ಬಳ್ಳಾರಿ ಜುಲೈ17. ಬಳ್ಳಾರಿ ನಗರದ ಆದಿ ದೇವತೆಯ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ 13 ಹುಂಡಿಗಳನ್ನು ಇಂದು ತೆರೆಯಲಾಯಿತು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾದ ಹನುಮಂತಪ್ಪ ತಿಳಿಸಿದ್ದಾರೆ.
ಇಂದು ಮುಂಜಾನೆ ಬಳ್ಳಾರಿ ಸಹಾಯಕ ಆಯುಕ್ತರು ಹಾಗೂ ದೇವಸ್ಥಾನದ ಆಡಳಿತ ಅಧಿಕಾರಿ ಪ್ರಮೋದ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಎಚ್ ಸವಿತಾ ಮತ್ತು ಗ್ರೇಡ್ ಟು ತಹಸಿಲ್ದಾರ್ ಅವರುಗಳ ಸಮ್ಮುಖದಲ್ಲಿ ಹುಂಡಿಯ ಬೀಗವನ್ನು ತೆರೆಯಲಾಯಿತು. ನಂತರ ಹುಂಡಿಯಲ್ಲಿ ಜಮೆಯಾಗಿದ್ದ ಹಣವನ್ನು ಎಣಿಸಲಾಗಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 67,86,179 ರೂಪಾಯಿಗಳಷ್ಟು ಹಣ ಸಂಗ್ರಹ ಗೊಂಡಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.
ಹಣ ಎಣಿಕೆಯ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿಗಳು ಹೋಮ್ ಗಾರ್ಡ್ಗಳು ಸೇರಿದಂತೆ ಹಲವರು ಭಾಗವಹಿಸಿದ್ದರು. ಹುಂಡಿಯ ಹಣವನ್ನು ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಎಣಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.