ಕಲ್ಯಾಣ ಕರ್ನಾಟಕದ ಅತ್ಯಾಧುನಿಕ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ನ.೩ಕ್ಕೆ ಲೋಕಾರ್ಪಣೆ

Ravi Talawar
ಕಲ್ಯಾಣ ಕರ್ನಾಟಕದ ಅತ್ಯಾಧುನಿಕ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ನ.೩ಕ್ಕೆ ಲೋಕಾರ್ಪಣೆ
WhatsApp Group Join Now
Telegram Group Join Now
ಬಳ್ಳಾರಿ: 24 ಕಲ್ಯಾಣ ಕರ್ನಾಟಕದ ಅತ್ಯಾಧುನಿಕ, ಸುಸಜ್ಜಿತ ಹಾಗೂ ಅತಿದೊಡ್ಡದು ಎನಿಸಿದ, ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನವೆಂಬರ್ ೩ರಂದು ಹರಪನಹಳ್ಳಿ ಸಮೀಪದ ಕೊಮಾರನಹಳ್ಳಿಯಲ್ಲಿ ಸಾರ್ವಜನಿಕ ಸೇವೆಗೆ ಸಮರ್ಪಣೆಯಾಗಲಿದೆ. ಇದರ ಅಂಗವಾಗಿ ನ.೨ರಂದು ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಶ್ರೀಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ್ವರ ಶ್ರೀಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿ ಸಾನ್ನಿಧ್ಯವಹಿಸುವರು. ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಪಟ್ಟಾಧ್ಯಕ್ಷ ಶ್ರೀ ವರದಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು ಎಂದು ಜಯ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮಹೇಶ್ ಎಸ್.ಎನ್, ಮುಖ್ಯ ವೈದ್ಯಾಧಿಕಾರಿ ಹಾಗೂ ನಿರ್ದೇಶಕ ಡಾ.ರಾಜೇಶ್ ಪಾದೇಕಲ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಚ್ಚ ಹಸಿರಿನ ಪ್ರಶಾಂತ ಪರಿಸರದಲ್ಲಿ ಹರಪನಹಳ್ಳಿಯಿಂದ ಕೇವಲ ಒಂಬತ್ತು ಕಿಲೋಮೀಟರ್ ದೂರದಲ್ಲಿ, ಆರೂವರೆ ಎಕರೆ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿರುವ ಜನನಿ ಆಸ್ಪತ್ರೆ, ಕಲ್ಯಾಣ ಕರ್ನಾಟಕದ ಸಾಮಾಜಿಕ ಸ್ವಾಸ್ಥ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಎನಿಸಲಿದೆ ಎಂದರು.
ಜೀವನಶೈಲಿ ರೋಗಗಳು ಇಂದು ದೇಶದ ಸಾಮಾಜಿಕ ಹಾಗೂ ಆರ್ಥಿಕ ಮುನ್ನಡೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯುವಜನತೆಯಿಂದ ಹಿಡಿದು ಶ್ರಮಶಕ್ತಿಯ ಕ್ಷಮತೆಯನ್ನೇ ಜೀವನಶೈಲಿ ರೋಗಗಳು ಕ್ಷಯಿಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿದೆ. ಆಧುನಿಕ ವೈದ್ಯವಿಜ್ಞಾನ ರೋಗಚಿಕಿತ್ಸೆಗಿಂತ ರೋಗಗಳು ಬಾಧಿಸದಂತೆ ತಡೆಯುವ ಮುಂಜಾಗ್ರತಾ ಕ್ರಮಗಳಿಗೆ ಒತ್ತು ನೀಡಿದ್ದು, ಸಮಗ್ರ ಸುಕ್ಷೇಮಕ್ಕೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವರದಾನವಾಗಿದೆ ಎಂದರು.
ಪAಚಭೂತಗಳಿAದ ಮಾನವ ಶರೀರ ನಿರ್ಮಾಣವಾಗಿದ್ದು, ಮಣ್ಣು, ಅಗ್ನಿ, ವಾಯು, ಜಲ, ಆಕಾಶ ತತ್ವಗಳನ್ನೇ ಚಿಕಿತ್ಸಕ ಅಂಶವನ್ನಾಗಿ ಬಳಸುವುದು ಪ್ರಕೃತಿ ಚಿಕಿತ್ಸೆ. ಬಹಳಷ್ಟು ರೋಗಗಳಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಪೂರಕ ಚಿಕಿತ್ಸಾ ವಿಧಾನವಾಗಿ ಅಲೋಪತಿ ವೈದ್ಯವಿಜ್ಞಾನ ಕೂಡಾ ಶಿಫಾರಸ್ಸು ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಸುಸ್ಥಿರ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಮತ್ತು ಪ್ರಕೃತಿ ವಿಜ್ಞಾನ ವಿದೇಶಗಳಲ್ಲೂ ಜನಪ್ರಿಯವಾಗುತ್ತಿದೆ ಎಂದು ವಿವರಿಸಿದರು.
