಿಲ್ಲ ಅಂತ ಹೇಳಿದೆ. ನಾವ್ಯಾಕೆ ಟಾಂಟ್‌ ಕೊಡಬೇಕು? ನನ್ನ ಫ್ಯಾನ್ಸ್ ಎಲ್ಲಾ ಹೀರೋಗಳ ಸಿನಿಮಾ ನೋಡ್ತಾರೆ. ಕೆಟ್ಟ ಅಹಂಕಾರ ನಮ್ಮಲಿ ಇದೆ ಅಂದು ಕೊಂಡಿರೋದೇ ತಪ್ಪು ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article