ಬಳ್ಳಾರಿ, ಮೇ 12: ಬಳ್ಳಾರಿ ತಾಲೂಕಿನ ಕೊರ್ಲ ಗುಂದಿ ಗ್ರಾಮದಲ್ಲಿ ಕನ್ನಡ ಚೈತನ್ಯ ವೇದಿಕೆ ಮತ್ತು ಊರಿನ ಗ್ರಾಮಸ್ಥರು 10 ದಿನಗಳ ಕಾಲ ಯೋಗ ಶಿಬಿರವನ್ನು ಆಯೋಜಿಸಿದ್ದು ಶಿಬಿರವನ್ನು ರಾಜ್ಯ ಸಮಿತಿ ಮತ್ತು ಜಿಲ್ಲಾ ಪತಂಜಲಿ ಸಮಿತಿಯವರು ನಡೆಸಿಕೊಟ್ಟರು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಸಮಿತಿಯ ಸದಸ್ಯರಾದ ಇಸ್ವಿ ಪಂಪಾಪತಿ ಅವರು ಉದ್ಘಾಟಿಸಿ ಸರ್ವರೋಗ ಗಳಿಗೆ ಯೋಗವೇ ಒಂದು ರಾಮಬಾಣ ನಿತ್ಯ ಯೋಗ ಮಾಡಿದರೆ ಶಾರೀರಿಕ ಬೌದ್ಧಿಕ ಆರೋಗ್ಯ ಮಾನ ಸಿಕ ಆರೋಗ್ಯ ಸೇವಾ ಮನೋಭಾವನೆ ಬೆಳೆಸಿಕೊಳ್ಳಲು ಮತ್ತು ಒಳ್ಳೆಯ ಸೇವೆ ಒಳ್ಳೆಯ ನಡತೆ ಆಧ್ಯಾತ್ಮಿಕ ಚಿಂತನೆ ಮಾನವ ಕಲ್ಯಾಣ ಮತ್ತು ವಿಶ್ವದ ಕಲ್ಯಾಣ ಯೋಗದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಮಹಿಳಾ ಕನ್ನಡ ಚೈತನ್ಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಜ್ಯೋತಿಪ್ರಕಾಶ್ ಅವರು ಯೋಗದಿಂದ ದೈಹಿಕ ಮಾನಸಿಕ ಸದೃಢತೆ ಸಾಧ್ಯ ಯೋಗ ಧ್ಯಾನ ಪ್ರಾಣಯಾಮ ದಿಂದ ನಾನಾ ರೋಗಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಯೋಗ ಶಿಬಿರವನ್ನು ಯುವ ಭಾರತ್ ಅಧ್ಯಕ್ಷರಾದ ರುದ್ರಪ್ಪನವರು ಕಿಸಾನ್ ಸೇವಾ ಸಮಿತಿ ಅಧ್ಯಕ್ಷರಾದ ದೊಡ್ಡಬಸಪ್ಪ ಕಾರ್ಯದರ್ಶಿಗಳಾದ ರುದ್ರಮುನಿ ನಡೆಸಿಕೊಟ್ಟರು. ಶಿಬಿರದಲ್ಲಿ ಕನ್ನಡ ಚೈತನ್ಯ ವೇದಿಕೆಯ ಅಧ್ಯಕ್ಷರಾದ ಪ್ರಭು ಕುಮಾರ್ ಯೋಗ ಸಂಯೋಜಕ ರಾದ ಚಿದಂಬರ ರಾವ್ ಮಾರ್ಗದರ್ಶಕರಾದ ಚಂದ್ರೇಗೌಡರು ಪತಂಜಲಿ ಉಪಾಧ್ಯಕ್ಷರಾದ ಸುಬ್ಬಯ್ಯನವರು ಮತ್ತು ಗ್ರಾಮದ ವೆಂಕಟರಮಣ ರೆಡ್ಡಿ ರಾಮಾಂಜನಿ ರೆಡ್ಡಿ ನಾಗನಗೌಡ ಹಾಗೂ ಗುರುಬಸಯ್ಯ ಶಿಕ್ಷಕರು ಉಪಸ್ಥಿತರಿದ್ದರು ಎಲ್ಲರೂ ಗ್ರಾಮದ 50ರಿಂದ 60 ಜನ ಶಿಬಿರದಲ್ಲಿ ಭಾಗವಹಿಸಿ ಯೋಗ ಶಿಬಿರವನ್ನು ಯಶಸ್ವಿಗೊಳಿಸಿದರು.