ಡಾ.ಮಹೇಶ್ ಹಾಗೂ ಡಾ.ಜಯಶ್ರೀ ಪಾಟೀಲ ಅವರ ನಾಯಕತ್ವ ಹಾಗೂ ದೂರದೃಷ್ಟಿಗೆ ಅನುಸಾರವಾಗಿ, ಮೂರು ವರ್ಷಗಳಿಂದ ಹರಪನಹಳ್ಳಿಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕುರಿತ ವೈದ್ಯಕೀಯ ಪದವಿ ಕೋರ್ಸ್ ನಡೆಸುತ್ತಾ ಬಂದಿರುವ ಜಯ ಎಜ್ಯುಕೇಶನಲ್ ಟ್ರಸ್ಟ್, ಕಲ್ಯಾಣ ಕರ್ನಾಟಕದ ಜನತೆಗೆ ಕೊಡುಗೆಯಾಗಿ ಈ ಅತ್ಯಾಧುನಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಾಗಿ ಬೆಂಗಳೂರು, ದಕ್ಷಿಣ ಕನ್ನಡದ ಧರ್ಮಸ್ಥಳದಂಥ ದೂರದ ಊರುಗಳಿಗೆ ಹೋಗುವುದು ತಪ್ಪಿ ಈ ಭಾಗದ ಜನತೆಗೆ ಮನೆಬಾಗಿಲಲ್ಲೇ ಈ ಸೇವೆ ಲಭ್ಯವಾಗಲಿದೆ ಎಂದು ವಿವರಿಸಿದರು.
ಹರಪನಹಳ್ಳಿಯ ಕೊಮಾರನಹಳ್ಳಿಯ ಸಮೀಪದ ಸುಂದರ ಪ್ರಕೃತಿಯ ಮಡಿಲಲ್ಲಿ ಅತ್ಯಾಧುನಿಕ ಸಔಲಭ್ಯಗಳೊಂದಿಗೆ ಗ್ರಾಮೀಣ ಪ್ರಶಾಂತ ಪರಿಸರದಲ್ಲಿ ನಿರ್ಮಿಸಲಾದ ೧೦೦ ಹಾಸಿಗೆಗಳ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ, ಮೂರು ದಶಕಗಳ ಅನುಭವ ಹೊಂದಿರುವ ಮುಖ್ಯ ವೈದ್ಯಾಧಿಕಾರಿ ಮತ್ತು ನಿರ್ದೇಶಕ ಡಾ.ರಾಜೇಶ್ ಪಾದೇಕಲ್ ನೇತೃತ್ವದ ನುರಿತ ವೈದ್ಯಕೀಯ ಸಿಬ್ಬಂದಿಯ ಸೇವೆ ದೊರಕಲಿದೆ ಎಂದರು.
ಪ್ರಕೃತಿಯ ಜ್ಞಾನ ಮತ್ತು ಆಧುನಿಕ ಅರೈಕೆಯ ಸಮನ್ವಯದೊಂದಿಗೆ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ವಾಸ್ಥ್ಯವನ್ನು ಅನುಭವಿಸುವ ಅವಕಾಶ ಸಮಾಜದ ಎಲ್ಲ ವರ್ಗದವರಿಗೂ ಕೈಗೆಟುಕಬೇಕು ಎಂಬ ದೃಷ್ಟಿಯಿಂದ ಊಟ, ವಸತಿ ಮತ್ತು ಮೂಲ ಚಿಕಿತ್ಸೆ ಸೇರಿ ದಿನಕ್ಕೆ ೧೨೦೦ ರೂಪಾಯಿಗಳಷ್ಟು ಕನಿಷ್ಠ ಶುಲ್ಕ ನಿಗದಿಪಡಿಸಲಾಗಿದೆ ಎಂದರು.
ಹಿಪ್ ಬಾತ್, ಸೈನಲ್ ಬಾತ್, ಎನಿಮಾ, ಕೊಲೊನ್ ಹೈಡೋಥೆರಪಿ, ಅಂಡಾಟರ್ ಮಸಾಜ್, ಸೋನಾ ಮತ್ತು ಸ್ವೀಮ್‌ಬಾತ್, ಡುಶ್ ಪ್ಯಾಕ್, ಮ್ಯಾಗ್ನೆಟೊ ಥೆರಪಿ, ಫಿಜಿಯೋಥೆರಪಿ, ಅಕ್ಯುಪಂಕ್ಚರ್ & ಅಕ್ಯುಪ್ರೆಶರ್, ವ್ಯಾಯಾಮ ಚಿಕಿತ್ಸೆ, ಆಹಾರ ಚಿಕಿತ್ಸೆ, ಮಣ್ಣು ಚಿಕಿತ್ಸೆಯಂಥ ಸೌಲಭ್ಯಗಳು ಲಭ್ಯವಿದ್ದು, ವಿಶಾಲವಾದ, ಗಾಳಿ ಬೆಳಕು ಸಮೃದ್ಧವಾದ ಯೋಗ ಸಭಾಂಗಣ, ಸ್ವಚ್ಛ ಮತ್ತು ಸುರಕ್ಷಿತ ಕ್ರಿಯಾ ಕೊಠಡಿಗಳು ಲಭ್ಯವಿದೆ.
ಸಮಗ್ರ ಹಾಗೂ ಔಷಧರಹಿತ ಚಿಕಿತ್ಸೆ, ಅನುಭವ ಸಂಪನ್ನ ವೈದ್ಯರು ಮತ್ತು ಚಿಕಿತ್ಸಕರ ಸೇವೆ, ವೈಯಕ್ತಿಕ ಚಿಕಿತ್ಸಾ ಯೋಜನೆಗಳು, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ, ಚೇತರಿಕೆ ಮತ್ತು ಪುನಶ್ಚತನಕ್ಕೆ ಪೂರಕ ಪ್ರಶಾಂತ ವಾತಾವರಣದಂಥ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಕೇಂದ್ರಕ್ಕೆ ಆಗಮಿಸುವ ಅತಿಥಿಗಳಿಗೆ ಪಿಕಪ್ ಮತ್ತು ಡ್ರಾಪ್ ವ್ಯವಸ್ಥೆಯೂ ಇರುತ್ತದೆ ಎಂದರು.
ಸAಸ್ಥೆಯ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
WhatsApp Group Join Now
Telegram Group Join Now
Share This Article